ವಿಯೆಟ್ನಾಂ: ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಬೇಕಾಬಿಟ್ಟಿ ಓಡಾಡಿದ್ದ ವ್ಯಕ್ತಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಲೆ ವಾನ್ ಟ್ರೈ ಎಂಬ ವ್ಯಕ್ತಿ ಜುಲೈನಲ್ಲಿ ಕರೋನಾ ವೈರಸ್ ಹಾಟ್‌ಸ್ಪಾಟ್ ಹೋ ಚಿ ಮಿನ್ಹ್ ನಗರದಿಂದ ತನ್ನ ತವರು ಪ್ರಾಂತ್ಯ ವಾದ ಕಾ ಮೌಗೆ ಪ್ರಯಾಣಿಸಿದ್ದರು. ಬೇರೆ ಪ್ರಾಂತ್ಯಗಳಿಂದ ಆಗಮಿಸುವವರಿಗೆ ಇಲ್ಲಿ 21 ದಿನಗಳ ಕ್ವಾರಂಟೈನ್ ನಿಯಮ ವಿಧಿಸಲಾಗಿದೆ. ಈ ನಿಯಮ ಉಲ್ಲಂಘಿಸಿ ನಗರದಲ್ಲಿ ತಿರುಗಾಡಿದ ಆರೋಪದ ಮೇರೆಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಈತ ಇತರ […]