ಸಂವಾದ ೨೩೩
ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ‘ಇಂಗ್ಲಿಷ್ ಸುಲಭ ಕಲಿಕೆ ಹೇಗೆ?’ ಕಾರ್ಯಕ್ರಮದಲ್ಲಿ ಪ್ರೊ.ರಾಮಚಂದ್ರ ಹೆಗ್ಗಡೆಯವರಿಂದ ಟಿಪ್ಸ್
ಬೆಂಗಳೂರು: ಇಂಗ್ಲಿಷ್ ಭಾಷೆಯನ್ನು ಸುಲಭವಾಗಿ ಕಲಿಯುವುದು ಹೇಗೆ? ಎಂಬ ವಿಚಾರ ಒಂದೆಡೆಯಾದರೆ, ಕನ್ನಡ ಭಾಷಿಕರು ಈ ಭಾಷೆಯನ್ನು ಕಲಿಯುವುದು ಹೇಗೆ? ಎಂಬುದು ಮುಖ್ಯವಾಗುತ್ತದೆ. ಮಾತನಾಡುವಾಗ ಅಥವಾ ಬರೆಯುವಾಗ ತಪ್ಪುಗಳಾಗುತ್ತದೆ ಎಂಬ ವಿಪರೀತ ಭಯ ಇರುತ್ತದೆ.
ಭಾಷೆ ಕಲಿಯುವಿಕೆಯನ್ನು ಆರಂಭಿಸುವ ಮೂಲಕವೇ ಈ ಭಯವನ್ನು ತೆಗೆದು ಹಾಕಲು ಸಾಧ್ಯ. ಭಾಷಾಭಿವೃದ್ಧಿಯು ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನೂ ಅವಲಂಬಿಸಿರುತ್ತದೆ. ಆತ್ಮವಿಶ್ವಾಸವನ್ನು ಹೆಚ್ಚು ಬೆಳೆಸಿಕೊಳ್ಳುವ ಮೂಲಕ ಭಾಷೆಯನ್ನು ಬೇಗ ಕಲಿಯ ಬಹುದು.
ವಿಶ್ವವಾಣಿ ಕ್ಲಬ್‌ಹೌಸ್ ಏರ್ಪಡಿಸಿದ್ದ ಇಂಗ್ಲಿಷ್ ಸುಲಭ ಕಲಿಕೆ ಹೇಗೆ? ಕಾರ್ಯಕ್ರಮದಲ್ಲಿ ಪ್ರೊ.ರಾಮಚಂದ್ರ ಹೆಗ್ಗಡೆ ಟಿಪ್ಸ್‌ಗಳನ್ನು ನೀಡಿದ್ದು ಹೀಗೆ. ಕಲಬುರಗಿ, ಬೀದರ್, ವಿಜಯ ಪುರದಂತಹ ಗ್ರಾಮಾಂತರದಿಂದ ಬಂದವರಿಗೆ ಇಂಗ್ಲಿಷ್ ಭಾಷೆ ಬಗ್ಗೆಯೇ ತಿಳಿದಿರುವುದಿಲ್ಲ. ಹಾಗಾಗಿ, ಅವರು ಭಾಷೆಯನ್ನು ಸುಲಭವಾಗಿ ಕಲಿಯುವುದಕ್ಕೆ ಕೆಲವು ಸುಲಭ ಮಾರ್ಗ ಗಳಿವೆ. ಮಾತೃ ಭಾಷೆ ಪ್ರಾಭಾವ ಹೆಚ್ಚಿರುವುದರಿಂದ ಇಂಗ್ಲಿಷ್ ಕಲಿಕೆಗೆ ಅಡ್ಡಿಯಾಗ ಬಹುದು.
ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ವಾಕ್ಯ ರಚನೆ ಸಂಪೂರ್ಣ ವಿಭಿನ್ನವಾದದ್ದು. ಇಂಗ್ಲಿಷ್ ನಲ್ಲಿ ಕತೃ, ಕರ್ಮ, ಕ್ರಿಯಾಪದಗಳಿದ್ದು, ಕನ್ನಡದಲ್ಲಿ ಆ ರೀತಿ ಇಲ್ಲ. ಇಂಗ್ಲಿಷ್ ನಲ್ಲಿ ಕೆಲವು ಫಿಕ್ಸೆಡ್ ವಾಕ್ಯ ಇದ್ದೇ ಇರುತ್ತದೆ. ಕನ್ನಡದಲ್ಲಿ ಹಾಗೆ ಇರುವುದಿಲ್ಲ. ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳ ಉಚ್ಚಾರ ಒಂದೇ ರೀತಿ ಇರುವುದಿಲ್ಲ. ಇಂಗ್ಲಿಷ್‌ನಲ್ಲಿ ಅದರದೇ ಆದ ಉಚ್ಚಾರ ಮಾಡುವ ರೀತಿ ಇದೆ. ಈ ರೀತಿಯ ಅಡತಡೆಗಳನ್ನು ಗಮನಿಸಿಕೊಳ್ಳಿ.
ಇನ್ಫೋಸಿಸ್‌ನ ಮೋಹನ್‌ದಾಸ್ ಪೈ ಅವರ ಮಾತನ್ನು ಗಮನಿಸಬೇಕು. ‘ಉತ್ತರ ಕರ್ನಾಟಕಕ್ಕೆ ನೀರು ಮತ್ತು ಇಂಗ್ಲಿಷ್ ಭಾಷೆ-ಎರಡು ವಿಷಯದ ಅಗತ್ಯವಿದೆ. ಹಿಂದುಳಿದ ಗ್ರಾಮಗಳ ಅಭಿವೃದ್ಧಿಗೆ ಈ ಎರಡು ವಿಚಾರ ಮುಖ್ಯವಾಗುತ್ತದೆ’ ಎಂದಿದ್ದರು.
ಇಂಗ್ಲಿಷ್ ಕಲಿಕೆಯಿಂದ ಗ್ರಾಮಗಳಿಗೆ ಸಂಪನ್ಮೂಲ ಹರಿದು ಬರಲು ಸಹಾಯವಾಗುತ್ತದೆ ಎಂದರು.
ಭಾಷೆಯ ಇತಿಹಾಸ: ನಮ್ಮ ದೇಶದಲ್ಲಿ ಈ ಭಾಷೆ ಹೇಗೆ ಬಂತು? ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಇಂಗ್ಲಿಷ್ ಶಿಕ್ಷಣ ಆರಂಭ ಮಾಡಿದಾತ ಇಂಗ್ಲೆಂಡ್‌ನ ಮೆಕಾಲೆ. ಇಂಗ್ಲೆಂಡ್‌ನಲ್ಲಿ ಭಾರತವನ್ನು ಅಳುವುದು ಹೇಗೆ? ಎಂಬ ಚರ್ಚೆ ಬಗ್ಗೆ ಎರಡು ವಾದಗಳಿತ್ತು. ಶಕ್ತಿಯಿಂದ ಎಂದು ಒಂದೆಡೆಯಾದರೆ, ಮೆಕಾಲೆ ವಾದ ಮತ್ತೊಂದೆಡೆ. ನಾವು ಭಾರತವನ್ನು ಆಳಬೇಕಿದ್ದರೆ ಮೊದಲು ಅವರ ಮನಸನ್ನು ಆಳಬೇಕು. ಅವರನ್ನು ಅವರ ಮಾತೃ ಸಂಸ್ಕೃತಿಯಿಂದ ಹೊರತರಬೇಕು. ಹಾಗೆ ಮಾಡಿದರೆ ಭಾರತೀಯರನ್ನು ಮತ್ತು ಭಾರತವನ್ನು ದೀರ್ಘಕಾಲ ಆಳಬಹುದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದ. ಅದನ್ನು ಒಪ್ಪಿದ
ಅಲ್ಲಿಯ ಸರಕಾರ, ನಂತರ ಭಾರತದಲ್ಲಿ ಇಂಗ್ಲಿಷ್ ಕಲಿಸಲು ಪ್ರಾರಂಭಿಸಿದರು.
ನಾವು ಇಂಗ್ಲಿಷ್ ಏಕೆ ಕಲಿಯಬೇಕು?
ಇಂಗ್ಲಿಷ್ ಪ್ರಗತಿಪರ ಭಾಷೆ ಎಂದು ರಾಜರಾಂ ಮೋಹನ್‌ರಾಯ್ ಸ್ವಾಗತ ಮಾಡಿದ್ದರು. ಅಂದಿನ ಕಾಲದಲ್ಲಿ ಮಹಿಳೆಯರು ಮತ್ತು ಹಿಂದುಳಿದವರಿಗೆ ಘನತೆ ತಂದುಕೊಡಲು ಇಂಗ್ಲಿಷ್ ಅವಶ್ಯವಾಗಿತ್ತು. ಇದಲ್ಲದೇ ದೇಶವನ್ನಾಳುತ್ತಿದ್ದ ಬ್ರಿಟಿಷರಿಗೆ ತಿರುಗಿ
ಉತ್ತರ ನೀಡಬೇಕು ಎಂದು ಎಲ್ಲರೂ ಈ ಭಾಷೆಯನ್ನು ಕಲಿಯಲಾರಂಭಿಸಿದರು. ಅದನ್ನು ಕಲಿತ ಪರಿಣಾಮದಿಂದ ‘ಕ್ವಿಟ್ ಇಂಡಿಯಾ’ ಎಂದು ಹೇಳಲಾಯಿತು. ಇದಲ್ಲದೇ ಹಿಂದಿ ಅಥವಾ ಯಾವುದಾದರೂ ಬೇರೆ ಭಾಷೆಯಲ್ಲಿ ಹೇಳಿದ್ದರೆ ಬ್ರಿಟಿಷ್‌ರಿಗೂ ಅರ್ಥವಾಗುತ್ತಿರಲಿಲ್ಲ.
ನಮ್ಮ ದೇಶದ ಸ್ವಾತಂತ್ರ್ಯ, ಇತಿಹಾಸದ ಜತೆ ಇಂಗ್ಲಿಷ್ ಆಳವಾಗಿ ಬೆಳೆದುಕೊಂಡಿದೆ. ಈ ಭಾಷೆ ಕಲಿಕೆಯಿಂದ ಪ್ರಗತಿಪರ ಚಳವಳಿ ಗಳು ಬಂದಿವೆ. ಹಿಂದುಳಿದ ಪ್ರದೇಶ, ಮಹಿಳೆಯರ ಅಭಿವೃದ್ಧಿ – ಸ್ವಾತಂತ್ರ್ಯ ಮತ್ತು ಅಭಿವೃದ್ಧಿಶೀಲ ಜನಾಂಗದ ಮುನ್ನಡೆ ಆಗಬೇಕಾದರೆ ಇಂಗ್ಲಿಷ್ ಕಲಿಕೆ ಅವಶ್ಯವಾಗುತ್ತದೆ. ಹತ್ತಾರು ಭಾಷೆಯೊಂದಿಗೆ ಇದೊಂದು ಭಾಷೆ ಕಲಿತರೆ ತಪ್ಪೇನು ಇಲ್ಲ.
ವೇಗ ಕಲಿಕೆ ಹೇಗೆ ?
ಇಂಗ್ಲಿಷ್‌ನ್ನು ಸಣ್ಣ ಮಕ್ಕಳು ಕಲಿತ ರೀತಿಯಲ್ಲೇ ಕಲಿಯಬೇಕು. ಖುಷಿಯಿಂದ, ಭಯವಿಲ್ಲದೇ, ಆಡುತ್ತಾ ಆಡುತ್ತಾ ಕಲಿಯಬೇಕು. ಮುಖ್ಯವಾಗಿ ಭಾಷೆಯ ಶಬ್ದಗಳನ್ನು ಗಮನಿಸಬೇಕು. ವರ್ಬ್‌ಗಳ ಬಗ್ಗೆ ಹೆಚ್ಚು ಗಮನ ನೀಡಿ, ಭಾಷೆಯ ಪಾರ್ಟ್ ಆಫ್ ಸ್ಪೀಚ್ ನಲ್ಲಿ ಪ್ರೊನೌನ್ಸ್‌ನ್ನು ಸುಲಭವಾಗಿ ಗಟ್ಟಿಯಾಗಿ ಕಲಿಯಬೇಕು. ವಾಕ್ಯ ರಚನೆ ಬಗ್ಗೆ ಹೆಚ್ಚು ಗಮನ ನೀಡಿದಲ್ಲಿ ಭಾಷೆಯನ್ನು ಸುಲಭವಾಗಿ ಕಲಿಯಬಹುದಾಗಿದೆ.
***
ಇಂಗ್ಲಿಷ್ ಕಲಿಯಲು ಅಷ್ಟು ಸುಲಭವಲ್ಲ, ಹಾಗೆ ಕಷ್ಟವೂ ಅಲ್ಲ. ನಗರದಲ್ಲಿ ವಾಸಿಸುವ ಒಬ್ಬ ಸಾಮಾನ್ಯ ವ್ಯಕ್ತಿ 25000 ಇಂಗ್ಲಿಷ್ ಪದಗಳನ್ನು ಬಳಸುತ್ತಾನೆ ಎಂದು ಅಂಕಿ ಅಂಶಗಳ ಪ್ರಕಾರ ತಿಳಿದು ಬಂದಿದೆ. ಕೆಲವು ಬಾರಿ ಮಾತೃ ಭಾಷೆಯೊಂದಿಗೆ ಇಂಗ್ಲಿಷ್ ಪದ ಬಳಕೆಯೂ ಅನಿವಾರ್ಯವಾಗಿದೆ. ಯಾವುದೇ ಭಾಷೆಯಾಗಲಿ ನಾಲಿಗೆಯ ಮೇಲೆ ಹರಿದಾಡಿದಷ್ಟೂ ಸಮೃದ್ಧಿ ಯಾಗಿ ಬೆಳೆಯುತ್ತದೆ.
-ನಂಜನಗೂಡು ಮೋಹನ್, ಸಂಪಾದಕೀಯ ಸಲಹೆಗಾರರು
? ಭಾಷಾ ಕಲಿಕೆಗೆ ಆತ್ಮವಿಶ್ವಾಸ ಮುಖ್ಯ.
? ಕನ್ನಡ ಬಂದರೆ ಇಂಗ್ಲಿಷ್ ಕಲಿಕೆ ಸುಲಭ.
? ಭಾಷಾ ಕಲಿಕೆಯಲ್ಲಿ ಬೀಜ ಮಂತ್ರವಾದ
ಶಬ್ದಗಳನ್ನು ಕಲಿಯಬೇಕು.
? ವರ್ಬ್ ಕಲಿಕೆಯಿಂದ ಭಾಷೆ ಕಲಿಕೆ ಆರಂಭಿಸಿ.
? ಲರ್ನ್ ಇಂಗ್ಲಿಷ್ ಅಂಡ್ ಬೀ ಇಂಡಿಯನ್.
? ಭಾಷೆ ಕಲಿಯುವುದು ಈಜು ಕಲಿತ ಹಾಗೆ. ಅದರಲ್ಲಿ ಇಳಿಯುವ ತನಕ ಕಲಿಯಲು ಸಾಧ್ಯವಿಲ್ಲ.
? ನಾಮಪದಗಳನ್ನು ಕ್ರಿಯಾ ಪದಗಳನ್ನಾಗಿ ಬದಲಿಸಿಬಿಡುವ ವಿಚಿತ್ರ ಭಾಷೆ.
? ಮೊದಲ ಹಾಗೂ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಸೈನಿಕರಿಗೆ ಹೆಚ್ಚು ಹೆಚ್ಚು ಇಂಗ್ಲಿಷ್ ಕಲಿಸಲಾಯಿತು.
? ಭಾಷೆಯನ್ನು ವೇಗವಾಗಿ ಕಲಿಸಲಿಕ್ಕೆ ಸ್ಟ್ರಕ್ಚರ್ ಮೆಥಡ್, ಫಂಕ್ಷನಲ್ ಮೆಥಡ್, ಗ್ರಾಮರ್ ಟ್ರಾನ್ಸ್‌ಲೇಶನ್ ಮೆಥಡ್ ಬಳಸಬೇಕು.
? ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಭಾಷಾ ಕೌಶಲದ ಶಿಕ್ಷಣವಾಗಬೇಕಿದೆ.
ಇಂದಿನ ಸಂವಾದದಲ್ಲಿ ಬಿಳಿಗಿರಿರಂಗನ ಬೆಟ್ಟದ ಸೋಲಿಗರ ಹಾಡಿಯಿಂದ ಬಸವರಾಜು ಎಂಬ ಶಿಕ್ಷಕ ಮಾತನಾ ಡಿದ್ದು, ವಿಶ್ವವಾಣಿ ಕ್ಲಬ್‌ಹೌಸ್‌ನ ಜನಪ್ರಿಯತೆಗೆ ಮತ್ತು ಜನ ಸಾಮಾನ್ಯರನ್ನು ತಲುಪಿರುವ ಸಾಧನೆಗೆ ಸಾಕ್ಷಿಯಾಗಿತ್ತು.