ಲಾಸ್ ಏಂಜಲೀಸ್: ಅಮೆರಿಕದ ಟಿವಿ ನಿರೂಪಕ, ಸಂದರ್ಶಕ, ವಕ್ತಾರರಾಗಿ 5 ದಶಕಗಳಿಗೂ ಅಧಿಕ ಕಾಲ ಖ್ಯಾತನಾಮರನ್ನು ಸಂದರ್ಶಿಸಿದ ಲ್ಯಾರಿ ಕಿಂಗ್ ಎಂದೇ ಜನಪ್ರಿಯ ಲಾರೆನ್ಸ್ ಹಾರ್ವೆ ಜೈಗರ್ ಅವರು ನಿಧನರಾಗಿದ್ದಾರೆ. ಲಾಸ್ ಏಂಜಲೀಸ್‌ನ ಸೆಡಾರ್ಸ್ ಸಿನಾಯಿ ಮೆಡಿಕಲ್ ಸೆಂಟರ್ ನಲ್ಲಿ 87 ವರ್ಷ ವಯಸ್ಸಿನ ಕಿಂಗ್ ನಿಧನರಾದರು. ಲ್ಯಾರಿ ಕಿಂಗ್ಸ್ ಸ್ಥಾಪಿಸಿದ ಸ್ಟುಡಿಯೋ, ನೆಟ್ವರ್ಕ್ ಒರಾ ಮೀಡಿಯಾ, ಕಿಂಗ್ ಅವರ ನಿಧನಕ್ಕೆ ಏನು ಕಾರಣ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಮಿಖಾಯಿಲ್ ಗೊರ್ಬಚೇವ್, ವ್ಲಾದಿಮಿರ್ ಪುಟಿನ್, ಯಾಸಿರ್ ಅರಾಫತ್, ದಲಾಯಿ […]