ಕ್ಲಬ್‌ಹೌಸ್ ಸಂವಾದ- ೨೩೧
ದೇವರು ಅವತಾರವೆತ್ತಿ ಬರುವನೇ ಎಂಬ ವಿಚಾರದ ಕುರಿತು ಅರಿವಿನ ಉಪನ್ಯಾಸ ನೀಡಿದ ಮಂಡ್ಯ ಚಿನ್ಮಯ ಮಿಷನ್‌ನ ಆಚಾರ್ಯ ಆದಿತ್ಯಾನಂದ
ಬೆಂಗಳೂರು: ನಾವೂ ಯಾವತ್ತು, ಏನನ್ನು ಒಪ್ಪಿಕೊಳ್ಳುತ್ತೇವೆಯೋ, ಅದನ್ನು ನಾವು ಪ್ರಶ್ನೆ ಪ್ರಶ್ನೆ ಮಾಡುವುದನ್ನು ಕಲಿತು ಕೊಂಡರೆ ಆಗ ನಮಗೆ ಬದುಕು ಏನು ಎನ್ನುವುದು ಸ್ಪಷ್ಟವಾಗಿ ಅರ್ಥವಾಗುತ್ತದೆ. ದೇವರ ಕುರಿತು, ಆತನ ಅವತಾರಗಳ ಕುರಿತು ಪ್ರಶ್ನಿಸಿ ಸ್ಪಷ್ಟ ಮಾಹಿತಿ ಪಡೆದುಕೊಂಡರೆ ಭಗವಂತನ ಇರುವಿನ ಬಗ್ಗೆ ನಮಗೆ ಸ್ಪಷ್ಟತೆ ಸಿಗುತ್ತದೆ ಎಂದು ಮಂಡ್ಯ ಚಿನ್ಮಯ ಮಿಷನ್‌ನ ಆಚಾರ್ಯ ಆದಿತ್ಯಾನಂದ ಹೇಳಿದ್ದಾರೆ.
ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ದೇವರು ಅವತಾರವೆತ್ತಿ ಬರುವನೇ ಎಂಬ ವಿಚಾರದ ಕುರಿತು ಅರಿವಿನ ಉಪನ್ಯಾಸ ನೀಡಿದ ಅವರು, ಪ್ರಶ್ನೆ ಮಾಡುವುದು ಬಹಳ ಉತ್ತಮ ವಾದ ಕಲೆ. ಆನಂದವಾಗಿ ಮತ್ತು ಸ್ಪಷ್ಟತೆಯಿಂದ ನಾವು ಬದುಕಬೇಕಿಂದಿದ್ದರೆ ಪ್ರಶ್ನೆ ಮಾಡುವುದನ್ನು ಕಲಿಯಬೇಕು ಎಂದರು.
ವ್ಯಕ್ತಿ ತನ್ನ ಬದುಕನ್ನು ರೂಪಿಸಿಕೊಳ್ಳುವುದೇನಿದೆ? ಬಹಳ ಸೊಗಸಾಗಿ ರೂಪಿಸಿಕೊಳ್ಳು ವುದು ಹೇಗೆ ಎನ್ನುವುದಕ್ಕೆ ನಮ್ಮ ಉಪನಿಷತ್ತು ಸರಿಯಾದ ಉತ್ತರವನ್ನೇ ಕೊಟ್ಟಿದೆ. ವೇದಾಂತ, ವಿಚಾರಗಳಿರುವುದು ಸಮಾಜ ತಿದ್ದುವುದಕ್ಕಲ್ಲ. ಅವುಗಳನ್ನು ಅನುಸರಿಸಿ ನಾವು ಸರಿದರಿಯಲ್ಲಿ ನಡೆಯುವುದಕ್ಕೆ. ನಾವು ಹಾಡುವುದು, ಸಾಹಿತ್ಯ ಬರೆಯುವುದು ಎಲ್ಲವೂ ಜಠರಾವಾನಾಯ ಅಂದರೆ ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ. ನಾನೇ ಬುದ್ಧಿವಂತ ಅನ್ನಿಸಿಕೊಳ್ಳುವುದು ಜನ ಗೌರವಾಯಿ ಅಂದರೆ, ಜನರಿಂದ ಮನ್ನಣೆ ಪಡಿಯಲಿಕ್ಕೆ.
ವೇದಾಧಿ ಪಾವನ ಕಲಾ-ವೇದದ ಯಜ್ಞ ಮಾಡುತ್ತೇನೆ ಎನ್ನುವುದೆಲ್ಲವೂ ಪರಬಾಹುಕಾಯ ಅಂದರೆ ಸ್ವರ್ಗದ ಆಸೆಯಿಂದ ಮಾಡುವುದು. ಈ ತತ್ವಾನು ಭೋಧನಾ ಕಲಾ-ತತ್ವ ಚಿಂತನೆ, ವೇದಾಂತ ಚಿಂತನೆ ಮಾಡುವು ದೇನಿದೆ? ಇಲ್ಲೇ ಶಾಂತವಾಗಿ, ಹಾಯಾಗಿ ಬದುಕುವುದನ್ನು ಕಲಿಯುವುದಕ್ಕೋಸ್ಕರ ನಾವು ತತ್ವ ಚಿಂತನೆ ಮಾಡಬೇಕು. ಈ ತತ್ವ-ಚಿಂತನೆ ಅಥವಾ ವೇದಾಂತದ ಚಿಂತನೆ ಬಹಳ ಬೇಕು. ಚಿಂತನೆ ಎನ್ನುವುದು ಬಹಳ ಕಷ್ಟ . ಆದರೂ ಅದನ್ನು ರೂಢಿಸಿಕೊಳ್ಳ ಬೇಕು ಎಂದರು.
ಎಲ್ಲರಿಗೂ ದೇವರು ಎಂದರೆ ಯಾರು ಎನ್ನುವುದೇ ಬಹಳ ವಿಸ್ಮಯ. ದೇವರು ಇದ್ದಾನೆಯೇ ಎಂದು ಕೇಳಿದರೆ ಮೋಡ, ಆಕಾಶ ನೋಡಿ ನಮಸ್ಕಾರ ಮಾಡುತ್ತೇವೆ. ಏಕೆಂದರೆ, ಈ ದೇವರು ಎನ್ನುವುದೇ ವಿಸ್ಮಯ. ದೇವರು ಯಾರು ಎಂದು ಪ್ರಶ್ನೆ ಮಾಡಿದರೆ
ನಮ್ಮಲ್ಲಿ ಪಟ್ಟಿಯೇ ಇದೆ. ಮಕ್ಕಳೇ ದೇವರು, ತಂದೆ-ತಾಯಿ ದೇವರು, ವಿದ್ಯೆ ಕಲಿಸಿದ ಗುರು ದೇವರು, ಅತಿಥಿಗಳೇ ದೇವರು, ಪುಸ್ತಕ, ಗಾಳಿ ಹೀಗೆ ಪ್ರತಿಯೊಂದೂ ನಮ್ಮ ಪಾಲಿಗೆ ದೇವರೇ ಆಗಿದ್ದಾರೆ. ಕೆಲವರಿಗೆ ದೇವರು ಯಾರು ಎಂದು ಕೇಳಿದರೆ ಟಿವಿಯಲ್ಲಿ, ಸಿರಿಯಲ್‌ನಲ್ಲಿ, ದೇವಸ್ಥಾನದಲ್ಲಿ, ಯಜ್ಞ- ಯಾಗಾದಿಯಲ್ಲಿ ಇದ್ದಾನೆ ಎಂದು ಹೇಲುತ್ತಾರೆ. ಇಷ್ಟು ಬಿಟ್ಟರೆ ದೇವರು ಎಂದರೆ ಯಾರು ಎನ್ನುವುದೇ ಗೊತ್ತಿಲ್ಲ. ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ವಿವರಿಸಿದರು.
ದೇವರು ಅಂದರೆ ಏನು? ದೇವಸ್ಥಾನದಲ್ಲಿ ಇರುವವನು ದೇವರಾ? ದೇವಸ್ಥಾನದಲ್ಲಿರುವುದು ಕಲ್ಲೇ? ‘ಕಲ್ಲಿನಲಿ ಕೆತ್ತಿದನು ಶಿಲ್ಪಿ ಆ ಶಿವನಾ.. ದೇಗುಲದಿ ಕೂಡಿದನು ವೈಧಿಕನು.. ಅವನಾ ಕರುಣಾಳು ಶಿವನಿಂದು ಕಲ್ಲಾದನೇಕೆ ಮನದಲ್ಲಿ ಇರುವ ಬಗೆ, ಮನೆ ಬೇರೆ ಬೇಕೆ’ ಅಂದರೆ ಯಾರೋ ಒಬ್ಬ ಕಲ್ಲಿನಲ್ಲಿ ದೇವರನ್ನು ಕೆತ್ತಿದ, ಅದನ್ನು ಯಾರೋ ಒಬ್ಬ ಕೊಂಡು ಹೋಗಿ ದೇವಸ್ಥಾನ ಕಟ್ಟಿದ. ಆ
ಭಗವಂತನನ್ನು ಆರಾಧಿಸುತ್ತಾನೆ ಇನ್ನೊಬ್ಬ. ಇಂತಹ ಒಳ್ಳೆಯ ಚಿಂತನೆಯಿಂದ ನಮ್ಮನ್ನು ನಾವು ಶುದ್ಧಿ ಮಾಡಿಕೊಳ್ಳುತ್ತೇವೆ ಎಂದರು.
ಎಲ್ಲಾ ರೀತಿಯ ಗ್ರಂಥಗಳನ್ನು ನಾನು ನೋಡಿದಾಗ, ದೇವರು ಎಂದರೆ ಒಬ್ಬೊಬ್ಬರಿಗೊ ಒಂದೊಂದು ಕಲ್ಪನೆಯಿದೆ. ಬಾಲ ಸಂಗಯ್ಯ ಎಂಬ ವಚನಕಾರ ಕಲ್ಲು ದೇವರು ದೇವರಲ್ಲಾ, ಮಣ್ಣು ದೇವರು ದೇವೆರಲ್ಲಾ, ಮರದ ದೇವರು ದೇವರಲ್ಲಾ, ಪಂಚ ಲೋಹದಲ್ಲಿ ಮಾಡಿದ ದೇವರು ದೇವರಲ್ಲಾ, ಸೇತು ರಾಮೇಶ್ವರ, ಗೋಕರ್ಣ, ಕದಾರನಾಥ ಮೊದಲಾದ ಅಷ್ಟ ಷಷ್ಠಿಕೋಟಿ ಪುಣ್ಯ ಕೇತ್ರಗಳಲ್ಲಿ ಸಹ ದೇವರು ದೇವರಲ್ಲಾ. ತನ್ನ ತಾನರಿದು, ತಾನಾರೆಂದು ತಿಳಿದೆಡೆ, ತಾನೇ ದೇವ ನೋಡ ಅಪ್ರಮಾಣ ಕೂಡಲ ಸಂಗಮದೇವಾ ಎಂದು ಹೇಳಿದ್ದಾನೆ. ಇದನ್ನೇ ವಿವಿಧ ರೂಪಗಳಲ್ಲಿ ತತ್ವಪದ, ಉಪನಿಷತ್‌ಗಳಲ್ಲಿ ಹೇಳಿದ್ದಾರೆ. ಆದರೆ, ಮನುಷ್ಯನಿಗೆ ಇರುವಂತಹ ಒಂದೇ ಒಂದು ಶಾಪ ಎಂದರೆ, ಅವನು ಯಾವುದನ್ನೂ ಕೂಡ ಚಿಂತನೆ ಮಾಡುವುದಿಲ್ಲ ಎಂದು ಹೇಳಿದರು.
ಬೀಚಿ ಅವರು ಹೇಳಿದ ದೇವರ ಕುರಿತ ಸಾಲು
ಬೀಚಿ ಹೇಳಿದ್ದರು, ಮಾನವನೇ ಶತ್ರು. ನಿನಗೆ ಬರೆದಿಟ್ಟೊಕೊಳ್ಳೋ ನೀ ಇದನಾ, ನಿನಿಗಾವ ದ್ರೋಹಗಳ ಮಾಡಿಹನು ಗೊತ್ತೇ? ತನಗಿರುವ ಜಾತಿ ಮತಗಳ ರೋಗ ನಿನಗಂಟಿಸಿಹನು. ಏನಯ್ಯ ನಿನ ಬವಣೆ ನಗಬೇಡ ತಿಮ್ಮಾ, ಎಷ್ಟೆಷ್ಟು ಜನರಿಹರು ಅಷ್ಟಷ್ಟು ದೇವರಿಹರು, ಮೇಲಿಷ್ಟ ದೇವರುಂಟು, ಅನಿಷ್ಟ ದೇವರೂ ಉಂಟು.
ಇಷ್ಟಾಗೀ ದೇವನೊಬ್ಬೇ ಒಬ್ಬ ಎಂಬನು. ಯಾವಾಗ ಕಷ್ಟ ಬಂದಾಗೆಲ್ಲಾ ಭಾಷಣದೀ ಮಾತ್ರ ಕೇಳೋ ತಿಮ್ಮಾ ಎಂದು. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಈ ಪ್ರತಿಯೊಂದು ವಿಷಯ, ಚಿಂತನೆ ಕುರಿತು ಪ್ರತಿಯೊಬ್ಬ ವ್ಯಕ್ತಿ ಆಲೋಚನೆ ಮಾಡಬೇಕು. ದೇವರೆಲ್ಲೂ ಹೊರಗಡೆ ಇಲ್ಲ, ನನ್ನ ಮನಸಿನಲ್ಲಿ ಇದ್ದಾನೆ. ತತ್ವದ ಚಿಂತನೆಯಲ್ಲಿ ನಾವು ತೊಡಗಿದಾಗ ಮಾತ್ರ ಅದನ್ನು ನಾವು ಅರಿತುಕೊಳ್ಳಲು ಸಾಧ್ಯ ಎಂದು ಆಚಾರ್ಯ ಆದಿತ್ಯಾನಂದ ತಿಳಿಸಿದರು.
ವೇದಾಂತ ವ್ಯಕ್ತಿಗೆ ಸಮಾಜಕ್ಕಲ್ಲ
ಮನಸ್ಸು. ಕುಣಿಯುವುದೇ ಅದರ ಸ್ವಭಾವ. ನಾವು ಜಾತಿ, ನೀತಿ, ಕುಲ-ಗೋತ್ರಗಳನ್ನು ಬಿಡಬೇಕು. ಸಮಾಜದಲ್ಲಿ ಯಾರನ್ನು ಯಾರೂ ಸರಿಪಡಿಸಲು ಹೋಗಬಾರದು. ವೇದಾಂತ ವ್ಯಕ್ತಿಗೆ ಹೊರತು ಸಮಾಜಕ್ಕಲ್ಲ. ಸಮಾಜದಲ್ಲಿ ಮಾರ್ಪಟು ತರಲು ಹೋದವರೆಲ್ಲರೂ ಕೂಡ ಸೋತವರೇ. ಬಸವಣ್ಣನವರ ಉದ್ದೇಶವೂ ಇದೇ ಆಗಿದ್ದು, ಆದರೆ ಈಡೇರಲಿಲ್ಲ. ಹೀಗಾಗಿ ವೇದಾಂತ,
ಚಿಂತನೆ, ವ್ಯಕ್ತಿಗೆ. ತನ್ನಲ್ಲಿ ತಾನೂ ಬದಲಾಗಲಿಕ್ಕೆ ಹೊರತು ಸಮಾಜ ಬದಲಾಯಿಸಲು ಅಲ್ಲ.
ಚೈತನ್ಯ ತತ್ವ, ಬ್ರಹ್ಮ ಸ್ವರೂಪ ಎಂಬುದನ್ನು ನಾವು ಯಾವಾಗ ಮರೆಯುತ್ತೇವೋ ,ಆವಾಗ ಅಧರ್ಮ ಹೆಚ್ಚುತ್ತದೆ. ಅಧರ್ಮ ಹೆಚ್ಚಾದಾಗ ಎಲ್ಲಾ ಕಡೆ ಗಲಾಟೆ, ವೈಮನಸ್ಸು ಹುಟ್ಟುತ್ತದೆ ಎಂದು ಆಚಾರ್ಯ ಆದಿತ್ಯಾನಂದ ಹೇಳಿದರು.
ದೇವರ ಪೂಜೆ ಸಾರ್ಥಕ ಫಲ
ಎಲ್ಲರಿಗೂ ಒಂದೇ ದೇವರು ಆಗುವುದಿಲ್ಲ. ಎಲ್ಲಾ ಜನರು ಅವರಿಗಿಷ್ಟ ಬಂದ ಹೆಸರಿನಲ್ಲಿ ದೇವರನ್ನು ಪೂಜಿಸುತ್ತಾರೆ. ಚಿನ್ನ ಬಳೆಯಾಗಿ, ಸರವಾಗಿ, ಓಲೆಯಾಗಿ ಧರಿಸಿದರೂ ಅದು ಚಿನ್ನವೇ. ಮಾಡಲ್ಪಟ್ಟಿದ್ದು ಹಲವಾದರೂ ಮೂಲ ಮಾತ್ರ ಒಂದೇ.
ಪೂಜೆ ಮಾಡುವುದರಲ್ಲಿ ಆಸಕ್ತಿ ಇದ್ದರೆ ಪೂಜೆ ಮಾಡಿ. ಕಥೆ ಕೇಳುವ ಆಸಕ್ತಿ ಇದ್ದರೆ ಕೇಳಿ. ಇದ್ಯಾವುದಲ್ಲೂ ಆಸಕ್ತಿ ಇಲ್ಲ ಎಂದರೆ ಬಡವರ ಸೇವೆ ಮಾಡಿ ನಾವೂ ಮಾಡುವ ಪೂಜೆ, ನಾವು ಮಾಡುವ ಜಪ ನಮ್ಮ ಮನಸ್ಸನ್ನು ಒಂದು ಕಡೆ ಕೇಂದ್ರೀಕರಿಸಲು
ಮಾತ್ರ.