Sunday, 11th May 2025

Viral Video: ರಿವರ್ಸ್‌ ಬರ್ತಿದ್ದ ಕಾರಿಗೆ ಹಿಂದಿನಿಂದ ಅಪ್ಪಳಿಸಿದ ಲಾರಿ – ರಣಭೀಕರ ಅಪಘಾತದ ವಿಡಿಯೋ ವೈರಲ್

Accident

ಕುಂದಾಪುರ: ಕಾರಿಗೆ ಹಿಂಬದಿಯಿಂದ ಲಾರು ಡಿಕ್ಕಿ (Accident) ಹೊಡೆದ ಪರಿಣಾಮ ಕಾರಿನಲ್ಲಿದ್ದ ಏಳು ಜನ ಗಂಭೀರ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕುಂಭಾಸಿ (Kumbhashi) ಸಮೀಪದ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬುಧವಾರ ನಡೆದಿದೆ. ಇನೋವಾ ಕಾರಿಗೆ ಇನ್ಸುಲೇಟರ್ ಲಾರಿ ಡಿಕ್ಕಿಯಾಗಿದ್ದು, ಇನೋವಾ ಕಾರಿಗೆ ಹಿಂದಿನಿಂದ ಅತೀ ವೇಗದಿಂದ ಬಂದ ಇನ್ಸುಲೇಟರ್‌ ಲಾರಿ ಢಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ (ನ. 20)ರಂದು ನಡೆದಿದೆ. ಅಪಘಾತದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (Viral Video) ಆಗಿದೆ.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ಭೇಟಿ ನೀಡಿ ಕೇರಳ ಕಡೆಗೆ ಪ್ರಯಾಣಿಸುತ್ತಿದ್ದ ಇನೋವಾ ಕಾರು ಕುಂಭಾಶಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇಗುಲದ ಮಹಾದ್ವಾರ ಇರುವುದನ್ನು ಗಮನಿಸದ ಡ್ರೈವರ್ ಸುಮಾರು 50 ಮೀ. ಮುಂದಕ್ಕೆ ಹೋಗಿದ್ದರು. ಈ ವೇಳೆ ಸಹ ಪ್ರಯಾಣಿಕರು ದೇವಸ್ಥಾನದ ಪ್ರವೇಶ ದ್ವಾರವನ್ನು ಗಮನಿಸಿದ್ದು, ಕಾರಿನಲ್ಲಿದ್ದವರು ಈ ದೇವಸ್ಥಾನಕ್ಕೆ ಹೋಗಲೆಂದು ಚಾಲಕನಿಗೆ ಸೂಚಿಸಿದಂತೆ ಕಾರನ್ನು ಹಿಂದಕ್ಕೆ ಚಲಾಯಿಸಿಕೊಂಡು ಬಂದಿದೆ.

ದುರಾದೃಷ್ಟವಶಾತ್ ದೇಗುಲ ಪ್ರವೇಶ ದ್ವಾರ ತಲುಪಬೇಕು ಎನ್ನುವಷ್ಟರಲ್ಲಿ ಹಿಂದಿನಿಂದ ವೇಗವಾಗಿ ಬಂದ ಇನ್ಸುಲೇಟರ್‌ ಮೀನಿನ ಲಾರಿ ಢಿಕ್ಕಿ ಹೊಡೆದಿದ್ದು, ಪರಿಣಾಮ ಲಾರಿ ಇನೋವಾ ಕಾರನ್ನು ಸುಮಾರು 50 ಮೀಟರ್‌ವರೆಗೂ ಎಳೆದೊಯ್ದಿದೆ. ದೇಗುಲದವರು ಅಳವಡಿಸಿದ ಹೋಲ್ಡಿಂಗ್‌ನ ನಡುವೆ ಹಾದು ಹೋಗಿ ಗಿಡಗಂಟಿಗಳ ಪೊದೆಯೊಳಗೆ ನುಸುಳಿ ಹೋಗಿ ಸಂಪೂರ್ಣ ನುಜ್ಜುಗುಜ್ಜಾಗಿದೆ. ಅಪಘಾತದ ತೀವ್ರತೆಗೆ ಇನ್ಸುಲೇಟರ್‌ ಮೀನಿನ ಲಾರಿಯ ಟಯರ್‌ ಸಿಡಿದು ವಾಹನ ಪಲ್ಟಿಯಾಗಿದೆ.

ಇನ್ನೂ ಇನೋವಾ ಕಾರಿನಲ್ಲಿ ಏಳು ಮಂದಿ ಇದ್ದರು ಎಂದು ತಿಳಿದುಬಂದಿದ್ದು, ಆಪಘಾತಕ್ಕೀಡಾದವರನ್ನು ಕೇರಳ ಪಯ್ಯನೂರು ಮೂಲದ ನಾರಾಯಣನ್‌, ವತ್ಸಲಾ, ಅನಿತಾ, ಚೈತ್ರಾ ಎಂದು ಗುರುತಿಸಲಾಗಿದೆ. ಇನ್ನು ಲಾರಿ ಗುದ್ದಿದ್ದ ರಭಸಕ್ಕೆ ನಾರಾಯಣನ್‌, ವತ್ಸಲಾ, ಅನಿತಾ, ಚೈತ್ರಾ ಗಂಭೀರವಾಗಿ ಗಾಯಗೊಂಡಿದ್ದು, ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದ ಮಧುಸೂದನ್‌, ಭಾರ್ಗವನ್‌, ಚಾಲಕ ಫೈಝಲ್‌ ಹಾಗೂ ಇನ್ಸುಲೇಟರ್‌ ಚಾಲಕ ಹೊನ್ನಾವರದ ಮಹೇಶ್‌ ಅವರೂ ಗಾಯಗೊಂಡಿದ್ದು, ಅವರನ್ನು ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: Viral News: 24 ವರ್ಷದ ಯುವಕ ವಾರಕ್ಕೆ 30 ಗಂಟೆ ದುಡಿದು 2.15 ಕೋಟಿ ರೂ. ಸಂಪಾದಿಸಿದ!

ಕುಂಭಾಶಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇಗುಲದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಅಪಘಾತದ ಸಂಪೂರ್ಣ ದೃಶ್ಯಾವಳಿಗಳು ಸೆರೆಯಾಗಿದ್ದು, ಅಪಘಾತದ ತೀವ್ರತೆಯನ್ನು ಸಾರಿ ಹೇಳುತ್ತಿದೆ. ಅಪಘಾತದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಘಟನೆ ಸಂಭವಿಸುತ್ತಿದ್ದಂತೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆಯ ಠಾಣಾಧಿಕಾರಿ ಪ್ರಸಾದ್‌ ಮತ್ತು ಸುದರ್ಶನ್‌ ಹಾಗೂ ಸಿಬ್ಬಂದಿ ಧಾವಿಸಿ ಪರಿಶೀಲಿಸಿದ್ದಾರೆ.