ಹೈದರಾಬಾದ್: ಮೂರು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ನಾಗ ಚೈತನ್ಯ(Naga Chaitanya) ಹಾಗೂ ಶೋಭಿತಾ ಧೂಳಿಪಾಲ(Sobhita Dhulipala) ನೆನ್ನೆ ಅಂದರೆ ಡಿಸೆಂಬರ್ 4ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.. ಅಕ್ಕಿನೇನಿ ಕುಟುಂಬ ಬಹಳ ಅದ್ದೂರಿಯಾಗಿ ಶೋಭಿತಾ ಅವರನ್ನು ಸ್ವಾಗತಿಸಿದ್ದು, ಸೀಮಿತ ಅತಿಥಿಗಳ ನಡುವೆ ಧಾಂ ಧೂಂ ಅಂತ ನಾಗ ಚೈತನ್ಯ ಹಾಗೂ ಶೋಭಿತಾ ಮದುವೆ ನಡೆದಿದೆ(Viral Video).
ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ವಿಶೇಷವಾಗಿ ಏರ್ಪಡಿಸಲಾಗಿದ್ದ ಮದುವೆ ಮಂಟಪದಲ್ಲಿ ಡಿಸೆಂಬರ್ 4ರ ರಾತ್ರಿ 8.13 ಕ್ಕೆ ನಾಗ ಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ಅವರ ಮದುವೆ ನಡೆದಿದೆ. ಸ್ಟುಡಿಯೋದಲ್ಲಿರುವ ಅಕ್ಕಿನೇನಿ ನಾಗೇಶ್ವರ ರಾವ್ ಪ್ರತಿಮೆಯ ಮುಂಭಾಗದಲ್ಲಿ ನಾಗ ಚೈತನ್ಯ ಶೋಭಿತಾಗೆ ತಾಳಿ ಕಟ್ಟಿದ್ದು, ಈ ವೇಳೆ ಶೋಭಿತಾ ಭಾವುಕವಾಗಿರುವ ವಿಡೀಯೋ(Video Viral) ಸದ್ಯ ಸಾಮಾಜಿಕ ಜಾಲತಾಣ(Social Media)ದಲ್ಲಿ ಸದ್ದು ಮಾಡುತ್ತಿದೆ.
ಪ್ರತಿಯೊಬ್ಬ ಹೆಣ್ಣಿಗೂ ಮದುವೆ ಅಂದರೆ ಒಂದು ಸುಂದರ ಕನಸಾಗಿರುತ್ತದೆ. ಅದರಲ್ಲಿ ಇಷ್ಟಪಟ್ಟ ಹುಡುಗನನ್ನು ವರಿಸುವುದು ಅವಳ ಪಾಲಿಗೆ ಬೆಲೆ ಕಟ್ಟಲಾಗದ ಕ್ಷಣವಾಗಿರುತ್ತದೆ. ಹಾಗೇ ಶೋಭಿತಾ ಕೂಡ ತನ್ನ ಮನದರಸನನ್ನು ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದು, ಮನಸ್ಸಿಗೆ ಹಿಡಿಸಿದ ಹುಡುಗನೊಂದಿಗೆ ಜೀವನ ಹಂಚಿಕೊಳ್ಳುತ್ತಿರುವ ಖುಷಿಯಲ್ಲಿ ಕಣ್ಣೀರಾಗಿದ್ದಾರೆ. ಹೌದು ನಾಗಚೈತನ್ಯ, ಶೋಭಿತಾ ಕೊರಳಿಗೆ ತಾಳಿ ಕಟ್ಟುತ್ತಿದಂತೆ ಕಣ್ತುಂಬಿಕೊಂಡಿದ್ದು, ಮಾಂಗಲ್ಯಧಾರಣೆ ವೇಳೆ ಶೋಭಿತಾ ಎಮೋಷನಲ್ ಆಗಿರುವ ದೃಶ್ಯ ವಿಡೀಯೋದಲ್ಲಿ ಸೆರೆಯಾಗಿದೆ.
ಹೈದರಾಬಾದ್‌ನ ‘ಅನ್ನಪೂರ್ಣ ಸ್ಟುಡಿಯೋ’ದಲ್ಲಿ ನಾಗ ಚೈತನ್ಯ ಮತ್ತು ಶೋಭಿತಾ ಅವರ ಮದುವೆ ನಡೆದಿದೆ. ಕುಟುಂಬದ ಸದಸ್ಯರು ಮತ್ತು ಆಪ್ತ ಬಳಗದವರು ಈ ಮದುವೆಯಲ್ಲಿ ಪಾಲ್ಗೊಂಡಿದ್ದಾರೆ. ಅಕ್ಕಿನೇನಿ ನಾಗೇಶ್ವರ ರಾವ್ ಅವರ ಮೂರ್ತಿಯ ಕೆಳಗೆ ಮದುವೆ ನಡೆದಿರುವುದು ವಿಶೇಷ ಎಂದು ನಾಗಾರ್ಜುನ ಅವರು ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳು ವೈರಲ್(viral) ಆಗಿದ್ದು, ಅಭಿಮಾನಿಗಳು ಹೊಸ ಜೋಡಿಗೆ ಅಭಿನಂದನೆ ತಿಳಿಸುತ್ತಿದ್ದಾರೆ.
ಇನ್ನು ನಾಗ ಚೈತನ್ಯ ತಂದೆ, ಹಿರಿಯ ನಟ ನಾಗಾರ್ಜುನ ಅವರು ಸೋಶಿಯಲ್ ಮೀಡಿಯಾದಲ್ಲಿ ಮದುವೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹೊಸ ಜೀವನ ಆರಂಭಿಸುತ್ತಿರುವ ಮಗನಿಗೆ ಅವರು ಆಶೀರ್ವಾದ ಮಾಡಿದ್ದಾರೆ. ನಾಗ ಚೈತನ್ಯ ಮತ್ತು ಶೋಭಿತಾ ಅವರ ಮದುವೆಯ ಫೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿವೆ.
ಶೋಭಿತಾ ಧೂಳಿಪಾಲ ಅವರು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಮದುವೆಯ ಬಗ್ಗೆ ನಿಯಮಿತವಾಗಿ ಮಾಹಿತಿಯನ್ನು ಹಂಚಿಕೊಳ್ಳುತ್ತಲೇ ಇದ್ದರು. ಮಂಗಳ ಸ್ನಾನ, ಹಳದಿ ಫೋಟೋಗಳು ಮತ್ತು ವಿಡಿಯೋಗಳು ಈಗಾಗಲೇ ವೈರಲ್ ಆಗಿದ್ದವು. ಇದೀಗ ಮದುವೆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು,ತಾಳಿ ಕಟ್ಟುವ ವಿಡೀಯೋ ನೆಟ್ಟಿಗರ ಗಮನ ಸೆಳೆದಿದೆ.
ಇನ್ನೂ, ಸ್ಟಾರ್ ನಟ ನಾಗ ಚೈತನ್ಯಗೆ ಇದು ಎರಡನೇ ಮದುವೆಯಾಗಿದೆ. ಈ ಸ್ಟಾರ್ ಜೋಡಿಯ ಮದುವೆಗೆ ಎರಡು ಕಡೆಯ ಕುಟುಂಬಸ್ಥರು, ಕೆಲ ಗಣ್ಯರು, ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಹೀಗಾಗಿ ಅಕ್ಕಿನೇನಿ ಕುಟುಂಬವಂತೂ ಹಿರಿಯ ಮಗನಿಗೆ ಮದುವೆ ಹಿನ್ನೆಲೆಯಲ್ಲಿ ಸಂತಸದಲ್ಲಿ ಮುಳುಗಿದೆ. ಇನ್ನೂ ಭರ್ಜರಿ ವಿವಾಹದ ಬಳಿಕ ರಾಜಸ್ಥಾನ ಅಥವಾ ವಿದೇಶದಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್ ಮಾಡಲು ಪ್ಲಾನ್ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಈ ಸುದ್ದಿಯನ್ನೂ ಓದಿ: Vikrant Massey: ‘ಆಂಖೋಂಕಿ…’ ಚಿತ್ರದ ಸೆಟ್‌ನಲ್ಲಿ ವಿಕ್ರಾಂತ್ ಮ್ಯಾಸ್ಸೆ ಪ್ರತ್ಯಕ್ಷ; ಲಾಂಗ್ ಬ್ರೇಕ್ ಮೇಲೆ ಹೋಗಿದ್ದ ನಟ ಶಾರ್ಟ್ ಬ್ರೇಕ್‌ನೊಂದಿಗೆ ವಾಪಾಸ್!