ಕೋಲ್ಕತ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಯ ಅವರು ಪದ್ಮಭೂಷಣ ಪ್ರಶಸ್ತಿ ತಿರಸ್ಕರಿಸಿದ ಬೆನ್ನಲ್ಲೇ ಬಂಗಾಳದ ಗಾಯಕಿ ಸಂಧ್ಯಾ ಮುಖರ್ಜಿ ಅನುಸರಿಸಿ ದ್ದಾರೆ. ಕೇಂದ್ರ ಸರ್ಕಾರ ನೀಡಿದ ಪದ್ಮಶ್ರೀ ಪ್ರಶಸ್ತಿಯನ್ನು 90 ವರ್ಷದ ಗಾಯಕಿ ಮತ್ತು ಸಂಗೀತಗಾರ್ತಿ ಸಂಧ್ಯಾ ಮುಖರ್ಜಿ ತಿರಸ್ಕರಿಸಿದ್ದಾರೆ. ಸಂಧ್ಯಾ ಮುಖರ್ಜಿ ಅವರ ಪುತ್ರಿ ಸೌಮಿ ಸೆಂಗುಪ್ತಾ ಅವರು, ಕಲಾವಿದೆಗೆ 90ನೇ ವಯಸ್ಸಿನಲ್ಲಿ ಪ್ರಶಸ್ತಿ ನೀಡುವುದು ನಿಜಕ್ಕೂ ಅವಮಾನವಾಗಿದೆ. ಹೀಗಾಗಿ ಪ್ರಶಸ್ತಿಯನ್ನು ನಿಕಾರಿಸಿದ್ದಾರೆ ಎಂದು ಹೇಳಿದ್ದಾರೆ. ನಮ್ಮ ತಾಯಿ ರಾಜಕೀಯವನ್ನು ಮೀರಿದವರು. ರಾಜಕೀಯ […]