Wednesday, 14th May 2025

ಭೀಕರ ರಸ್ತೆ ಅಪಘಾತ: ಕಾರು-ಟ್ರಕ್ ಮುಖಾಮುಖಿ ಡಿಕ್ಕಿ, ಏಳು ಸಾವು

ಸುರೇಂದ್ರನಗರ್: ಗುಜರಾತಿನ ಸುರೇಂದ್ರನಗರ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಾರು ಹಾಗೂ ಟ್ರಕ್ ಮುಖಾ ಮುಖಿ ಹೊಡೆದ ಪರಿಣಾಮ ಏಳು ಮಂದಿ ದುರ್ಮರಣವನ್ನಪ್ಪಿದ್ದಾರೆ. ಸುರೇಂದ್ರ ನಗರದ ಪಟ್ದಿ ಪ್ರದೇಶದಲ್ಲಿ ಅಪಘಾತ ಸಂಭವಿಸಿದೆ ಎಂದು ಜಿಲ್ಲಾ ಉಪ ಅಧೀಕ್ಷಕ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ದೌಡಾಯಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.

ಮುಂದೆ ಓದಿ