ಲಂಡನ್: ಲಿಝ್ ಟ್ರಸ್ ಅವರನ್ನು ಮುಂದಿನ ಬ್ರಿಟನ್ ಪ್ರಧಾನಿಯಾಗಿ ಘೋಷಣೆ ಮಾಡಿದ ತಕ್ಷಣ ಗೃಹ ಕಾರ್ಯದರ್ಶಿ ಹುದ್ದೆಗೆ ಭಾರತೀಯ ಮೂಲದ ಸಂಸದೆ ಸುಯೆಲ್ಲಾ ಬ್ರೆವೆರ್‍ಮನ್ ನೇಮಕಗೊಳ್ಳುವ ನಿರೀಕ್ಷೆ ಇದೆ. ಗೃಹ ಕಾರ್ಯದರ್ಶಿ ಹುದ್ದೆಗೆ ಭಾರತೀಯ ಮೂಲದ ಪ್ರೀತಿ ಪಟೇಲ್ ರಾಜೀ ನಾಮೆ ನೀಡಿದ್ದಾರೆ. ಪ್ರಧಾನಿ ಬೋರಿಸ್ ಜಾನ್ಸನ್ ರಿಗೆ ಪತ್ರ ಬರೆದಿರುವ ಪ್ರೀತಿ, ಬ್ರಿಟನ್‍ನ ಗೃಹ ಕಾರ್ಯದರ್ಶಿ ಅಥವಾ ಆಂತರಿಕ ಸಚಿವೆ ಹುದ್ದೆಯನ್ನು ತೊರೆಯಲು ನಿರ್ಧ ರಿಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಲಿಝ್ ಟ್ರಸ್ ಅವರಿಗೆ ಬೆಂಬಲ ನೀಡುವು ದಾಗಿಯೂ […]