ಸುಮಾರು 400 ವರ್ಷಗಳ ಹಿಂದೆ ಪನಸನಾಳದ ನದಿಯ ದಡದಲ್ಲಿ ಭಾರೀ ಕಪ್ಪು ಬಂಡೆಯೊಂದು ಉರುಳಿ ಬಂದಿತ್ತು. ಅದನ್ನು ಕೆತ್ತಲು ಗ್ರಾಮಸ್ಥರು ಮುಂದಾದರು. ಆದರೆ ಕುರುಬನೊಬ್ಬ ಬಂಡೆಯಿಂದ ರಕ್ತ ಬರುವುದನ್ನು ನೋಡಿದ. ಆ ದಿನ ರಾತ್ರಿ ಶನಿ ದೇವರು ಅವನ ಕನಸಿನಲ್ಲಿ ಬಂದು ಇದು ನನ್ನ ಕಲ್ಲು. ಪ್ರತಿ ಮನೆಯ ಭದ್ರತೆಯನ್ನು ನೋಡಿಕೊಳ್ಳುವುದಾಗಿ ಭರವಸೆ ನೀಡಿ ಹಳ್ಳಿಯನ್ನು ಕಾವಲು ಕಾಯಲು ತೆರೆದ ಜಾಗದಲ್ಲಿ ಈ ಕಲ್ಲನ್ನು ಇರಿಸಲು ಕೇಳಿಕೊಂಡ ಎನ್ನಲಾಗಿದೆ. ಆ ಬಳಿಕ ಶನಿ ದೇವರ ಕಲ್ಲನ್ನು ಬಯಲು ಆಲಯದಲ್ಲಿ ಇಡಲಾಗಿದೆ. ಹೀಗಾಗಿ ಇಲ್ಲಿರುವ ಮನೆಗಳಿಗೂ ಬಾಗಿಲುಗಳನ್ನು ಇಡುತ್ತಿಲ್ಲ. ಇದು ಸಂಪ್ರದಾಯವಾಗಿ ಬೆಳೆದು ಬಂದಿದೆ.