ಮ್ಯಾಂಚೆಸ್ಟರ್: ಇಂಗ್ಲೆಂಡ್ ಮತ್ತು ಶ್ರೀಲಂಕಾ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವು ಬುಧವಾರ ಮ್ಯಾಚೆಂಸ್ಟರ್ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆಯುತ್ತಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪ್ರವಾಸಿ ಶ್ರೀಲಂಕಾ ತಂಡ, ಆಂಗ್ಲರ ವೇಗಕ್ಕೆ ನಡುಗಿ 63 ರನ್ ಗಳಿಸುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡಿದೆ. ವೇಗಿ ಕ್ರಿಸ್ ವೋಕ್ಸ್ ಎರಡು ವಿಕೆಟ್ ಕಬಳಿಸಿದರು. ಬಿದ್ದ ನಾಲ್ಕು ವಿಕೆಟ್ ಗಳು ವೇಗಿಗಳ ಪಾಲಾಗಿದೆ. ನಾಯಕ ಧನಂಜಯ್ ಡಿ’ಸಿಲ್ವಾ ಹಾಗೂ ವಿಕೆಟ್ ಕೀಪರ್ ದಿನೇಶ್ ಚಾಂಡಿಮಾಲ್ ಇನ್ನಿಂಗ್ಸ್ ಮುಂದುವರಿಸಿದ್ದಾರೆ. ದ್ವಿತೀಯ […]