Saturday, 10th May 2025

ಹೆಬ್ಬಾರ್ ಬಿಜೆಪಿ ಸೇರ್ಪಡೆಯಿಂದ ಅವರ ರಾಜಕೀಯ ಜೀವನ ನಶಿಸುವ ಹಂತದಲ್ಲಿದೆ

ಶಿರಸಿ:
ಮಾಜಿ ಸಚಿವ ವಿನಯಕುಮಾರ ಸೊರಕೆ
ನಗರದ ಜಿಲ್ಲಾ‌ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿದರು.

ಮೌಲ್ಯ, ಅಪಮೌಲ್ಯ ಸತ್ಯ ಮತ್ತು ಅಸತ್ಯದ ಹಾಗೂ ಸಜ್ಜನರ ಹಾಗೂ ದುರ್ಜನರ ನಡುವಿನ ಚುನಾವಣೆಯಾಗಿದೆ ಎಂದ ಅವರು, ಜನ ಅನರ್ಹರಿಗೆ ಮಣೆ ಹಾಕುತ್ತಾರೊ ಅರ್ಹರಿಗೊ ಎನ್ನುವುದು ಎಲ್ಲರಿಗೂ ತಿಳಿದಿದೆ ಎಂದರು.

ದಿನಕರ ದೇಸಾಯಿ, ಹರ್ಡೀಕರ್ ಮಂಜಪ್ಪ ಹಾಗೂ ರಾಮಕೃಷ್ಣ ಹೆಗಡೆಯವರಂತಹ ಆದರ್ಶ ಪ್ರಾಯರ ಜಿಲ್ಲೆಯಲ್ಲಿ ಅನರ್ಹರಿಗೆ
ಎರಡು ಬಾರಿ‌ ಶಾಸಕರಾಗಿ ಅಧಿಕಾರ ಪಡೆದವರನ್ನು ನ್ಯಾಯಾಯಲ ಅನರ್ಹ ಎಂದಿದೆ. ಕ್ಷೇತ್ರದ ಜನ ಅನರ್ಹರಿಗೆ ಮತ್ತೊಮ್ಮೆ ಅವಕಾಶ ನೀಡಬಾರದು.

ಹಿರಿಯ ರಾಜಕಾರಣಿ ಕಾಗೇರಿ ಅವರನ್ನು ಸಭಾಧ್ಯಕ್ಷರನ್ನಾಗಿಸಿ ಅನರ್ಹ ಪಟ್ಟಿಯಲ್ಲಿರುವ ಹೆಬ್ಬಾರ್ ಉಪಚುನಾವಣೆಯಲ್ಲಿ ಗೆದ್ದರೆ ಉಸ್ತುವಾರಿ ಪಟ್ಟ ನೀಡುವ ಯೋಜನೆಯಲ್ಲಿದೆ.
ಹೆಬ್ಬಾರ್ ಬಿಜೆಪಿ ಸೇರ್ಪಡೆಯಿಂದ ಅವರ ರಾಜಕೀಯ ಜೀವನ ನಶಿಸುವ ಹಂತದಲ್ಲಿದೆ.
ಅನರ್ಹರು ಅರ್ಹರಾಗಬೇಕೆ ಅಥವಾ ಅರ್ಹರು ಚುನಾವಣೆ ಗೆಲ್ಲಬೇಕೆ ಎಂಬುದನ್ನು ಮತದಾರರು ನಿರ್ಧರಿಸಬೇಕಿದೆ.
ಭೀಮಣ್ಣ ಅವರನ್ನು ಕ್ಷೇತ್ರದ ಜನತೆ ಸಜ್ಜನರ ಪಟ್ಟಿಯಲ್ಲಿ ಸೇರ್ಪಡಿಸಿದರೆ, ಹೆಬ್ಬಾರ್ ಅವರನ್ನು ದುರ್ಜನರಂತೆ ನೋಡುತ್ತಿದ್ದಾರೆ.
ಅಧಿಕಾರ ದಾಹಕ್ಕೋಸ್ಕರ‌ ಸಿದ್ಧಾಂತ ಬಲಿಕೊಟ್ಟು ಪಕ್ಷಾಂತರ ಮಾಡಿರುವ ಹೆಬ್ಬಾರ್ ಗಣಿಧಣಿಗಳ ನಂಟು ಹೊಂದಿದ್ದಾರೆ.
ಈ ಬಾರಿ ಭೀಮಣ್ಣ ಗೆಲ್ಲವುದರಲ್ಲಿ ಯಾವುದೇ ಅನುಮಾನ ಬೇಡ ಎಂದರು ಅವರು,
ಸಿದ್ಧರಾಮಯ್ಯ ಅವರ ಗುಣಗಾನ ಮಾಡುತ್ತಿದ್ದ ಹೆಬ್ಬಾರ್ ಊಸರವಳ್ಳಿಯಂತೆ ಬಣ್ಣ ಬದಲಾಯಿಸಿ ಯಡಿಯೂರಪ್ಪ ನಮ್ಮ ನೆಚ್ಚಿನ ನಾಯಕ ಎನ್ನುತ್ತಿದ್ದಾರೆ. ಆದರೆ
ಸಜ್ಜನ ಭೀಮಣ್ಣ ಗೆಲ್ತಾರೆ ಎಂದರು.

Leave a Reply

Your email address will not be published. Required fields are marked *