ಆರೋಗ್ಯ ರಕ್ಷಣೆಗೆ ಅಗತ್ಯವಾಗಿ ಬೇಕಾದಂಥ ಪೋಷಕಾಂಶಗಳು ನಮಗೆ ದೊರೆಯುತ್ತಿವೆ ಎಂಬುದು ಖಾತ್ರಿಯಾದರೆ ಉತ್ತಮ ಆರೋಗ್ಯವೂ ಖಾತ್ರಿಯಾದಂತೆ. ಹಾಗಾದರೆ ಚಳಿಗಾಲದಲ್ಲಿ (Winter Season Care) ನಮ್ಮ ಪ್ರತಿರೋಧಕ ಶಕ್ತಿ ಜಾಗೃತವಾಗಿ ಇರುವಂತೆ ಮಾಡುವ ಪೋಷಕಾಂಶಗಳು ಮತ್ತು ಆಹಾರಗಳು ಯಾವುವು?
ನಾಲ್ಕು ದಿನ ಕಾಡಿಸುವ ನೆಗಡಿ, ಜ್ವರ, ಗಂಟಲುನೋವು ಕಡಿಮೆ ಆದ ಮೇಲೂ ಕಫ- ಕೆಮ್ಮು ತಾರಕಕ್ಕೇರಿ ಇನ್ನೂ ನಾಲ್ಕು ದಿನ ಚೇತರಿಸಿಕೊಳ್ಳುವುದಕ್ಕೆ ಬೇಕು ಎಂಬಂಥ ಸ್ಥಿತಿಗೆ ಪುಟಾಣಿಗಳನ್ನು...