ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್
ಟೊಯೋಟಾ ಮೋಟಾರ್ ಕಾರ್ಪೊರೇಷನ್ ಬಗ್ಗೆ ನಾನು ಕೇಳಿದ ಮತ್ತಷ್ಟು ಸಂಗತಿಗಳನ್ನು ಇಲ್ಲಿ ಪ್ರಸ್ತಾಪಿಸ ಬಹುದು. ಜಪಾನ್ ಅಷ್ಟೇ ಅಲ್ಲ, ಜಾಗತಿಕ ಉದ್ಯಮಗಳಲ್ಲಿ ಪ್ರತಿಷ್ಠಿತ ಸಂಸ್ಥೆಯಾಗಿರುವ ಟೊಯೋಟಾ ತನ್ನ ನಿರ್ವಹಣಾ ತಂತ್ರಗಳು ಮತ್ತು ನಿರಂತರ ಸುಧಾರಣೆಯ ತತ್ವಗಳಿಂದ ಅಸಾಧಾರಣ ಯಶಸ್ಸನ್ನು ಗಳಿಸಿರುವುದು ಸರ್ವವಿದಿತ. ೧೯೮೦ರ ದಶಕದಲ್ಲಿ, ಟೊಯೋಟಾದ ಕಾರ್ಖಾನೆಯಲ್ಲಿ ಒಂದು ಘಟನೆ ಸಂಭವಿಸಿತು.
ಕಾರಿನ ಚಕ್ರಗಳನ್ನು ಅಳವಡಿಸುವ ಪ್ರಕ್ರಿಯೆಯಲ್ಲಿ ನಿರಂತರವಾಗಿ ವಿಳಂಬವಾಗುತ್ತಿತ್ತು. ಈ ಸಮಸ್ಯೆಯನ್ನು ವಿವರವಾಗಿ ಪರಿಶೀಲಿಸಲು ಟೊಯೋಟಾ 5 Why’s ವಿಧಾನವನ್ನು ಬಳಸಿತು. ಚಕ್ರ ಅಳವಡಿಸುವ ಸಮಯ ಹೆಚ್ಚು ತೆಗೆದುಕೊಳ್ಳುತ್ತಿದೆ ಏಕೆ? ಯಂತ್ರಗಳು ಸರಿಯಾದ ದಾರಿಗೆ ಬಂದಿಲ್ಲ ಏಕೆ? ಯಂತ್ರದ ನಿರ್ವಹಣೆ ನಿಯತವಾಗಿಲ್ಲ ಏಕೆ? ನಿರ್ವಹಣೆಗಾಗಿ ನಿಗದಿತ ಕಾಲಮಿತಿ ಇಲ್ಲ ಏಕೆ? ನಿರ್ವಹಣಾ ಯೋಜನೆಯನ್ನು ಸರಿಯಾಗಿ ರೂಪಿಸಿಲ್ಲ ಏಕೆ? ಈ ಪ್ರಶ್ನೋತ್ತರದ ಮೂಲಕ, ಕಂಪನಿಯು ತುರ್ತು ನಿರ್ವಹಣಾ ವೇಳಾಪಟ್ಟಿಯನ್ನು ಸಿದ್ಧಪಡಿಸಿ, ಪ್ರತಿದಿನ ಯಂತ್ರಗಳನ್ನು ಪರಿಶೀಲಿಸುವ ನಿಯಮವನ್ನು ಜಾರಿಗೊಳಿಸಿತು.
ಇದರ ಪರಿಣಾಮವಾಗಿ ಚಕ್ರ ಅಳವಡಿಸುವ ಸಮಯವನ್ನು ಶೇ.೫೦ ಕಡಿಮೆ ಮಾಡಿತು. ಒಮ್ಮೆ ಟೊಯೋಟಾ ಕಾರ್ಖಾನೆಯಲ್ಲಿ ಪೂರೈಕೆದಾರರಿಂದ ಒಂದು ಪ್ರಮುಖ ಭಾಗದ ಸರಬರಾಜು ವಿಳಂಬವಾಯಿತು. ಇದು ಕಾರು ಉತ್ಪಾದನೆಯಲ್ಲಿ ತೊಂದರೆ ಉಂಟುಮಾಡುವ ಸಾಧ್ಯತೆಯಿತ್ತು. ಸಮಸ್ಯೆಯನ್ನು ತಕ್ಷಣ ಗಮನಿಸಿದ ನಿರ್ವಹಣಾ ತಂಡ, ಜ-ಇನ್-ಟೈಮ ತಂತ್ರವನ್ನು ಬಳಸಿ ಬದಲಿಗೆ ಸ್ಥಳೀಯ ಪೂರೈಕೆದಾರರೊಂದಿಗೆ ಸಹಕಾರ ನಡೆಸಿತು. ಇದರ ಪಾಠವೇನು? ಈ ಘಟನೆಯಿಂದ, ಟೊಯೋಟಾ ತನ್ನ ಪೂರೈಕೆದಾರರ ಜಾಲವನ್ನು ವೃದ್ಧಿಗೊಳಿಸಿತು. ಈ ತ್ವರಿತ ತೀರ್ಮಾನ ತೆಗೆದುಕೊಳ್ಳುವ ಶಕ್ತಿ, ವ್ಯರ್ಥವನ್ನು ಕಡಿಮೆ ಮಾಡಿ ಕಾರುಗಳನ್ನು ಸಮಯಕ್ಕೆ ಮಾರುಕಟ್ಟೆಗೆ
ಬಿಡುಗಡೆ ಮಾಡಲು ಸಹಾಯ ಮಾಡಿತು.
‘ಸ್ಥಳಕ್ಕೆ ಹೋಗಿ ನೋಡುವುದು’ ಆ ಸಂಸ್ಥೆಯ ಇನ್ನೊಂದು ಕಾರ್ಯವಿಧಾನ. ಈ ತತ್ವವು ಪ್ರತಿಯೊಬ್ಬ ನಿರ್ವಹಣಾ ಸಿಬ್ಬಂದಿಗೆ ಸ್ಥಳಕ್ಕೆ ಹೋಗಿ ಸತ್ಯದ ಸಮೀಕ್ಷೆ ಮಾಡಲು ಪ್ರೋತ್ಸಾಹಿಸುತ್ತದೆ. ಒಮ್ಮೆ ಟೊಯೋಟಾದ ಕಾರ್ಯ ನಿರ್ವಹಣೆ ವಿಭಾಗದ ಮುಖ್ಯಸ್ಥನು ಕಾರ್ಖಾನೆಗೆ ಭೇಟಿ ನೀಡಿದ. ಅಲ್ಲಿರುವ ಉದ್ಯೋಗಿಗಳು ಹೊಸ ಎಂಜಿನ್ ಅಳವಡಿಸುವಲ್ಲಿ ತೊಂದರೆ ಅನುಭವಿಸುತ್ತಿದ್ದರು. ಅವರು ನೇರವಾಗಿ ಸ್ಥಳಕ್ಕೆ ಹೋಗಿ ಎಂಜಿನ್ ಅಳವಡಿಕೆ ತಂತ್ರವನ್ನು ವೀಕ್ಷಿಸಿದರು. ಅವರು ತಕ್ಷಣವೇ ಒಂದು ಸರಳ ಯಂತ್ರೋಪಕರಣವನ್ನು ವಿನ್ಯಾಸಗೊಳಿಸುವ ಸೂಚನೆ ನೀಡಿದರು. ಇದರ ಫಲವಾಗಿ ಸ್ಥಳದಲ್ಲಿಯೇ ಸಮಸ್ಯೆ ಬಗೆಹರಿಯಿತು. ಉತ್ಪಾದನಾ ದಕ್ಷತೆಯನ್ನು ಶೇ. ೩೦ ಹೆಚ್ಚಿಸಿತು.
ಒಮ್ಮೆ ಟೊಯೋಟಾದ ಕಾರ್ಖಾನೆಯಲ್ಲಿ ಒಂದು ಚಕ್ರದ ಬೋಲ್ಟ ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಇದರಿಂದ, ಕಾರು ಅಂದವಾಗಿ ಕಾಣುತ್ತಿರಲಿಲ್ಲ. ಈ ಸಮಸ್ಯೆಯನ್ನು ಕಂಡ ಕಾರ್ಮಿಕನೊಬ್ಬ ತಕ್ಷಣ ಯಂತ್ರವನ್ನು
ನಿಲ್ಲಿಸಿ ಮ್ಯಾನೇಜರ್ಗೆ ತಿಳಿಸಿದ. ಇದರಿಂದ ದೋಷವನ್ನು ಯಾರು ಬೇಕಾದರೂ ಕಂಡುಹಿಡಿಯಬಹುದು ಎಂಬ ತತ್ವವನ್ನು ಸಾರಿದಂತಾಯಿತು. ಟೊಯೋಟಾ ಮಾರುಕಟ್ಟೆಗೆ ಕಳಿಸುವ ಪ್ರತಿಯೊಂದು ಕಾರು ನೂರಕ್ಕೆ ನೂರರಷ್ಟು ದೋಷರಹಿತವಾಗಿರುತ್ತದೆ. ಟೊಯೋಟಾದಲ್ಲಿ ಕೆಲಸ ಮಾಡುವ ಕಾರ್ಮಿಕನೊಬ್ಬ, ತನ್ನ ಕೆಲಸದ ಸಮಯದಲ್ಲಿ ಪರ್ಯಾಯ ಮಾರ್ಗವನ್ನು ಪ್ರಸ್ತಾಪಿಸಬಹುದು. ಇದರಿಂದ ಒಂದು ಪ್ರಕ್ರಿಯೆಯಲ್ಲಿ 10 ನಿಮಿಷ ಗಳಷ್ಟು ಸಮಯ ಉಳಿತಾಯ ಮಾಡಬಹುದು. ಟೊಯೋಟಾದ ನಿರ್ವಹಣಾ ತಂಡ ಈ ಸಲಹೆಯನ್ನು ತಕ್ಷಣವೇ ಅನುಸರಿಸಿ, ಆ ಪ್ರಕ್ರಿಯೆಯನ್ನು ಸುಧಾರಿಸುತ್ತದೆ. ಇದು ಸಿಬ್ಬಂದಿ ಸೃಜನಶೀಲತೆಯನ್ನು ಹೆಚ್ಚಿಸಲು ಸಹಾಯಕ ವಾಗಿದೆ.
೨೦೦೦ರಲ್ಲಿ ಟೊಯೋಟಾ ಹೈಬ್ರಿಡ್ ಕಾರುಗಳ ಉತ್ಪಾದನೆಯನ್ನು ಆರಂಭಿಸಲು ನಿರ್ಧರಿಸಿತು. ಈ ಯೋಜನೆ ಯನ್ನು ತ್ವರಿತಗೊಳಿಸಲು, ಟೊಯೋಟಾ ತಕ್ಷಣವೇ ತಂಡಗಳನ್ನು ವಿಭಜಿಸಿ, ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಉತ್ಪಾದನಾ ಘಟಕಗಳ ಮಧ್ಯೆ ಸಮನ್ವಯ ಸಾಽಸಿತು. ಪರಿಣಾಮವಾಗಿ, ಪ್ರಪಂಚದ ಮೊದಲ ಹೈಬ್ರಿಡ್ ಕಾರು ಪ್ರಿಯಸ್ ವಿಶ್ವದೆಡೆ ಯಶಸ್ವಿಯಾಯಿತು, ಇದರಿಂದಾಗಿ ಹಸಿರು ತಂತ್ರeನದಲ್ಲಿ ಟೊಯೋಟಾ ಮುಂಚೂಣಿಗೆ ಬಂದಿತು.
ಇದನ್ನೂ ಓದಿ : @vishweshwarbhat