ಸ್ಯಾಂಡಲ್‌ವುಡ್‌ನ ಸೂಪರ್ ಸಕ್ಸಸ್ ಜೋಡಿಗಳಲ್ಲಿ ಒಂದಾಗಿರುವ ರಚಿತಾ ರಾಮ್ ಹಾಗೂ ಸತೀಶ್ ನೀನಾಸಂ ಮತ್ತೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಹೌದು ‘ಅಯೋಗ್ಯ 2’ ಸಿನಿಮಾಗಾಗಿ (Ayogya-2 Movie) ರಚಿತಾ ರಾಮ್ ಮತ್ತು ಸತೀಶ್ ನೀನಾಸಂ ಒಂದಾಗಿದ್ದಾರೆ. ಸೂಪರ್ ಹಿಟ್ ಅಯೋಗ್ಯ ಸಿನಿಮಾ ಮೂಲಕ ಮೋಡಿ ಮಾಡಿದ್ದ ಈ ಜೋಡಿ ಇದೀಗ 6 ವರ್ಷಗಳ ಬಳಿಕ ಮತ್ತೆ ಅಭಿಮಾನಿಗಳನ್ನು ರಂಜಿಸಲು ರೆಡಿಯಾಗಿದ್ದಾರೆ. ಈ ಕುರಿತ ವಿವರ ಇಲ್ಲಿದೆ.