Monday, 12th May 2025

ಆಂಧ್ರಪ್ರದೇಶ ಸಿಎಂ ತಾಯಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

ಕರ್ನೂಲ್‌: ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್‌ ಮೋಹನ ರೆಡ್ಡಿ ಅವರ ತಾಯಿ ವೈ.ಎಸ್‌ ವಿಜಯಮ್ಮ ಪ್ರಯಾಣಿ ಸುತ್ತಿದ್ದ ಕಾರು ಗುರುವಾರ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ವಿಜಯಮ್ಮ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಾಜಿ ಶಾಸಕಿ ವಿಜಯಮ್ಮ ಅವರು ತಮ್ಮ ಪತಿ ದಿವಂಗತ ವೈ.ಎಸ್‌ ರಾಜಶೇಖರರೆಡ್ಡಿ ಅವರ ಸ್ನೇಹಿತನ ಕುಟುಂಬವನ್ನು ಭೇಟಿ ಮಾಡಲೆಂದು ಕರ್ನೂಲ್‌ಗೆ ಬಂದಿದ್ದರು. ಕರ್ನೂಲ್‌ನಿಂದ ಹೊರಟ ಅವರ ಕಾರಿನ ಚಕ್ರದ ಟೈರ್‌ ಒಡೆದು ಅಪಘಾತ ಸಂಭವಿಸಿದೆ. ಗುತ್ತಿ ರಸ್ತೆಯಲ್ಲಿ ಈ ಅವಘಡ ನಡೆದಿದ್ದು, ವಿಜಯಮ್ಮ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಳೆದ […]

ಮುಂದೆ ಓದಿ