Thursday, 15th May 2025

ಸ್ಫೋಟಕಗಳ ತಯಾರಿಕೆ: ವಿದ್ಯಾರ್ಥಿಗಳು ಸೇರಿ 9 ಮಂದಿ ಬಂಧನ

ಹಾಂಗ್‌ಕಾಂಗ್‌: ಸ್ಫೋಟಕಗಳ ತಯಾರಿಕೆ ಆರೋಪದಡಿ, ಆರು ಮಂದಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ. 15 ರಿಂದ 39 ವಯಸ್ಸಿನೊಳಗಿನ ಐದು ಮಂದಿ ಯುವಕರು ಮತ್ತು ನಾಲ್ವರು ಯುವತಿಯರನ್ನು ಬಂಧಿಸ ಲಾಗಿದೆ. ಆರೋಪಿಗಳು ಭಯೋತ್ಪದನಾ ಚಟುವಟಿಕೆ ಗಳಿಗಾಗಿ ಸ್ಫೋಟಕಗಳನ್ನು ಬಳಸಲು ಸಂಚು ಹೂಡಿದ್ದರು ಎಂದು ಶಂಕಿಸಲಾಗಿದೆ. ‘ಹಾಸ್ಟೆಲ್‌ನಲ್ಲಿ ನಿರ್ಮಿಸಿದ ಪ್ರಯೋಗಾಲಯದಲ್ಲಿ ಸ್ಫೋಟಕಗಳನ್ನು ತಯಾರಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಳ್ಳಲಾಯಿತು’ ಎಂದು ಹೊಸ ರಾಷ್ಟ್ರೀಯ ಭದ್ರತಾ ಘಟಕದ ಹಿರಿಯ ಅಧೀಕ್ಷಕ ತಿಳಿಸಿದರು. ರೈಲ್ವೆ ನೆಟ್‌ವರ್ಕ್ ಮತ್ತು ನ್ಯಾಯಾಲಯದ […]

ಮುಂದೆ ಓದಿ