ಹೆತ್ತು-ಹೊತ್ತು ತುತ್ತುಣಿಸಿ (Viral Video) ಸಾಕಿದ ಮಕ್ಕಳು ತಂದೆ-ತಾಯಿಯ ಕಣ್ಮುಂದೆಯೇ ಜೀವಬಿಟ್ಟರೆ ಆ ತಂದೆ-ತಾಯಿಯ ಸ್ಥಿತಿ ಹೇಗಿರಬೇಡ ಹೇಳಿ. ಇದೆಲ್ಲದಕ್ಕೂ ಹೆಚ್ಚು ತಂದೆ-ತಾಯಿಯೇ ಆ ಮಕ್ಕಳ ಹೆಣವನ್ನು ಹೊತ್ತು ನಡೆಯುವುದು. 6 ಮತ್ತು 3 ವರ್ಷದ ಇಬ್ಬರು ಪುಟ್ಟ ಸಹೋದರರು ಜ್ವರದಿಂದ ಬಳಲುತ್ತಿದ್ದರು. ಗ್ರಾಮದಲ್ಲಿ ಸರಿಯಾದ ಆರೋಗ್ಯ ಸೌಲಭ್ಯಗಳಿಲ್ಲದ ಕಾರಣ ಪೋಷಕರು ತಮ್ಮ ಮಕ್ಕಳನ್ನು ಊರಿನ ಅರ್ಚಕರ ಬಳಿಗೆ ಕರೆದೊಯ್ದು ಗಿಡಮೂಲಿಕೆ ಔಷಧಿಗಳನ್ನು ನೀಡಿದ್ದಾರೆ. ಇದರಿಂದ ಅವರ ಆರೋಗ್ಯ ಮತ್ತಷ್ಟು ಹದೆಗೆಟ್ಟು ಜೀವ ಕಳೆದುಕೊಂಡಿದ್ದಾರೆ. ದಂಪತಿ ಅವರ ಶವಗಳನ್ನು ಹೆಗಲ ಮೇಲೆ ಹೊತ್ತುಕೊಂಡು 15 ಕಿಲೋಮೀಟರ್ ನಡೆದು ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ತಮ್ಮ ಹಳ್ಳಿಯನ್ನು ತಲುಪಿದ್ದಾರೆ. ಅವರು ಮಕ್ಕಳ ಶವಗಳನ್ನು ಹೊತ್ತು ಅಳುತ್ತಾ ಬರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Viral Video: ಅಮ್ರೋಹ ಜಿಲ್ಲೆಯಲ್ಲಿರುವ ಖಾಸಗಿ ಶಾಲೆ ಹಿಲ್ಟನ್ ಕಾನ್ವೆಂಟ್‌ನ ಮುಸ್ಲಿಂ ಬಾಲಕನೋರ್ವ ಮಧ್ಯಾಹ್ನದ ಊಟಕ್ಕೆಂದು ಮಾಂಸಾಹಾರವನ್ನು ಬುತ್ತಿಯಲ್ಲಿ ತಂದಿದ್ದ. ಈ ವಿಚಾರ ತಿಳಿದು ಶಾಲೆಯ ಪ್ರಿನ್ಸಿಪಾಲ್...