Saturday, 10th May 2025

Urfi Javed: ಅಪ್ಸರೆಯಂತೆ ಕಂಗೊಳಿಸಿದ ಉರ್ಫಿ ಜಾವೇದ್‌; ಶ್ರೀದೇವಿ, ಜೂಹಿ ಚಾವ್ಲಾಗೆ ಹೋಲಿಸಿದ ನೆಟ್ಟಿಗರು

ಮುಂಬೈ: ಬಾಲಿವುಡ್‌(Bollywood) ನಟಿ, ಸೋಷಿಯಲ್‌ ಮೀಡಿಯಾ(Social Media) ಇನ್‌ಫ್ಲೂಯೆನ್ಸರ್‌(Influencer) ಉರ್ಫಿ ಜಾವೇದ್‌(Urfi Javed) “ಹೊಸ ಬಗೆಯ ಫ್ಯಾಷನ್‌”(Fashion) ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌(Viral) ಆಗುತ್ತ ಇರುತ್ತಾರೆ. ಸೋಷಿಯಲ್‌ ಮೀಡಿಯಾದಲ್ಲಿ ಸದಾ ಭಿನ್ನವಾದ ಫೋಟೋ ಶೂಟ್‌, ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಫ್ಯಾನ್ಸ್‌ಗೆ ಮುದ ನೀಡುತ್ತಾರೆ.

ಮೈಮೇಲೆ ಬಟ್ಟೆಗಿಂತಲೂ ಹೆಚ್ಚಾಗಿ ಬೇರೆ ಬೇರೆ ವಸ್ತುಗಳನ್ನೇ ಹಾಕಿಕೊಳ್ಳುವ ಉರ್ಫಿ ಜಾವೇದ್​, ಈಗ ಸೀರೆ ತೊಟ್ಟ ವಿಡಿಯೋ ಒಂದು ವೈರಲ್​ ಆಗ್ತಿದೆ. ಉರ್ಫಿ ಸೀರೆ ತೊಡೋದಾ? ಸಾಧ್ಯನೇ ಇಲ್ಲ ಎಂದು ಹಲವರು ಹೇಳಬಹುದು. ಆದರೆ ನಿಜಕ್ಕೂ ಉರ್ಫಿ ಸೀರೆ ತೊಟ್ಟಿದ್ದಾರೆ. ಹಾಗಂತ ಮಾಮೂಲಿ ರೀತಿ ಅವರ ಬಟ್ಟೆ ಹಾಕಲು ಸಾಧ್ಯನೆ? ಸಾಧ್ಯವೇ ಇಲ್ಲ ಬಿಡಿ. ಹೆಸರಿಗೆ ಇವರು ತೊಟ್ಟಿರೋದು ಸೀರೆ. ಆದರೆ ಅದಕ್ಕೆ ಬ್ಲೌಸ್ ಇಲ್ಲ ಎಂಬುದು ವಿಶೇಷವಾಗಿದ್ದು, ಉರ್ಫಿ ಈ ಲುಕ್ ಅನ್ನು ನೆಟ್ಟಿಗರು ಅಪ್ಸರೆಗೆ ಹೋಲಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಅವರ ಈ ಉಡುಗೆ ಶ್ರೀದೇವಿ – ಜೂಹಿ ಚಾವ್ಲಾ ಅವರ ಸಿನೆಮಾ ದಿನಗಳನ್ನು ನೆನಸುತ್ತಿದೆ ಎಂಬ ಮಾತು ಕೇಳಿ ಬಂದಿದೆ.

ಹೌದು ಇತ್ತೀಚೆಗೆ ಮುಂಬೈಯಲ್ಲಿ ನಡೆದ ಪ್ಯಾಶನ್ ಶೋ ಕಾರ್ಯಕ್ರಮವೊಂದರಲ್ಲಿ ಉರ್ಫಿ ಕಾಣಿಸಿಕೊಂಡಿದ್ದು. ಅವರ ಫ್ಯಾಷನ್ ಎಲ್ಲರ ಗಮನ ಸೆಳೆದಿದೆ. ಕಡು ನೀಲಿ ಬಣ್ಣದ ಸೀರೆಯಲ್ಲಿ ಉರ್ಫಿ ಫೋಸ್ ಕೊಟ್ಟಿದ್ದು, ಜಡೆಯ ಹೇರ್ ಸ್ಟೈಲ್ ಮಾಡಿ ಅದಕ್ಕೆ ಮುತ್ತನ್ನು ಹೋಲುವ ಕಿರೀಟವನ್ನು ಧರಿಸಿದ್ದಾರೆ.. ಅಲ್ಲದೇ ಗಾಢ ಲಿಪ್‌ಸ್ಟಿಕ್ ಮತ್ತು ಸ್ಟಡ್ ಕಿವಿಯೋಲೆಗಳನ್ನು ಧರಿಸಿ ಲೈಟ್ ಮೇಕಪ್ ಮಾಡಿದ್ದು, ತಮ್ಮ ಲುಕ್ ಗಮನ ಸೆಳೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ…

ಅಪ್ಸರೆಯಂತೆ ಮಿಂಚಿರುವ ಉರ್ಫಿಯನ್ನು ನೆಟ್ಟಿಗರು ಹಾಡಿಹೊಗಳುತ್ತಿದ್ದು, ನಿಮ್ಮ ಈ ಫ್ಯಾಶನ್ ಲುಕ್ 90ರ ದಶಕದ ರಿಷಿ ಕಂಪೂರ್ ಹಾಗೂ ಶ್ರೀದೇವಿ ನಟನೆಯ ಚಾಂದಿನಿ ಸಿನೆಮಾ, aadmi aur apsar ಸಿನೆಮಾ ಹಾಗೂ ಶಾರೂಖ್ ಖಾನ್ ಹಾಗೂ ಜೂಹಿ ಚಾವ್ಲಾ ಧಾರ್ ಫಿಲಂ ಅನ್ನು ನೆನಪಿಸುತ್ತಿದೆ ಎಂದಿದ್ದಾರೆ.

ಬಾಲಿವುಡ್‌ ನಟಿ ಉರ್ಫಿ ಜಾವೇದ್‌ ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚು ಜನಪ್ರಿಯತೆ ಪಡೆದಿದ್ದಾರೆ. ಇವರು 1997ರ ಅಕ್ಟೋಬರ್‌ 15ರಂದು ಲಖನೌನ ಮುಸ್ಲಿಂ ಕುಟುಂಬದಲ್ಲಿ ಜನಿಸಿದರು. ಕಿರುತೆರೆ ನಟಿಯಾಗಿ ಮತ್ತು ಸೋಷಿಯಲ್‌ ಮೀಡಿಯಾ ಪರ್ಸನಾಲಿಟಿಯಾಗಿ ಜನಪ್ರಿಯತೆ ಪಡೆದಿದ್ದಾರೆ. ವಿಶೇಷವಾಗಿ ವಿನೂತನ ಫ್ಯಾಷನ್‌ ಪರ್ಸನಾಲಿಟಿಯಿಂದ ಫೇಮಸ್‌ ಆಗಿದ್ದಾರೆ. 2021ರಲ್ಲಿ ವೂಟ್‌ನಲ್ಲಿ ಬಿಗ್‌ ಬಾಸ್‌ ಒಟಿಟಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು.

ಉರ್ಫಿ ಜಾವೇದ್‌ ಬಾಲ್ಯ ಕಷ್ಟಕರವಾಗಿತ್ತಂತೆ. ತಂದೆಯ ಕೆಟ್ಟ ವರ್ತನೆಯಿಂದ ಬೇಸೆತ್ತಿದ್ದರು. ಮೇರಿ ದುರ್ಗಾ ಸಿನಿಮಾದ ನಟ ಪಾರಸ್‌ ಕಲ್ನಾವತ್‌ ಜತೆ ಡೇಟಿಂಗ್‌ ಮಾಡಿ ಸುದ್ದಿಯಲ್ಲಿದ್ದರು. ಕೆಲವು ವರ್ಷಗಳಲ್ಲಿ ಇವರಿಬ್ಬರು ಬ್ರೇಕಪ್‌ಗೊಂಡಿದ್ದರು. ತನ್ನ ಹೆಸರನ್ನು ಉರ್ಫಿ ಬದಲು ಊರ್ಫಿ ಎಂದು ಬದಲಾಯಸಿಕೊಂಡಿದ್ದರು. ಸೋನಿ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಬಡೇ ಬಯ್ಯಾ ಕಿ ದುಲ್ಹಾನಿಯಾದಲ್ಲಿ ಅವನಿ ಪಂತ್‌ ಆಗಿ ನಟಿಸಿದ್ದರು. ಚಂದ್ರ ನಂದಿನಿ ಸೀರಿಯಲ್‌ನಲ್ಲಿ ಛಾಯಾ ಆಗಿದ್ದರು. ಮೇರಿ ದುರ್ಗಾ ಸೀರಿಯಲ್‌ನಲ್ಲಿ ಆರತಿಯಾಗಿ ಕಾಣಿಸಿಕೊಂಡಿದ್ದರು. ಹೀಗೆ ಹಲವು ಸೀರಿಯಲ್‌ಗಳ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದ ಇವರು ಇತ್ತೀಚಿನ ವರ್ಷಗಳಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ಸೆನ್ಸೆಷನ್‌ ಉಂಟುಮಾಡುತ್ತಿದ್ದಾರೆ.

ಇನ್ನು ಯಾರೂ ಊಹಿಸದ ರೀತಿಯಲ್ಲಿ ಉರ್ಫಿ ಜಾವೇದ್​ ಪ್ರಯೋಗ ಮಾಡುತ್ತಾರೆ. ಗಮ್​ ಟೇಮ್​, ಎಲೆಕ್ಟ್ರಿಕ್​ ವೈರ್​, ಕಸದ ಚೀಲ, ಮೊಟ್ಟೆ ಸೇರಿದಂತೆ ಮುಂತಾದ ವಸ್ತುಗಳಿಂದ ಅವರು ಮಾನ ಮುಚ್ಚಿಕೊಂಡಿದ್ದೂ ಉಂಟು! ಇಂಥ ಅವತಾರ ನೋಡಿದ ಬಳಿಕ ನೆಟ್ಟಿಗರು ಅವರನ್ನು ಹಿಗ್ಗಾಮುಗ್ಗಾ ಟ್ರೋಲ್​ ಮಾಡಿದ್ದಾರೆ. ಹಾಗಿದ್ದರೂ ಕೂಡ ಉರ್ಫಿ ಜಾವೇದ್​ ವರ್ತನೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಕೆಲವರಂತೂ ಪೊಲೀಸರಿಗೆ ದೂರು ನೀಡಿದ ಉದಾಹರಣೆ ಕೂಡ ಇದೆ.

ಈ ಸುದ್ದಿಯನ್ನು ಓದಿ: Pushpa 2 Movie: ‘ಪುಷ್ಪ 2’ ಚಿತ್ರಕ್ಕಾಗಿ ದುಬಾರಿ ಸಂಭಾವನೆ ಪಡೆದು ದಾಖಲೆ ನಿರ್ಮಿಸಿದ ಅಲ್ಲು ಅರ್ಜುನ್‌; ರಶ್ಮಿಕಾಗೆ ಸಿಕ್ಕಿದ್ದೆಷ್ಟು?