Sunday, 11th May 2025

ಜನಹಿತ ಕುರಿತು ಯಾರಾದರೂ ಆಣೆ ಪ್ರಮಾಣ ಮಾಡಿದ್ದಾರಾ?

ಜನಸಾಮಾನ್ಯರ ಬದುಕಿನಲ್ಲಿ ಹಲವು ಸಲ ಆಣೆ, ಪ್ರಮಾಣದ ಮೊರೆ ಹೋಗುವುದನ್ನು ಕಾಣಬಹುದು. ವಿದ್ಯಾಾರ್ಥಿ ಜೀವನದಲ್ಲಿ ಗಾಡ್‌ಪ್ರಾಾಮಿಸ್, ಮದರ್ ಪ್ರಾಾಮಿಸ್ ಬಳಕೆ ಕಡಿಮೆಏನಿಲ್ಲ. ಆಟವಾಡುವಾಗಲೋ ಗುಂಪಿನಲ್ಲಿ ಚರ್ಚೆಯ ವೇಳೆ ಸತ್ಯ-ಸುಳ್ಳಿಿನ ಸಂದರ್ಭದಲ್ಲಿ ‘ಇವರೆಡು’ ಪ್ರವೇಶಿಸುತ್ತವೆ.

ಆದರೆ ಜನಪ್ರತಿನಿಧಿಗಳಾಗಿ ಕರ್ತವ್ಯ ನಿರ್ವಹಿಸುವ ರಾಜಕಾರಣಿಗಳು (ಎಲ್ಲರೂ ಅಲ್ಲ) ವಿಶೇಷವಾಗಿ ಅಧಿಕಾರಸ್ಥರು ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಗಂಭೀರ ವಿಚಾರಗಳು ಪ್ರಸ್ತಾಾಪವಾಗುತ್ತದೆ. ತಾವು ‘ಶುದ್ಧರು’, ನೀವು ಸುಳ್ಳಿಿನ ಸರಮಾಲೆ ಪೋಣಿಸುತ್ತೀರಿ ಎಂದು ಆರೋಪಿಸಿದಾಗ ಈ ಇಬ್ಬರಲ್ಲಿ ಒಬ್ಬರು ತಾವು ನಂಬಿರುವ ದೇವರ ಮುಂದೆ ಆಣೆ-ಪ್ರಮಾಣಕ ಮೊರೆ ಹೋಗುತ್ತಾಾರೆ. ತಾವೇನು ಕಮ್ಮಿಿಯಿಲ್ಲ ಎಂದು ಉಳಿದ ‘ಗಣ್ಯ’ವ್ಯಕ್ತಿಿ ಸವಾಲು ಸ್ವೀಕರಿಸುತ್ತಾಾರೆ. ಇಂಥ ಘಟನೆಗಳು ಆಗ್ಗೆೆ ನಡೆಯುವುದನ್ನು ಜನಸಾಮಾನ್ಯರು ನೋಡಿರುತ್ತಾಾರೆ. ಹಲವರು ಇದನ್ನು ತಮಾಷೆಯಾಗಿಯೂ ತೆಗೆದುಕೊಳ್ಳುತ್ತಾಾರೆ.

ಈ ಹಿಂದೆ ಮುಖ್ಯಮಂತ್ರಿಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಹಾಗೂ ಪ್ರತಿಪಕ್ಷದಲ್ಲಿದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಾಮಿಯವರು ‘ಪಂಥಾಹ್ವಾಾನ’ದಿಂದಾಗಿ ಧರ್ಮಸ್ಥಳಕ್ಕೆೆ ಹೋಗಿದ್ದರು. ಆದರೆ ಉದ್ದೇಶ ಸಫಲವಾಗಲಿಲ್ಲ. ಈ ಹಿಂದೆ ತೀರ್ಮಾನಿಸಿದಂತೆ ಆಣೆ ಪ್ರಮಾಣಕ್ಕೆೆ ಮಾಜಿ ಸಚಿವರಾದ ಎಚ್. ವಿಶ್ವನಾಥ್ ಮತ್ತು ಸಾ.ರಾ.ಮಹೇಶ್ ಅವರು ಗುರುವಾರ ಮೈಸೂರಿನ ಚಾಮುಂಡೇಶ್ವರಿ ಸನ್ನಿಿಧಿಗೆ ಬಂದರಾದರೂ ಬೆಟ್ಟದ ತಾಯಿಯ ಮುಂದೆ ತಮ್ಮ ನಿರ್ಧಾರವನ್ನು ಕಾರ್ಯರೂಪಕ್ಕೆೆ ತರಲಿಲ್ಲ. ಇದಕ್ಕೆೆ ಸೂಕ್ತ ಉತ್ತರವನ್ನೂ ಕೊಡಲಿಲ್ಲ.

ಅವರಿಬ್ಬರು ಮುಖಾಮುಖಿ ಭೇಟಿಯೇ ಆಗಲಿಲ್ಲ. ವಿಶ್ವನಾಥ್ ಅವರ ವಿರುದ್ಧ ಸಾ.ರಾ. ಗಂಭೀರ ಆರೋಪ ಮಾಡಿದ್ದರು. ಇದೇ ‘ಶಪಥ’ಕ್ಕೆೆ ಕಾರಣವಾಯಿತಾದರೂ ಫಲಿತಾಂಶ ಮಾತ್ರ ಸೊನ್ನೆೆ. ಬಂದಿದ್ದಕ್ಕೆೆ ದೇವಿಯ ದರ್ಶನ ಮಾಡಿ ಹೊರನಡೆದರು. ಅವರಿಬ್ಬರೇನೋ ಗುಡಿಗೆ ಬಂದು ಹೋದರು. ಇದರ ಪರಿಣಾಮ ಎದುರಿಸಿದವರು ಮಾತ್ರ ಸಾರ್ವಜನಿಕರು. ಈ‘ಗಣ್ಯ’ರಿಬ್ಬರು ಬಂದಿದ್ದರಿಂದ ಸುಮಾರು ಹೊತ್ತು ದೇವಿಯ ದರ್ಶನಕ್ಕೆೆ ಕಾಯುವಂತಾಯಿತು ಎಂಬುದು ಭಕ್ತರ ದೂರು.

ಈ ಇಬ್ಬರ ಸವಾಲಿಗೆ ಪ್ರತಿಕ್ರಿಿಯಿಸಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಾಮಿ ಈ ‘ಪ್ರಸಂಗ’ ನಡೆಯುವ ಅಗತ್ಯವಿರಲಿಲ್ಲ ಎಂದರೆ, ವೈಯಕ್ತಿಿಕ ಆಣೆ ಪ್ರಮಾಣಗಳಿಗೆ ದೇವಸ್ಥಾಾನವನ್ನು ಬಳಕೆ ಮಾಡಿಕೊಳ್ಳಬಾರದು. ಇದರಿಂದ ಇಬ್ಬರಿಗೂ ಒಳ್ಳೆೆಯದಾಗುವುದಿಲ್ಲ ಎನ್ನುತ್ತಾಾರೆ ದೇಗುಲ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿಿತ್. 25 ಕೋಟಿ ರು.ಗಳಿಗೆ ಮಾರಾಟವಾಗಿದ್ದೇನೆ ಎಂದು ಆರೋಪಿಸಿರುವ ಮಹೇಶ್, ನನ್ನನ್ನು ಖರೀದಿಸಿರುವ ಭೂಪನನ್ನು ಕರೆತರುವಂತೆ ಸವಾಲು ಹಾಕಿದ್ದೆೆ.

ಆತನನ್ನು ನೋಡಲು ಬಂದಿದ್ದೇನೆ ಎಂಬುದು ವಿಶ್ವನಾಥ್ ಆವರ ವಾದ. ‘ಪಂಥಾಹ್ವಾಾನ’ ಕರೆದವರು ಮಹೇಶ್ ಎಂದು ಆರೋಪಿಸಿದರೆ, ಆಣೆ ಮಾಡುವಂತೆ ಕರೆದ ಕಾರಣ ಬಂದಿದ್ದೇನೆ ಎಂದವರು ಮಹೇಶ್. ಜನರಿಂದ ಆರಿಸಿಬರುವ ರಾಜಕಾರಣಿಗಳು ದೇವರ ಹೆಸರಲ್ಲಿ ಇಂಥ ‘ಪಂಥಾಹ್ವಾಾನ’ ಮಾಡುವ ಚಾಳಿ ಬೆಳೆಸಿಕೊಳ್ಳುವುದು ತರವಲ್ಲ ಎನ್ನುವ ಅಭಿಪ್ರಾಾಯ ಅನೇಕ ಭಕ್ತರದ್ದು. ರಾಜಕಾರಣಿಗಳ ಬಗ್ಗೆೆ ಜನರಿಗಿರುವ ಸದಭಿಪ್ರಾಾಯ ಕಡಿಮೆಯಾಗಿದೆ ಎಂದು ಹಲವು ರಾಜಕಾರಣಿಗಳೆ ಆಗಾಗ್ಗೆೆ ಹೇಳುತ್ತಾಾರೆ. ‘ಇವರು’ ಜನಪರ ಕೆಲಸದ ಬಗ್ಗೆೆ ಎಂದಾದರೂ ಆಣೆ ಮಾಡಿದ್ದಾಾರಾ? ಆಯ್ಕೆೆ ಮಾಡುವ ಪ್ರಜೆಗಳೇ ದೇವರೆಂದು ತಿಳಿಯಬೇಕಾಗಿದೆ ರಾಜಕಾರಣಿಗಳು. ಅವರು ಮೆಚ್ಚುವ ರೀತಿ ಕೆಲಸಮಾಡಿ. ಇನ್ನಾಾದರೂ ಸಾಕು ಮಾಡಿ ಆಣೆ-ಪ್ರಮಾಣದ ಪ್ರಹಸನವನ್ನ.

Leave a Reply

Your email address will not be published. Required fields are marked *