ವಿಶ್ವವಾಣಿ ಕ್ಲಬ್ ಹೌಸ್ – ೨೩೨
ತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಮಹಿಳೆ ಮಹತ್ವ, ಗೌರವ, ಕುಂದು ಕೊರತೆ ಕುರಿತು ಅಭಿಪ್ರಾಯ, ಅನುಭವ ಹಂಚಿಕೊಂಡ ಡಾ.ಎಂ.ಬಿ.ಕವಿತಾ, ಡಾ.ಶ್ವೇತಾ, ಡಾ.ವಿಜಯಲಕ್ಷ್ಮಿ ಪುಟ್ಟಿ, ಡಾ.ಗೀತಾ ರಾಮಾನುಜಂ, ಅಮಿತಾ ರವಿಕಿರಣ್
ಬೆಂಗಳೂರು: ‘ಆಕಾಶದ ನೀಲಿಯಲ್ಲಿ, ಚಂದ್ರ ತಾರೆ ತೊಟ್ಟಿಲಲ್ಲಿ ಬೆಳಕನಿಟ್ಟು ತೂಗುವಾಕೆ.. ನಿನಗೆ ಬೇರೆ ಹೆಸರೂ ಬೇಕೆ?
ಸೀ ಎಂದರೆ ಅಷ್ಟೇ ಸಾಕೇ’. ಈ ಹಾಡಿನ ಮೂಲಕ ವಿಶ್ವವಾಣಿ ಕ್ಲಬ್ ಹೌಸ್‌ನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನವನ್ನು ವಿಶೇಷ ಹಾಗು ವಿಭಿನ್ನವಾಗಿ ಆಚರಣೆ ಮಾಡಲಾಯಿತು.
ತಾಯಿಯಾಗಿ ಮಗಳಾಗಿ, ಜೀವನ ಸಂಗಾತಿಯಾಗಿ, ಗೆಳತಿಯಾಗಿ, ಪ್ರೇಯಸಿಯಾಗಿ, ಇಹವಾಗಿ, ಪರವಾಗಿ, ಆದಿಶಕ್ತಿಯಾಗಿ ಪ್ರಪಂಚ ವನ್ನು ಸಲಹುತ್ತಿರುವಾ ಚೇತನ ಸ್ವರೂಪಿ ಹೆಣ್ಣು. ಮಹಿಳೆಯರ ಧಿ ಶಕ್ತಿಯನ್ನು ಅಭಿನಂದಿಸುವ ದಿನವೇ ಮಹಿಳಾ ದಿನಾಚರಣೆ. ಆದರೆ ಈ ಆಚರಣೆ ಏಕೆ ಕೇವಲ ಒಂದು ದಿನ ಮಾತ್ರ ಆಚರಿಸಲಾಗುತ್ತದೆ ಎಂಬ ಪ್ರಶ್ನೆ ಅನೇಕರಲ್ಲಿ ಉದ್ಭವವಾಗುತ್ತದೆ. ನಾವು ನೂರು ಹಾಡು ಕೇಳಿದರೂ, ಆದರಲ್ಲಿ ಯಾವು ದಾದರು ಒಂದು ಹಾಡು ಸದಾ ನೆನಪಿನಲ್ಲಿ ಉಳಿದಿರುವಂತೆ, ಪ್ರತಿ ದಿನ ಹೆಣ್ಣಿಗೆ ಗೌರವ ನೀಡಿದರೂ ಆಚರಣೆಗೆಂದು ಈ ದಿನವನ್ನು ನಿಗದಿ ಮಾಡಲಾಗಿದೆ.
‘ಸಂಪೂರ್ಣ ಅರಿವಿನ ವೇದಿಕೆ ಮಹಿಳೆಯರಿಗೇ ಮೀಸಲು’: ಡಾ.ಎಂ.ಬಿ.ಕವಿತಾ, ಡಾ.ಶ್ವೇತಾ, ಡಾ. ವಿಜಯಲಕ್ಷ್ಮಿ ಪುಟ್ಟಿ, ಡಾ.ಗೀತಾ ರಾಮಾನುಜಂ, ಅಮಿತಾ ರವಿಕಿರಣ್ ವಿಶೇಷ ಅತಿಥಿಗಳಾಗಿ ಭಾಗವಹಿಸಿ, ಹೆಣ್ಣಿನ ಮಹತ್ವ, ಅವಳಿಗೆ ಸಲ್ಲಬೇಕಾದ ಗೌರವ ಮತ್ತು ಆಕೆಯ ಕುಂದು ಕೊರತೆಗಳ ಬಗ್ಗೆ ತಮ್ಮ ಅಭಿಪ್ರಾಯ ಹಾಗೂ ಅನುಭವಗಳನ್ನು ಹಂಚಿಕೊಂಡರು.
ಬಹುತೇಕ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣನ್ನುಎಲ್ಲಿಯೂ ಕೀಳಾಗಿ ಕಂಡಿದ್ದಿಲ್ಲ. ಆದರೆ ಬರಬರುತ್ತಾ ದಾರಿ ತಪ್ಪುತಿ ದ್ದೇವೆ ಎಂದು ಭಾಸವಾಗುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಉತ್ತಮ ಸ್ಥಾನ ಕೊಟ್ಟಿದ್ದರು. ಆದರೆ, ನಮ್ಮ ದೇಶ ವನ್ನು ಬೇರೆಯವರು ಆಳಲು ಆರಂಭಿಸಿದಾಗ, ಗಂಡಸರು ಹೆಣ್ಣಿನ ಅಸುರಕ್ಷತೆ ಗ್ರಹಿಸಿ, ಸುರಕ್ಷತೆಯ ಕಾರಣದಿಂದ ಮನೆಯಲ್ಲಿರಿಸಿ ದ್ದರು.
ಮನಸ್ಮೃತಿಯಲ್ಲಿ ನಾವು ಎಲ್ಲ ರೀತಿಯಲ್ಲೂ ಗಂಡಿನ ಸಮಕ್ಕೇ ಇರಬಹುದು ಎಂದು ಹೇಳಲಾಗಿದೆ. ಆದರೆ, ಎಷ್ಟೇ ಸಮಾನ ರಾಗಿದ್ದರೂ ಹೆಣ್ಣು ಮಕ್ಕಳು ಕೆಲವು ಜೈವಿಕ ವಿಚಾರದ (ಬಯೋಲಾಜಿಕಲ್) ದೃಷ್ಟಿಕೋನದಲ್ಲಿ ಸ್ವಲ್ಪ ವೀಕ್. ಲೈಂಗಿಕ ಅಸುರ ಕ್ಷತೆ, ವರದಕ್ಷಿಣೆ ಚಿಂತನೆಯಿಂದಾಗಿ ಹೆಣ್ಣು ಮಕ್ಕಳ ಸಂತತಿ ಕ್ಷೀಣಿಸುತ್ತ ಬಂದಿತ್ತು. ಆದರೆ, ಇಂದಿನ ದಿನಗಳಲ್ಲಿ ಈ ಚಿಂತನೆ ಕಡಿಮೆಯಾಗುತ್ತಿದೆ. ಅದು ಒಳ್ಳೆಯ ವಿಚಾರ. ಹೆಣ್ಣನ್ನು ಈಗಿನ ಸಮಾಜ ಯಾವ ವಿಚಾರದಲ್ಲೂ ಕಟ್ಟಿಹಾಕಿಲ್ಲ. ಹೆಣ್ಣು ಮಗು ಬೇಡ ಎಂದು ಹೇಳುವುದನ್ನು ನನ್ನ ಬಳಗದಲ್ಲಿ ಯಾರನ್ನೂ ನೋಡಿಲ್ಲ.
ಆದರೆ, ವೈದ್ಯರಾಗಿ ಗಮನಿಸಿದಾಗ, ಹೆಣ್ಣು ಮಗು ಹುಟ್ಟಿದಾಗ ಕೆಲವು ನಿಬಂಧನೆಗಳನ್ನು ಹಾಕುವುದನ್ನು ನೋಡಿದ್ದೇನೆ. ಹೆಣ್ಣು ಮಗು ಹುಟ್ಟಿದ ವಿಚಾರವನ್ನು ಗಂಡನಿಗೆ ತಿಳಿಸಿದಾಗ ಮಗುವನ್ನು ನೋಡಲು ಬಾರದ ಕೆಲವು ಗಂಡಸರನ್ನೂ ವೃತ್ತಿ ಜೀವನದಲ್ಲಿ ನೊಡಿದ್ದೇವೆ. ಮತ್ತೊಂದೆಡೆ ಹೆಣ್ಣು ಮಗು ಹುಟ್ಟಿದಾಗ, ತಾಯಿಗಿಂತ ಸಂತೋಷಪಟ್ಟ ತಂದೆಯನ್ನೂ ಕಂಡಿದ್ದೇನೆ. ಗಂಡು ಹೆಣ್ಣು ಎಂದು ಭೇದ ಭಾವ ಮಾಡದೆ ಆರೋಗ್ಯವಾದ ಮಗು ಪಡೆಯುವ ಕಡೆ ನಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳೋಣ ಎಂದು ಆಶಯ ವ್ಯಕ್ತಪಡಿಸಿದರು.
***
ಹೆಣ್ಣು ತನ್ನನ್ನು ತಾನು ಸಂಭ್ರಮಿಸಿಕೊಳ್ಳುವುದನ್ನು ಕಲಿಯಬೇಕು
ಹೆಣ್ಣು ಒಗ್ಗಟ್ಟಾಗಿದ್ದರೆ ಸುರಕ್ಷಿತ ನಾಳೆಗಳನ್ನು ಕಟ್ಟಬಹುದು ಹೆಣ್ಣು ಮಕ್ಕಳಿಗೆ ಸಣ್ಣ ಸಣ್ಣ ಆಸೆ ಜಾಸ್ತಿ ನೈತಿಕ ಕಲಿಕೆ ಇಲ್ಲದಿರು ವುದು ಶಿಕ್ಷಣವಲ್ಲ. ಶಾಲೆಯ ಶಿಕ್ಷಣ ನೈತಿಕತೆ ಕಲಿಸುವುದಿಲ್ಲ ಸಾಧನೆ ಗಂಡು-ಹೆಣ್ಣು ಎಂದು ನೋಡುವುದಿಲ್ಲ ಹೆಂಗಸರಿಗೆ ಮಾನಸಿಕ, ದೈಹಿಕ ಮತ್ತು ಸಮಾಜಿಕ ಆರೋಗ್ಯವೂ ಮುಖ್ಯಜೀವನದಲ್ಲಿ ಏರು-ಪೇರು ಸಹಜ. ಅದನ್ನುಅಷ್ಟೇ ಸಹಜವಾಗಿ ತೆಗೆದುಕೊಳ್ಳಬೇಕು ಮಾನಸಿಕವಾಗಿ ಹೆಚ್ಚು ಒತ್ತಡಕ್ಕೆ ಒಳಗಾದರೆ, ಮಾನಸಿಕ ಕಾಯಿಲೆಗಳು ಹೆಚ್ಚಾಗುತ್ತದೆ ಹಿಂದಿನ ಕಾಲದಲ್ಲಿ ಗಂಡಿಗೆ ಸಮನಾದ ಸ್ವಾತಂತ್ರ್ಯ ಹೆಣ್ಣಿಗೆ ನೀಡಲಾಗುತ್ತಿತ್ತು. ಆದರೆ, ಈಗ ಇಲ್ಲ ಹೆಣ್ಣಿಗೆ ಶಿಕ್ಷಣ ತುಂಬಾ ಮುಖ್ಯ. ಶಿಕ್ಷಣ ನಮ್ಮ ಆತ್ಮ ಶಕ್ತಿಯನ್ನು ಹೆಚ್ಚಿಸುತ್ತದೆ ಒಂದು ಹೆಣ್ಣಿಗೆ ಶಿಕ್ಷಣ ನೀಡಿದರೆ ಒಂದು ಕುಟುಂಬವನ್ನು ಶಿಕ್ಷಿತರನ್ನಾಗಿಸಿದಂತೆ.
ಫಿಟ್‌ನೆಸ್ ಮತ್ತು ದೀರ್ಘಕಾಲಿಕ ಆರೋಗ್ಯ
ಹೆಣ್ಣು ದಿನಪೂರ್ತಿ ತನ್ನ ಎಲ್ಲ ಸಮಯವನ್ನು ಬೇರೆಯವರಿಗೆ ಮೀಸಲಿಡುತ್ತಾಳೆ. ಆದರೆ, ನಿಮಗಾಗಿ ನೀವು ಒಂದು ಗಂಟೆ ಮೀಸ ಲಿಟ್ಟುಕೊಳ್ಳಿ. ಫಿಟ್‌ನೆಸ್ ಎಂಬುದು ಫ್ಯಾಶನ್ ಆಗಿದೆ. ಡಯಟ್ ಎಂದರೆ ಆಹಾರದಲ್ಲಿ ಇತಿಮಿತಿಯಲ್ಲಿ ಇರುವುದು ಎಂದರ್ಥ. ಆದರೆ ಅದನ್ನು ತಪ್ಪಾಗಿ ಅರ್ಥ ಮಾಡಿಕೊಂಡಿರುವ ಯುವ ಪೀಳಿಗೆ ಉಪವಾಸ ಬೀಳುತ್ತಿದ್ದಾರೆ. ಇದರಿಂದಾಗಿ ದೇಹಕ್ಕೆ ಸಿಗ ಬೇಕಾದ ಪೌಷ್ಟಿಕಾಂಶ ಸಿಗದೆ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ದೈಹಿಕ ಆರೋಗ್ಯ ಮಾತ್ರ ಮುಖ್ಯವಾಗುವುದಿಲ್ಲ. ಮಾನಸಿಕವಾಗಿ ಆರೋಗ್ಯವಾಗಿರುವುದು ಕೂಡ ಬಹಳ ಮುಖ್ಯ.
-ಡಾ.ಎಂ.ಬಿ.ಕವಿತಾ
೨೦೨೨ರಲ್ಲಿ ಹೆಣ್ಣು ಹೇಗಿರಬೇಕು?
ಸ್ವಾತಂತ್ರ್ಯ ಬೇಕು ಎಂದು ಹೇಳುವ ಹೆಣ್ಣು, ಅದರ ಜತೆ ಜವಾಬ್ಧಾರಿ ಕೂಡ ತೆಗೆದುಕೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಹೆಣ್ಣು ಸ್ವಾವಲಂಬಿಯಾಗಿ ಬದುಕುವುದನ್ನು ಕಲಿಯಬೇಕು. ಹೆಣ್ಣು ತನ್ನ ಎಲ್ಲ ಜವಾಬ್ದಾರಿಯನ್ನು ತಾನೇ ಮತ್ತೊಬ್ಬರ ಕೈಗೆ
ಕೊಟ್ಟಿದ್ದಾಳೆ. ಹೆಣ್ಣು ಸೌದೆ ಒಲೆ ಹಚ್ಚುವುದಕ್ಕೂ ಸೈ, ಗ್ಯಾಸ್ ಒಲೆ ಹಚ್ಚುವುದಕ್ಕೂ ಸೈ ಎನ್ನುವಂತಿರ ಬೇಕು.
-ರೂಪಾ ಗುರುರಾಜ್
ಹೆಣ್ಣು ಹುಟ್ಟಿದರೆ ಎರಡು ಮನೆ ಬೆಳಗುತ್ತದೆ
ಗಂಡು ಮಗುವಾದರೆ ಮನೆ ಬೆಳಗುತ್ತಾನೆ ಎಂಬ ಮಾತಿದೆ. ಗಂಡು ಒಂದು ಮನೆ ಬೆಳಗಿದರೆ, ಹೆಣ್ಣು ಹುಟ್ಟಿದ ಮನೆ ಮತ್ತು ಹೋದ ಮನೆ ಎರಡನ್ನೂ ಬೆಳಗುತ್ತಾಳೆ. ಹೆಣ್ಣು-ಗಂಡು ಸಮಾನರು ಎಂದು ಪುರಾಣ ಕಾಲದ ಅರ್ಧನಾರೀಶ್ವರನ ಅವತರದಿಂದಲೂ
ತಿಳಿಸಿದ್ದಾರೆ. ಪೋಷಕರು ತಮ್ಮ ಹೆಣ್ಣು ಮಕ್ಕಳಲ್ಲಿ ಕೀಳರಿಮೆ ಬರದಹಾಗೆ ನೋಡಿಕೊಳ್ಳುವುದು ತುಂಬಾ ಮುಖ್ಯ. ಹೆಣ್ಣಿಗಿರುವ ತಾಳ್ಮೆ ಗಂಡಸರಿಗಿಲ್ಲ. ಅದು ಹೆಣ್ಣಿಗಿರುವ ದೊಡ್ಡ ಶಕ್ತಿ. ನಮ್ಮ ಕೆಲಸವನ್ನು ಶ್ರದ್ಧೆಯಿಂದ ಮಡಿಕೊಂಡು ಹೋದಾಗ ಸಮಾಜ ದಲ್ಲಿ ನಮಗೆ ಸಿಗಬೇಕಾದ ಎಲ್ಲ ಗೌರವವೂ ಸಿಗುತ್ತದೆ.
-ಡಾ.ಸುಶ್ಮಿತಾ ಪಿ.ನಾಯಕ್ (ಥೈಲ್ಯಾಂಡ್)
***
ಒಬ್ಬ ಯಶಸ್ವಿ ಪುರುಷನ ಹಿಂದೆ ಹೆಣ್ಣಿರುವಂತೆ ಒಬ್ಬ ಯಶಸ್ವಿ ಮಹಿಳೆಯ ಹಿಂದೆ ಒಬ್ಬ ಗಂಡಿನ ಪಾತ್ರ ಇದ್ದೇ ಇರುತ್ತದೆ. ಆದರೆ, ಇಂದಿಗೂ ಗಂಡು ಮಗು ಹುಟ್ಟಿದರೆ ಮಾತ್ರ ಅನೇಕ ಪೋಷಕರಿಗೆ ಸಂತೋಷ. ಹೆಣ್ಣು ಹುಟ್ಟಿದರೆ ಏನೋ ಬೇಸರ ವ್ಯಕ್ತಪಡಿಸು ತ್ತಾರೆ. ಹೆಣ್ಣು ಮಕ್ಕಳ ವಿಚಾರದಲ್ಲಿ ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶ ತುಂಬಾ ಸುಭದ್ರವಾಗಿದೆ. ಅಡುಗೆ ಮನೆಯಿಂದ
ಅಂತರಿಕ್ಷದವರೆಗೂ ಹೆಣ್ಣು ಮಕ್ಕಳು ಸೈ ಎನ್ನಿಸಿಕೊಂಡಿದ್ದೇವೆ. ಮೊದಲು ಅಡುಗೆ ಮನೆಗೆ ಸೀಮಿತವಾಗಿದ್ದವಳು, ಈಗ ಯಾವು ದರಲ್ಲಿ ಕಡಿಮೆ ಇಲ್ಲದಂತೆ ಬೆಳೆದಿದ್ದಾಳೆ. ಎಲ್ಲಾ ಕ್ಷೇತ್ರದಲ್ಲೂ ಗಂಡಸರಿಗೆ ಸಮಾನವಾಗಿದ್ದಾಳೆ.
-ಡಾ. ವಿಜಯಲಕ್ಷ್ಮಿ ಪುಟ್ಟಿ
ಗಿಲ್ಟ್ ಫ್ರೀ ಬದುಕು ಹೇಗೆ?
ಮಕ್ಕಳು, ಮನೆ, ಸಂಸಾರ ಮತ್ತು ಇವೆಲ್ಲದರ ಮಧ್ಯೆ ಹೆಣ್ಣಿಗೆ ಅಪರಾಧಿ ಮನೋಭಾವ ಬರುವುದು ಸಹಜ. ಆದರೂ ದುಡಿಯುವ ಅನಿವಾರ್ಯತೆ ಇರುತ್ತದೆ. ಈ ಎಲ್ಲ ಜವಾಬ್ದಾರಿಯ ನಡುವೆ ಹೆಣ್ಣು ಸ್ವಲ್ಪ ಕುಸಿಯುತ್ತಾಳೆ. ಆದರೆ, ಮತ್ತೆ ಚಿಗುರೊಡೆದು ಪುಟಿ ದೆದ್ದು ನಿಲ್ಲುತ್ತಾಳೆ. ಇದೇ ಮಹಿಳೆಯ ಶಕ್ತಿ. ಯಾವ ಹೆಣ್ಣೂ ಸೂಪರ್ ಉಮೆನ್ ಅಲ್ಲ. ಎಲ್ಲವನ್ನು ಸಂಬಾಳಿಸಿಕೊಂಡು, ಅರ್ಥ ಮಾಡಿಕೊಂಡು ಹೋಗಬೇಕು. ಎಂಥಸವಾಲು ಬಂದರೂ ಚಿಗುರೊಡೆದು ನಿಲ್ಲಬೇಕು. ಪ್ರತಿ ಬಾರಿಯೂ ಚಿಗುರೊಡೆ ಯುತ್ತಾ, ಪ್ರಕೃತಿಯೇ ತಾನಾಗುತ್ತಾಳೆ ಮಹಿಳೆ. ತನ್ನ ಸುತ್ತ ಇರುವವರನ್ನು ಲವಲವಿಕೆಯಿಂದ ಇಡುತ್ತಾಳೆ.
-ಡಾ.ಶ್ವೇತಾ ಬಿ.ಸಿ