Monday, 12th May 2025

Viral Video : ಬೈಕ್‌ ಸವಾರನಿಗೆ ಏಕಾಏಕಿ ಗುದ್ದಿದ ಗೂಳಿ… ಮುಂದೇನಾಯ್ತು? ವಿಡಿಯೋ ನೋಡಿ

Viral Video

ನೋಯ್ಡಾ: ಅದೃಷ್ಟ ಕೈ ಕೊಟ್ಟರೆ ಏನು ಬೇಕಾದರೂ ಸಂಭವಿಸಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ತನ್ನ ಪಾಡಿಗೆ ತಾನು ಬೈಕ್‌ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆಯಲ್ಲಿ ಗೂಳಿಯೊಂದು ಬಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಬಿದ್ದು, ಗಾಯಗೊಂಡಿರುವ (Accident) ಘಟನೆ ನವೆಂಬರ್ 13 ರಂದು ರಾತ್ರಿ ಸುಮಾರು  8:30 ರ ಸುಮಾರಿಗೆ ನೋಯ್ಡಾದಲ್ಲಿ ನಡೆದಿದೆ. ಸದ್ಯ ಗೂಳಿ ಡಿಕ್ಕಿ ಹೊಡೆದ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತಿದೆ.  (Viral Video)

ನೋಯ್ಡಾದ ಗ್ರೇಟರ್ ವೆಸ್ಟ್‌ನ ಸೆಕ್ಟರ್ 16-ಬಿ, ಸೂಪರ್‌ಟೆಕ್ ಆಕ್ಸ್‌ಫರ್ಡ್ ಸ್ಕ್ವೇರ್ ಬಳಿ ಕಪ್ಪು ಗೂಳಿಯೊಂದು ಏಕಾಏಕಿ ಬೈಕ್‌ ಸವಾರನ ಕಡೆ ನುಗ್ಗಿದೆ. ಈ ವೇಳೆಯಲ್ಲಿ ಬೈಕ್‌ ನಿಯಂತ್ರಣ ಕಳೆದುಕೊಂಡ ಸವಾರ ಕೆಳಗೆ ಬಿದ್ದಿದ್ದಾನೆ. ಅದೃಷ್ಟವಶಾತ್‌ ಘಟನೆಯಲ್ಲಿ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಬೈಕ್‌ ಸವಾರ ಬಿದ್ದ ಕೂಡಲೇ ಸುತ್ತ ಮುತ್ತಲಿದ್ದವರು ಸಹಾಯಕ್ಕಾಗಿ ಧಾವಿಸಿದ್ದಾರೆ. ಕೂಡಲೇ ಆತನನ್ನು ಎತ್ತಿ ಪಕ್ಕಕ್ಕೆ ಕರೆದುಕೊಂಡು ಹೋಗಿದ್ದಾರೆ. ಗೂಳಿ ಡಿಕ್ಕಿ ಹೊಡೆದ ದೃಶ್ಯವನ್ನು ಕಾರು ಚಾಲಕನೊಬ್ಬ ವಿಡಿಯೋ ಮಾಡಿಕೊಂಡಿದ್ದು, ಈಗ ವೈರಲ್‌ ಆಗಿದೆ.

ದೀಪಾವಳಿಗೆ ಮನೆಗೆ ಹೋಗುತ್ತಿದ್ದವ ಮಸಣಕ್ಕೆ

ದೀಪಾವಳಿ ಹಬ್ಬಕ್ಕೆಂದು ಮನೆಗೆ ಹೋಗುತ್ತಿದ್ದ 28 ವರ್ಷದ ಯುವಕ ಹೆದ್ದಾರಿಯಲ್ಲಿ ಬಿಡಾಡಿ ದನಗಳನ್ನು ತಪ್ಪಿಸಲು ಪ್ರಯತ್ನಿಸಿ ಬೈಕ್‌ನ್ನು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ. ಅಮ್ರೋಹಾ ಜಿಲ್ಲೆಯ ರಾಜಬ್‌ಪುರ ಪ್ರದೇಶದ ಜೋಯಾ ಟೋಲ್ ಪ್ಲಾಜಾ ಬಳಿ ಘಟನೆ ನಡೆದಿದೆ. ಮೃತ ಯುವಕನ್ನು ಪುಷ್ಕರ್ ಸಿಂಗ್ ಬಿಶ್ತ್ ಎಂದು ಗುರುತಿಸಲಾಗಿದೆ. ನೋಯ್ಡಾದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Road Accident: ಕುಕ್ಕೆ ಸುಬ್ರಹ್ಮಣ್ಯದಿಂದ ಮರಳುತ್ತಿದ್ದ ದಂಪತಿ ಅಪಘಾತದಲ್ಲಿ ಬಲಿ, ಮಕ್ಕಳು ಅನಾಥ

ಪ್ರತ್ಯೇಕ ಘಟನೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧನೊಬ್ಬನ ಮೇಲೆ ಏಕಾಏಕಿ ಗೂಳಿ ದಾಳಿ ನಡೆಸಿದ ಘಟನೆ ಮೀರತ್‌ನಲ್ಲಿ ನಡೆದಿತ್ತು. ವಾಕಿಂಗ್‌ ಮಾಡುತ್ತಿದ್ದ ಗೂಳಿ ಎಲ್ಲಿಂದಲೋ ಬಂದು ದಾಳಿ ನಡೆಸಿತ್ತು. ಘಟನೆಯಲ್ಲಿ ವೃದ್ಧ ಗಂಭೀರವಾಗಿ ಗಾಯಗೊಂಡಿದ್ದರು.  ಸ್ಥಳೀಯ ಅಂಗಡಿಕಾರರು ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು.