ನವದೆಹಲಿ: ಓದಿನ ಜೊತೆಗೆ ಯೂಟ್ಯೂಬ್ ಕಂಟೆಂಟ್ ಕ್ರಿಯೇಟ್ ಮಾಡ್ತಿದ್ದ ಯುವತಿಯೊಬ್ಬಳು PhD ಪದವಿಯನ್ನೇ ತೊರೆದಿರುವ ವಿಚಾರವೊಂದು ಭಾರೀ ಸುದ್ದಿ ಮಾಡುತ್ತಿದೆ. ಯೂಟ್ಯೂಬರ್ ಜಾರಾ ದಾರ್ (YouTuber Zara Dar) ವಯಸ್ಕರ ಕಂಟೆಂಟ್‌ನಿಂದ ಲಕ್ಷಾಂತರ ರೂ. ವರಮಾನ ಬರುತ್ತದೆ ಎಂದು ಅರಿತು ಅದನ್ನೇ ಫುಲ್ ಟೈಂ ಉದ್ಯೋಗ ಮಾಡಿಕೊಳ್ಳಲು ಮುಂದಾಗಿದ್ದಾಳೆ.
ಜಾರಾ ದಾರ್ ಅನ್ನುವ ಮಹಿಳೆ ತಮ್ಮ ಪಿ ಎಚ್ ಡಿ ಕಲಿಕೆಯೊಂದಿಗೆ ಪಾರ್ಟ್ ಟೈಮ್ ಗಾಗಿ ಯೂಟ್ಯೂಬ್ ಚಾನೆಲ್ ಮೂಲಕ ಯಂತ್ರ ಕಲಿಕೆ (Machine Learning) ಮತ್ತುಇತರೆ ವಿಚಾರಗಳ ಕುರಿತಂತೆ ವಿಡಿಯೋ ಮಾಡಿ ಅಪ್ಲೋಡ್ ಮಾಡುತ್ತಿದ್ದಳು. ಈ ವಿಡಿಯೋಗಳು ಹೆಚ್ಚು ಆಸಕ್ತಿದಾಯಕವಾಗಿ ವೈರಲ್ ಆದವು. ಇದೀಗ ಕಂಟೆಂಟ್ ಕ್ರಿಯೇಷನ್ ಅನ್ನೇ ವೃತ್ತಿಯನ್ನಾಗಿಸಿಕೊಳ್ಳಲು ಮುಂದಾಗಿರುವ ಜಾರಾ ದಾರ್ ತಮ್ಮ ಪಿಎಚ್ ಡಿ ಪದವಿಯನ್ನು ಅರ್ಧಕ್ಕೇ ಮೊಟಕುಗೊಳಿಸುತ್ತೇನೆ ಎಂದಿದ್ದಾರೆ.
ಈಕೆ ಯೂಟ್ಯೂಬ್ ಚಾನೆಲ್ ಮೂಲಕವೇ ಸುಮಾರು 1 ಮಿಲಿಯನ್ ಡಾಲರ್ ಹಣ ಗಳಿಸಿದ್ದಾರೆ ಎನ್ನುವ ಮಾಹಿತಿಯು ಲಭ್ಯವಾಗಿದೆ. ಇವರು ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದು ಪಿಎಚ್‌ಡಿ ಓದುತ್ತಿದ್ದರು. ಇದೀಗ ಕಂಟೆಂಟ್ ಕ್ರಿಯೇಷನ್ ಮಾಡಲು ಮುಂದಾಗಿದ್ದಾರೆ.
ಈ ಕುರಿತು ವಿಡಿಯೋ ಕೂಡ ಮಾಡಿರುವ ಜಾರಾ ದಾರ್, “ಪಿಎಚ್‌ಡಿ ಡ್ರಾಪ್ಔಟ್ ಟು ಓನ್ಲಿಫ್ಯಾನ್ಸ್ ಮಾಡೆಲ್” ಎಂಬ ಶೀರ್ಷಿಕೆಯ ಯೂಟ್ಯೂಬ್ ವೀಡಿಯೊದಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಾರೆ. ನಾನು ನನ್ನ ಪಿಎಚ್‌ಡಿ ಶಿಕ್ಷಣವನ್ನು ಕೊನೆಗೊಳಿಸುತ್ತೇನೆ. ನಾನು ಈ ನಿರ್ಧಾರ ಮಾಡಲು ಬಹಳಷ್ಟು ಯೋಚನೆ ಮಾಡಿದ್ದೇನೆ, ನಾನು ಬೇಸರದಿಂದ ಈ ನಿರ್ಧಾರ ತೆಗೆದುಕೊಂಡಿಲ್ಲ ಎಂದಿದ್ದಾರೆ
ತಾನು ಪಿಎಚ್‌ಡಿಯನ್ನು ಓದುವಾಗ ಇದನ್ನು ಸೈಡ್ ಬ್ಯುಸಿನೆಸ್‌ನಂತೆ ಕಂಟೆಂಟ್‌ಗಳನ್ನು ಹಾಕುತ್ತಿದ್ದೆ. ಆದರೆ ಇದರಲ್ಲಿ ಒನ್ ಮಿಲಿಯನ್ ಸಂಪಾದಿಸಿದ್ದೇನೆ. ಇದು ನನಗೆ ಬಹಳ ಖುಷಿ ಕೊಟ್ಟಿದೆ ಇದರಿಂದ ನಾನು ಕುಟುಂಬದ ಸಾಲ ಪಾವತಿಸಿದ್ದೇನೆ ಹಾಗೂ ನನಗೆ ಬೇಕಾದ ಅವಶ್ಯಕತೆ ಇದ್ದ ವಸ್ತುಗಳನ್ನ ಖರೀದಿ ಮಾಡಿದ್ದೇನೆ ಎಂದಿದ್ದಾರೆ. ಈ ನಿರ್ಧಾರ ನನಗೆ ಕಷ್ಟಕರ ಇದ್ದರೂ ಇದರಿಂದ ನನಗೆ ಬೇಸರ ಆಗಿಲ್ಲ. ವೃತ್ತಿಜೀವನದ ಬದಲಾವಣೆ ಮತ್ತು ಅದರ ಭವಿಷ್ಯದ ಒಳಿತಿಗೆ ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ: Gukesh D: ಬಂಗೀ ಜಂಪ್ ಮಾಡಿದ ವಿಶ್ವ ಚೆಸ್ ಚಾಂಪಿಯನ್ ಗುಕೇಶ್; ವಿಡಿಯೊ ವೈರಲ್