Saturday, 10th May 2025

Vikrant Massey: ‘ಆಂಖೋಂಕಿ…’ ಚಿತ್ರದ ಸೆಟ್‌ನಲ್ಲಿ ವಿಕ್ರಾಂತ್ ಮ್ಯಾಸ್ಸೆ ಪ್ರತ್ಯಕ್ಷ; ಲಾಂಗ್ ಬ್ರೇಕ್ ಮೇಲೆ ಹೋಗಿದ್ದ ನಟ ಶಾರ್ಟ್ ಬ್ರೇಕ್‌ನೊಂದಿಗೆ ವಾಪಾಸ್!

ಮುಂಬೈ: ಪ್ರತಿಭಾನ್ವಿತ ನಟ ವಿಕ್ರಾಂತ್ ಮಾಸ್ಸೆ (Vikrant Massey) ಬಣ್ಣದ ಲೋಕಕ್ಕೆ ಮೊನ್ನೆಯಷ್ಟೇ ನಿವೃತ್ತಿ(Retirement) ಘೋಷಿಸಿದ್ದರು. ʼ12th ಫೇಲ್ʼ, ʼಸೆಕ್ಟರ್ 36ʼ, ʼಮಿರ್ಜಾಪುರʼ, ʼದಿ ಸಾಬರಮತಿ ರಿಪೋರ್ಟ್‌ʼ, ʼಛಪಕ್‌ʼ ಮುಂತಾದ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ, ವೃತ್ತಿ ಜೀವನದಲ್ಲಿ ಉತ್ತುಂಗದಲ್ಲಿರುವಾಗಲೇ ಸಿನಿಮಾ ಬದುಕಿಗೆ ವಿಕ್ರಾಂತ್ ಮೆಸ್ಸಿ ವಿದಾಯ ಹೇಳಿದ್ದರು. 37 ವರ್ಷದ ವಿಕ್ರಾಂತ್ ಮಾಸ್ಸೆ ತಮ್ಮ ಸಹಜ ನಟನೆಯಿಂದಲೇ ಗುರುತಿಸಿಕೊಂಡಿರುವ ಕಲಾವಿದ. ಇನ್‌ಸ್ಟಾಗ್ರಾಂ(Instagram)ನಲ್ಲಿ ನಿವೃತ್ತಿಯ ಬಗ್ಗೆ ವಿಕ್ರಾಂತ್ ಮೆಸ್ಸಿ ಬರೆದುಕೊಂಡಿದ್ದರು. ಇದೀಗ ಹೊಸ ಚಿತ್ರವೊಂದರ ಸೆಟ್‌ನಲ್ಲಿ ಕಾನಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ʼʼಕಳೆದ ಕೆಲವು ವರ್ಷಗಳು ನಿರೀಕ್ಷೆಗೂ ಮೀರಿದ್ದಾಗಿತ್ತು. ಎಂದೂ ಮರೆಯಲಾಗದ ನಿಮ್ಮೆಲ್ಲರ ಬೆಂಬಲಕ್ಕೆ ನಾನು ಚಿರಋಣಿಯಾಗಿದ್ದೇನೆ. ಇದೀಗ ನಾನು ಮನೆಗೆ ಹಿಂದಿರಗುವ ಸಮಯ ಬಂದಿದೆ. ನನ್ನನ್ನು ನಾನು ಅರಿತುಕೊಳ್ಳಲು ಇದುವೇ ಸೂಕ್ತವಾದ ಸಮಯ. ನಟನಾಗಿರುವ ನಾನು ಒಬ್ಬ ಗಂಡನಾಗಿ, ತಂದೆ ಮತ್ತು ಮಗನಾಗಿ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ. 2025ರಲ್ಲಿ ಕೊನೆಯ ಬಾರಿ ಸಿನಿಮಾ ಮೂಲಕ ನಿಮ್ಮನ್ನು ಕೊನೆಯ ಬಾರಿಗೆ ಭೇಟಿಯಾಗುತ್ತೇನೆ. ಕೊನೆಯ 2 ಸಿನಿಮಾಗಳು ಮತ್ತು ಹಲವು ವರ್ಷಗಳ ನೆನಪುಗಳು ನನ್ನೊಂದಿಗಿವೆ. ಎಲ್ಲ ವಿಷಯಗಳಿಗೂ ಮತ್ತು ನಮ್ಮ ನಡುವಿನ ಎಲ್ಲ ಸಂಬಂಧಕ್ಕೂ ಮತ್ತೊಮ್ಮೆ ಧನ್ಯವಾದಗಳನ್ನು ಹೇಳುತ್ತೇನೆ. ನಿಮ್ಮೆಲ್ಲರ ಪ್ರೀತಿಗೆ ಯಾವಾಗಲೂ ಆಭಾರಿಯಾಗಿರುತ್ತೇನೆʼʼ ಎಂದು ವಿಕ್ರಾಂತ್ ಮಾಸ್ಸೆ ಹೇಳಿಕೊಂಡಿದ್ದರು.

ಈ ಪೋಸ್ಟ್ ನೋಡುತ್ತಿದ್ದಂತೆ ಅಭಿಮಾನಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದರು. ಈ ನಿರ್ಧಾರವನ್ನು ಹಿಂದೆ ತೆಗೆದುಕೊಳ್ಳಬೇಕು. ನಿಮ್ಮನ್ನು ಸದಾ ನಾವು ತೆರೆಯ ಮೇಲೆ ನೋಡಲು ಇಷ್ಟಪಡುತ್ತೇವೆ. ಈ ನಿರ್ಧಾರದ ಹಿಂದಿನ ಕಾರಣ ಏನು ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದರು. ಆದರೆ ಇದೀಗ ವಿಕ್ರಾಂತ್ ಮಾಸ್ಸೆ ಸಿನೆಮಾ ಚಿತ್ರೀಕರಣಕ್ಕೆ ಹಿಂದಿರುಗಿದ್ದು, ನಿವೃತ್ತಿಯ ಘೋಷಣೆಯಿಂದ ಹಿಂದೆ ಸರಿದಿದ್ದು, ನಾನು ಹಾಗೆ ಹೇಳಲೇ ಇಲ್ಲ ಎಂದಿದ್ದಾರೆ.

ತಮ್ಮ ಮುಂದಿನ ಸಿನೆಮಾ ʼಆಂಖೋನ್ ಕಿ ಗುಸ್ತಾಖಿಯಾನ್‌ʼ (Aankhon Ki Gustaakhiyan) ಚಿತ್ರೀಕರಣಕ್ಕಾಗಿ ಶನಯಾ ಕಪೂರ್( Shanaya Kapoor) ಜತೆ ಡೆಹ್ರಡೂನ್(Dehradun)ಗೆ ತೆರಳಿರುವ ವಿಡಿಯೊ (video) ಇದೀಗ ವೈರಲ್(viral) ಆಗಿದೆ. ಅಲ್ಲದೇ ಈ ಕುರಿತು ಇತ್ತೀಚಿಗಿನ ಸಂದರ್ಶನ ಒಂದರಲ್ಲಿ ಮಾತನಾಡಿರುವ ಅವರು, ʼʼನಾನು ಚಿತ್ರರಂಗದಿಂದ ನಿವೃತ್ತಿಯಾಗಿಲ್ಲ. ನಾನು ಮಾನಸಿಕ ಹಾಗೂ ದೈಹಿಕವಾಗಿ ಆಯಾಸವಾಗಿದ್ದೇನೆ. ನನಗೆ ದೊಡ್ಡದೊಂದು ಬ್ರೇಕ್‌ನ ಅಗತ್ಯವಿದೆ. ಕುಟುಂಬವನ್ನು ಮಿಸ್‍ ಮಾಡಿಕೊಳ್ಳುತ್ತಿದ್ದೇನೆ. ಹಾಗಾಗಿ, ಚಿತ್ರರಂಗದಿಂದ ಒಂದಿಷ್ಟು ಸಮಯ ವಿರಾಮ ತೆಗೆದುಕೊಳ್ಳುವ ಬಗ್ಗೆ ಬರೆದಿದ್ದೆ. ಆದರೆ ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ನನಗೆ ನಟನೆ ಬಿಟ್ಟು ಬೇರೇನೂ ಗೊತ್ತಿಲ್ಲ. ನಟನೆ ನನಗೆ ಜೀವನದಲ್ಲಿ ಎಲ್ಲವನ್ನೂ ಕೊಟ್ಟಿದೆ. ಆದರೆ, ದೈಹಿಕವಾಗಿ ಮತ್ತು ಮಾನಸಿಕವಾಗಿ ಸ್ವಲ್ಪ ಸುಸ್ತಾಗಿದ್ದೇನೆ. ನನಗೊಂದು ಬ್ರೇಕ್‍ ಬೇಕು ಎಂದಿದ್ದಾರೆʼʼ ಎಂದು ಸ್ಪಷ್ಟನೆ ನೀಡಿದ್ದಾರೆ.

ನನ್ನ ನಟನೆ ಕೌಶಲ್ಯವನ್ನು ಮತ್ತಷ್ಟು ಉತ್ತಮಗೊಳಿಸುವುದಕ್ಕೆ ಒಂದಿಷ್ಟು ಸಮಯ ಬೇಕು. ಹಾಗಾಗಿ, ಸ್ವಪ ದಿನ ಇಂಡಸ್ಟ್ರಿಯಿಂದ ದೂರವಿರುವುದಕ್ಕೆ ಯೋಚಿಸಿದ್ದೆ. ಆದರೆ, ನನ್ನ ಮಾತುಗಳನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ. ನಾನು ಚಿತ್ರರಂಗದಿಂದ ದೂರವಾಗುತ್ತಿದ್ದೇನೆ ಎಂದು ಅರ್ಥ ಮಾಡಿಕೊಳ್ಳಲಾಗಿದೆ. ಅದು ತಪ್ಪು. ನಾನು ಒಂದಿಷ್ಟು ಸಮಯ ನನ್ನ ಆರೋಗ್ಯ ಮತ್ತು ಕುಟುಂಬದ ಕುರಿತು ಗಮನಹರಿಸವ ಅವಶ್ಯಕತೆ ಇದೆ. ಎಲ್ಲಾವೂ ಸರಿ ಹೋದ ಮೇಲೆ ಪುನಃ ಬರುತ್ತೇನೆ’ ಎಂದು ವಿಕ್ರಾಂತ್‍ ಹೇಳಿಕೊಂಡಿದ್ದಾರೆ.

ಇನ್ನು ವಿಕ್ರಾಂತ್‍ ಮಾಸ್ಸೆ ಅಭಿನಯದ ‘ದಿ ಸಾಬರ್ಮತಿ ರಿಪೋರ್ಟ್‌’ ಚಿತ್ರವು ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಧೀರಜ್‍ ಶರ್ಮಾ ನಿರ್ದೇಶನದ ಈ ಚಿತ್ರವನ್ನು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಸಹ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:  PV Sindhu: ಮದುವೆ ಖಚಿತಪಡಿಸಿದ ಪಿ.ವಿ. ಸಿಂಧು