Saturday, 10th May 2025

ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಕರ್ನಾಟಕವೇ ಮೂಲ

ಯೋಗ ದಿನಾಚರಣೆ ನಿಮಿತ್ತ ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಡಾ.ಸುಬ್ಬು ಬಯ್ಯಾ ಅವರಿಂದ ಉಪನ್ಯಾಸ

ವಿಶ್ವವಾಣಿ ಕ್ಲಬ್‌ಹೌಸ್ ಬೆಂಗಳೂರು

ಮಂಗಳವಾರ ವಿಶ್ವ ಯೋಗ ದಿನಾಚರಣೆ. ಯೋಗದಿಂದ ರೋಗವನ್ನು ದೂರವಿಡ ಬಹುದು ಎಂಬ ಮಾತಿದೆ. ಭಾರತೀಯ ಪರಂಪರೆಯ ಯೋಗ ಇಂದು ವಿಶ್ವಮಾನ್ಯ ವಾಗಿದೆ. ಯೋಗಕ್ಕೆ ತನ್ನದೇ ಆದ ಪರಂಪರೆ, ಮಹತ್ವಗಳಿವೆ. ಯೋಗ ವಿಶ್ವಮಟ್ಟದಲ್ಲಿ
ಜನಪ್ರಿಯಗೊಳ್ಳಲು ಕರ್ನಾಟಕದ ಪಾತ್ರ ಅತ್ಯಂತ ಮಹತ್ವದ್ದು. ಈ ಎಲ್ಲ ವಿಚಾರಗಳ ಬಗ್ಗೆ ಯೋಗಾಚಾಕ್ಯ ಡಾ.ಸುಬ್ಬು ಬಯ್ಯಾ ಅವರು ಮಾಹಿತಿ ನೀಡಿದ್ದಾರೆ.

ವಿಶ್ವವಾಣಿ ಕ್ಲಬ್‌ಹೌಸ್ ಏರ್ಪಡಿಸಿದ್ದ ‘ವಿಶ್ವ ಯೋಗ ದಿನ: ಯೋಗ-ಆಧ್ಯಾತ್ಮ’ ಕುರಿತು ಅವರು ಅರಿವಿನ ಉಪನ್ಯಾಸ ನೀಡಿ ದರು. ಇಂದು ವಿಶ್ವಮಾನ್ಯವಾಗಿರುವ ಯೋಗದ ಬೀಜ ಪ್ರಥಮವಾಗಿ ಕರ್ನಾಟಕದಿಂದಲೇ ಹುಟ್ಟಿದ್ದು. ವಿಶ್ವ ಯೋಗ
ದಿನ ವನ್ನು ಸ್ಥಾಪಿಸಲು ಆಧುನಿಕ ಭಾರತದಲ್ಲಿರುವ ಯೋಗ ಗುರುಗಳು, ಅದರಲ್ಲೂ ವಿಶೇಷವಾಗಿ ಯೋಗದ ಭೀಷ್ಮ ಪಿತಾಮಹ ಎಂದೇ ಕರೆಯುವ  ಡಾ.ಬಿ.ಕೆ.ಎಸ್. ಅಯ್ಯಂಗಾರ್, ಯೋಗ ಮಹರ್ಷಿ ಬಾಬಾ ರಾಮ್‌ದೇವ್, ರವಿಶಂಕರ ಗುರೂಜಿ, ಯೋಗ ಸಂಸ್ಥೆಗಳಾದ ಮಹಾರಾಷ್ಟ್ರದ ಯೋಗಾ ಕೈವಲ್ಯ ಧಾಮ, ಯೋಗ ಇನ್‌ಸ್ಟಿಟೂಟ್ ಮುಂಬೈ ಲೋನಾವಾಲ ಸೇರಿದಂತೆ ಅನೇಕರು ಸೇರಿ ನರೇಂದ್ರ ಮೋದಿ ಎಂಬ ವ್ಯಕ್ತಿಗೆ ಶಕ್ತಿ ತುಂಬುವ ಮೂಲಕ ವಿಶ್ವ ಯೋಗದಿನ ಆರಂಭಿಸಲು ಸಹಕರಿಸಿದರು ಎಂದರು.

ರವಿಶಂಕರ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್‌ನಲ್ಲಿ ಎಲ್ಲ ಯೋಗಗುರುಗಳು ಸೇರಿ ಯೋಗದ ಬಗ್ಗೆ ಚರ್ಚಿಸುತ್ತಿದ್ದಾಗ ವಿಶ್ವ
ಯೋಗ ದಿನಾಚರಣೆಯ ಪ್ರಸ್ತಾಪ ಬಂತು. ಪ್ರತಿದಿನ ಮಾಡಬೇಕಾದ ಯೋಗಕ್ಕೆ ಒಂದು ದಿನ ಸಾಕೇ ಎಂಬ ಪ್ರಶ್ನೆ ಆಗ ಎದುರಾ ಯಿತು. ಈ ವೇಳೆ, ವಿಶ್ವದೆಲ್ಲೆಡೆ ಯೋಗದ ಬಗ್ಗೆ ಜಾಗೃತಿ ಮೂಡಿಸಲು ಒಂದು ದಿನ ನಿಗದಿ ಮಾಡಬೇಕು ಎಂಬ ಸಂಕಲ್ಪ ದೊಂದಿಗೆ ಯೋಗ ದಿನ ಆಚರಿಸಬೇಕು. ಆ ಮೂಲಕ ಎಲ್ಲರನ್ನೂ ಒಟ್ಟು ಸೇರಿಸಬೇಕು ಎಂದು ನಿರ್ಧರಿಸಲಾಯಿತು. ದಿನ
ನಿಗದಿಪಡಿಸುವ ವಿಚಾರ ಬಂದಾಗ, ಅದು ವ್ಯಕ್ತಿ ಸಂಬಂಧವಾಗದೆ, ತತ್ವ ಸಂದರ್ಭವಾಗಿರಬೇಕು ಎಂದು ಯೋಚಿಸಲಾಯಿತು.

ಯೋಗದಲ್ಲಿ ೮೪ ಲಕ್ಷ ಆಸನಗಳಿದ್ದು, ಎಲ್ಲವೂ ಪ್ರಕೃತಿ ಸಂಬಂಧವಾದುದು. ಆ ಪ್ರಕೃತಿಗೆ ಶಕ್ತಿ ತುಂಬುವವನು ಸೂರ್ಯದೇವ. ಅಂತಹ ಸೂರ್ಯ ಉತ್ತರಾಯಣದಿಂದ ದಕ್ಷಿಣಾಯಕ್ಕೆ ತೆರಳುವ ದಿನ ಜೂ.೨೧ ಆಗಿದ್ದು, ಆ ದಿನವನ್ನು ಯೋಗ ದಿನ ಎಂದು ಆಚರಿಸಲು ತೀರ್ಮಾನಿಸಲಾಯಿತು. ಅದರಂತೆ ೨೦೧೧ರಲ್ಲಿ ಎಲ್ಲ ಗುರುಗಳು, ಸಂಸ್ಥೆಗಳು ಸೇರಿ ಈ ಕುರಿತು ಪ್ರಸ್ತಾವನೆ ಸಿದ್ಧ ಪಡಿಸಿ ವಿಶ್ವಸಂಸ್ಥೆಗೆ ಸಲ್ಲಿಸಲಾಯಿತು ಎಂದರು.

ಆದರೆ, ಇದಕ್ಕೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಅಸುರರನ್ನು ಸಂಹರಿಸಲು ತಾಯಿ ಚಾಮುಂಡೇಶ್ವರಿ ಬಂದಂತೆ ಇದಕ್ಕೂ ಒಬ್ಬ
ಯೋಗಿ ಬರಬೇಕಿತ್ತೋ ಏನೋ. ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಅವರು ವಿಶ್ವಸಂಸ್ಥೆ ಮೇಲೆ ಒತ್ತಡ ತಂದು ಅಂತಾ ರಾಷ್ಟ್ರೀಯ ಯೋಗದಿನ ಘೋಷಿಸುವಂತೆ ಮಾಡಿದರು. ಇದಕ್ಕೆ ೧೮೭ ರಾಷ್ಟ್ರಗಳು ಒಪ್ಪಿಗೆ ಸೂಚಿಸಿ ಸಹಿಹಾಕಿದವು ಎಂದರು.

ಯಾವ ಯೋಗ ಮಾಡಬೇಕು: ವಿಶ್ವ ಯೋಗ ದಿನಾಚರಣೆಯಂದು ಯಾವ ಯೋಗಾಭ್ಯಾಸ ಮಾಡಬೇಕು ಎಂದು ಪ್ರಶ್ನೆ
ಮೂಡಿದಾಗ, ಎಲ್ಲ ಯೋಗ ಕೇಂದ್ರಗಳನ್ನು ಸಂಪರ್ಕಿಸಿದ ಆಯುಷ್ ಮಂತ್ರಾಲಯ, ಒಂದು ಸಮಿತಿ ರಚಿಸಿತು. ಅದರಲ್ಲಿ ೨೧ ಯೋಗ ತಜ್ಞರಿದ್ದರು. ಎಲ್ಲರೂ ಸೇರಿ ೩೫ ನಿಮಿಷದ ಸೂಕ್ಷ್ಮ ವ್ಯಾಯಾಮ , ೨೧ ಆಸನ, ಪ್ರಣಾಯಾಮ, ಧ್ಯಾನ ಎಂಬ ಸಾಮಾನ್ಯ ಯೋಗ ಶಿಷ್ಟಾಚಾರವನ್ನು ಅಂತಿಮಗೊಳಿಸಿದರು. ಮುಂದಿನ ದಿನಗಳಲ್ಲಿ ಅದನ್ನು ೪೫ ನಿಮಿಷಕ್ಕೆ, ನಂತರದಲ್ಲಿ ಒಂದು
ಗಂಟೆಗೆ ಹೆಚ್ಚಿಸಲಾಯಿತು ಎಂದು ಮಾಹಿತಿ ನೀಡಿದರು.

ಯೋಗ ನಗರಿ ಮೈಸೂರು
ಆಧುನಿಕ ಯೊಗ ಪರಂಪರೆಗೆ ಚಾಲನೆ ನೀಡಿದ ನಗರ ಮೈಸೂರು. ತಿರುಮಲ ಕೃಷ್ಣಮಾಚಾರ್ಯರು ಮೊದಲ ಬಾರಿಗೆ ಅರಮನೆ ಯಲ್ಲಿ ಯೋಗ ಶಾಲೆ ಆರಂಭಿಸಿದ್ದರು. ಮೊದಲ ವಿದೇಶಿ ಮಹಿಳೆ ಇಂದ್ರಾದೇವಿ ಸೇರಿದಂತೆ ಮೈಸೂರಿನ ಜನತೆಗೆ ಪಾರಂಪರಿಕ ಯೋಗ ಹೇಳಿಕೊಟ್ಟರು. ಸ್ವಾತಂತ್ರ್ಯ ನಂತರ ಅವರು ಚೆನ್ನೈಗೆ ತೆರಳಿ ಯೋಗ ಪ್ರಚಾರ ಮಾಡಿದರು. ಅವರ ಶಿಷ್ಯ ಪಟ್ಟಾಭಿ ಜೋಯಿಸ್ ಮೈಸೂರಿನಲ್ಲಿ ಉಳಿದು ಯೋಗ ಪ್ರಚಾರದಲ್ಲಿ ತೊಡಗಿಕೊಂಡರು.

ಇಂತಹ ಯೋಗಾಭ್ಯಾಸಕ್ಕೆ ನಾಂದಿ ಹಾಡಿದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಈ ಬಾರಿ ನಡೆಯುತ್ತಿರುವಯೋಗ ದಿನಾಚರಣೆ ಯನ್ನು ‘ಮಾನವೀಯತೆಗಾಗಿ ಯೋಗ’ ಎಂಬ ಘೋಷವಾಕ್ಯದೊಂದಿಗೆ ಆಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

***

ವಿಶ್ವಕ್ಕೆ ಯೋಗ ದಿನಕ್ಕೆ ಕರುನಾಡಿನ ಯೋಗ ದಾನ ಇದು ೮ನೇ ವಿಶ್ವಯೋಗ ದಿನಚರಣೆ ಯೋಗ ಒಂದೇ, ಆದರೆ ವಿಧಾನಗಳು ಬೇರೆ ಬೇರೆ ಯೋಗ ಮಾಡುವ ಸ್ಥಳ, ಶರೀರ, ಮನಸ್ಸು ಸ್ವಚ್ಛವಾಗಿರಬೇಕು ಯೋಗದಲ್ಲಿ ಅಷ್ಟಾಂಗ ಯೋಗ ತುಂಬಾ ವಿಶೇಷ
ಜೀವಾತ್ಮ ಮತ್ತು ಪರಮಾತ್ಮನ ಬೆಸುಗೆ ಆಧ್ಯಾತ್ಮ ಯೋಗದ ಮುಖ್ಯ ಉದ್ದೇಶ ಆಧುನಿಕಯೋಗವನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ತಿರುಮಲೈ ಕೃಷ್ಣಾಚಾರ್ಯರಿಗೆ ಸಲ್ಲುತ್ತದೆ. ೧೯೩೦ರಲ್ಲಿ ಅವರು ಈ ಸಾಧನೆ ಮಾಡಿದರು. ಮೊದಲ ಬಾರಿಗೆ ದೆಹಲಿಯ ರಾಜ್‌ಪಥ್‌ನಲ್ಲಿ ಅಂತಾರಾಷ್ಟ್ರೀಯ ಯೋಗ ದಿನದಂದು ೮೪ ರಾಷ್ಟ್ರಗಳ ಪ್ರತಿನಿಧಿಗಳು ಸೇರಿ ೩೬ ಸಾವಿರ ಮಂದಿ ಭಾಗವಹಿಸಿ ದ್ದರು.

***

ಭಾರತವು ಇಡೀ ವಿಶ್ವಕ್ಕೆ ನೀಡಿದ ದೊಡ್ಡ ಕಾಣಿಕೆಯೋಗ. ೧೮೧ ದೇಶದಲ್ಲಿ ಜೂ.೨೧ ರಂದು ಯೋಗ ದಿನಾಚರಣೆಗೆ ಸಿದ್ಧತೆ
ಮಾಡಿಕೊಳ್ಳಲಾಗಿದೆ. ಭಾರತ ಹಚ್ಚಿದ ಯೋಗದ ದೀಪ ಇಂದು ಪ್ರಪಂಚದಾದ್ಯಂತ ಬೆಳಗುತ್ತಿದೆ.

-ವಿಶ್ವೇಶ್ವರ ಭಟ್ ಪ್ರಧಾನ ಸಂಪಾದಕರು, ವಿಶ್ವವಾಣಿ