ವಾಷಿಂಗ್ಟನ್: ಸುಂಟರಗಾಳಿಯ ಅಬ್ಬರಕ್ಕೆ ಅಮೆರಿಕದ 5 ರಾಜ್ಯಗಳಲ್ಲಿ ಇದು ವರೆಗೂ 80 ಜನರು ಮೃತಪಟ್ಟಿದ್ದಾರೆ. “ಅಮೆರಿಕದ ಇತಿಹಾಸದಲ್ಲಿಯೇ ಇದು ಬಹುದೊಡ್ಡ ಸುಂಟರಗಾಳಿ” ಎಂದು ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಅರ್ಕಾನ್ಸಾಸ್, ಮಿಸಿಸಿಪ್ಪಿ, ಇಲಿನಾಯ್ಸ್, ಕೆಂಟುಕಿ, ಟೆನ್ನೆಸ್ಸಿ ರಾಜ್ಯಗಳಲ್ಲಿ ಶನಿವಾರ ಸುಂಟರಗಾಳಿಯು ಭಾರೀ ಹಾನಿ ಮಾಡಿದೆ. ಕೆಂಟುಕಿಯಲ್ಲಿಯೇ ಸುಮಾರು 50 ಜನರು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಗಾಳಿಯ ಅಬ್ಬರಕ್ಕೆ ಮೇಣದ ಬತ್ತಿ ತಯಾ ರಿಕಾ ಕಾರ್ಖನೆ ಸಂಪೂರ್ಣ ನಾಶಗೊಂಡಿದೆ. ಸುಂಟರಗಾಳಿ ಬೀಸುವಾಗ ಕಾರ್ಖನೆಯಲ್ಲಿ 110 ಜನರು ಕೆಲಸ ಮಾಡುತ್ತಿದ್ದರು. […]