Monday, 12th May 2025

Viral News: ಗರ್ಭಿಣಿ ಪತ್ನಿಯನ್ನು ಹುಡುಕಿಕೊಡಿ ಎಂದು ಕೋರ್ಟ್ ಮೆಟ್ಟಿಲೇರಿದ ಪತಿ; ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಹೆಂಡ್ತಿಯ ‘ಆ’ ಸೀಕ್ರೆಟ್!

ಅಹಮದಾಬಾದ್: ಇದೊಂಥರಾ ವಿಚಿತ್ರ ಸುದ್ದಿ! ತನ್ನ ಹೆಂಡತಿ ಬೇರೊಬ್ಬನ ಜೊತೆ ಹೋದಳೆಂದು ಗಂಡ ಅಲವತ್ತುಕೊಂಡು ಪೊಲೀಸ್ ದೂರು ಕೊಡುವಂತಹ ಹಲವಾರು ಪ್ರಕರಣಗಳನ್ನು ನಾವು ಕೇಳುತ್ತಿರುತ್ತೇವೆ. ಆಥವಾ ತನ್ನ ಗಂಡನನ್ನು ಬೇರೊಬ್ಬ ಮಹಿಳೆ ಬುಟ್ಟಿಗೆ ಹಾಕಿಕೊಂಡಿದ್ದಾಳೆಂದು ಪತ್ನಿಯರು ನ್ಯಾಯಕ್ಕಾಗಿ ಮೊರೆ ಇಡುವುದನ್ನೂ ಕೇಳಿದ್ದೇವೆ. ಆದರೆ ಇದೊಂಥರಾ ಪಕ್ಕಾ ಉಲ್ಟಾ ಕೇಸ್! ತನ್ನ ಗರ್ಭಿಣಿ ಹೆಂಡತಿ ನಾಪತ್ತೆಯಾಗಿದ್ದು, ಆಕೆ ತನ್ನ ಸಲಿಂಗಿ ಗೆಳತಿಯ ಜೊತೆ ಹೋಗಿದ್ದಾಳೆ ಎಂದು ಗಂಡನೊಬ್ಬ ನ್ಯಾಯಾಲಯದ ಮೆಟ್ಟಿಲೇರಿರುವ ಅಪರೂಪದಲ್ಲಿ ಅಪರೂಪವೆನ್ನಬಹುದಾದ ಪ್ರಕರಣದ ಸುದ್ದಿಯೊಂದು ಇದೀಗ ಸಿಕ್ಕಾಪಟ್ಟೆ ವೈರಲ್ (Viral News) ಆಗುತ್ತಿದೆ.

ಈ ಘಟನೆ ನಡೆದಿರುವುದು ಗುಜರಾತ್ (Gujarat) ರಾಜ್ಯದ ಅಹಮದಾಬಾದ್ ನಲ್ಲಿ (Ahmedabad). ತನ್ನ ಏಳು ತಿಂಗಳ ಗರ್ಭಿಣಿ ಪತ್ನಿ ಕಾಣೆಯಾಗಿದ್ದು ಆಕೆ ತನ್ನ ಸಲಿಂಗಿ ಗೆಳತಿಯೊಂದಿಗೆ ಹೋಗಿದ್ದಾಳೆ ಎಂದು ಆರೊಪಿಸಿ ಈ ಪತಿರಾಯ ಇದಿಗ ಗುಜರಾತ್ ಹೈಕೋರ್ಟ್ ನಲ್ಲಿ (Gujarat High Court) ದೂರು ದಾಖಲಿಸಿದ್ದಾನೆ. ತನ್ನ ಪತ್ನಿ ಕಳೆದ ಅಕ್ಟೋಬರ್ ತಿಂಗಳಲ್ಲಿ ಮನೆ ಬಿಟ್ಟು ಹೋದವಳು ಇದುವರೆಗೂ ಮನೆಗೆ ವಾಪಾಸು ಬಂದಿಲ್ಲ. ಪತ್ನಿ ಕಾಣೆಯಾದ ಸಂದರ್ಭದಲ್ಲಿ ಚಾಂದ್ ಖೇಡಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ಸಹ ದಾಖಲಿಸಿದ್ದೆ, ಆದರೆ ಆಕೆ ಎಲ್ಲಿದ್ದಾಳೆಂಬುದು ಇದುವರೆಗೂ ಪತ್ತೆಯಾಗಿಲ್ಲ, ಹಾಗಾಗಿ ಈ ಸಂತ್ರಸ್ತ ಪತಿ ನ್ಯಾಯಕ್ಕಾಗಿ ಇದೀಗ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಈ ನಡುವೆ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರಿಗೆ ಕುತುಹಲಕಾರಿ ಮಾಹಿತಿಯೊಂದು ಲಭಿಸಿತ್ತು. ಅದೇನೆಂದರೆ, ಈ ಮಹಿಳೆಗೆ ಮೊದಲೇ ತನ್ನ ಗೆಳತಿಯೊಂದಿಗೆ ಸಲಿಂಗ ಸಂಬಂಧವಿತ್ತು ಮತ್ತು ಇನ್ನೂ ಆಶ್ಚರ್ಯದ ವಿಷಯವೆಂದ್ರೆ ಈ ವಿಚಾರ ಎರಡೂ ಕುಟುಂಬದವರಿಗೆ ಮಾತ್ರವಲ್ಲದೇ ಆಕೆಯ ಪತಿಗೂ ಗೊತ್ತಿತ್ತು ಎಂಬ ಅಂಶ ಖಾಕಿ ತನಿಖೆಯಲ್ಲಿ ಬಯಲಾಗಿದೆ.

ಈ ಸುದ್ದಿಯನ್ನೂ ಓದಿ: Viral News: ಬಾಲಕನ ಅಕೌಂಟಿಗೆ ಬಿತ್ತು 87 ಕೋಟಿ ರೂ.! ಬ್ಯಾಲೆನ್ಸ್ ಚೆಕ್ ಮಾಡಿದವನಿಗೆ ‘ಸ್ವರ್ಗ ಒಂದು ಕ್ಷಣ ರಪ್ ಅಂತ ಪಾಸಾದ ಅನುಭವ..!’

ಈ ನಡುವೆ ತನ್ನ ಪತ್ನಿಯನ್ನು ಹುಡುಕಿಕೊಡುವಂತೆ ಸಂತ್ರಸ್ತ ಪತಿ ನ್ಯಾಯಾಲಯದ ಮೆಟ್ಟಿಲೇರಿದ ಕಾರಣ, ಗುಜರಾತ್ ಹೈಕೋರ್ಟ್ ಇದೀಗ ಸಂಬಂಧಪಟ್ಟ ಪೊಲೀಸರಿಗೆ ಹಾಗೂ ಗುಜರಾತ್ ಸರಕಾರಕ್ಕೆ ನೊಟೀಸ್ ಜಾರಿಗೊಳಿಸಿ, ಆಕೆಯನ್ನು ಡಿ.23ರೊಳಗೆ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಕಟ್ಟುನಿಟ್ಟಿನ ನಿರ್ದೇಶನ ನಿಡಿದೆ.

ಒಟ್ಟಿನಲ್ಲಿ, ಮದುವೆಯಾಗಿ ಪತ್ನಿಯೊಂದಿಗೆ ಸುಖ ಸಂಸಾರದ ಕನಸು ಕಾಣುತ್ತಿದ್ದ ಮತ್ತು ತನ್ನ ಪತ್ನಿಯ ಹೊಟ್ಟೆಯಲ್ಲಿ ತನ್ನ ವಂಶದ ಕುಡಿ ಬೆಳೆಯುತ್ತಿರುವುದನ್ನು ಕಂಡು ಸಂತೋಷಪಡಬೆಕಿದ್ದ ಪತಿರಾಯ ಇದೀಗ ಪತ್ನಿಯ ಇ ಕಿತಾಪತಿಯ ಕಾರಣದಿಂದ ಪೊಲೀಸ್ ಠಾಣೆ ಹಾಗೂ ಕೋರ್ಟ್ ಮೆಟ್ಟಿಲೇರುವ ಪ್ರಸಂಗ ಒದಗಿ ಬಂದಿದೆ.. ಎಲ್ಲಾ ಕಲಿಗಾಲ ಸ್ವಾಮಿ.. ಕಲಿಗಾಲ!!