Wednesday, 14th May 2025

ಕನ್ನಡ ಚಲನಚಿತ್ರರಂಗದ “ಅಪ್ಪು’ ಪುನೀತ್​ ರಾಜ್​ಕುಮಾರ್ ಇನ್ನಿಲ್ಲ

ಬೆಂಗಳೂರು: ಕನ್ನಡ ಚಲನಚಿತ್ರದಲ್ಲಿ “ಅಪ್ಪು’ ಎಂದೇ ಖ್ಯಾತ ನಟ ಪುನೀತ್​ ರಾಜ್​ಕುಮಾರ್ (46) ಶುಕ್ರವಾರ ನಿಧನರಾದರು. ಅವರಿಗೆ ಗುರುವಾರ ರಾತ್ರಿಯೇ ಲಘು ಹೃದಯಾಘಾತವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಪುನೀತ್ ರಾಜ್‌ಕುಮಾರ್ ವ್ಯಾಯಾಮ ಮಾಡುವ ಸಂದರ್ಭ ಲಘು ಹೃದಯಾಘಾತ ಆಗಿತ್ತು. ನಂತರ ಪುನೀತ್ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ನಂತರ ಶುಕ್ರವಾರ ಬೆಳಿಗ್ಗೆ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗಾಗಲೇ ವಿಕ್ರಂ ಆಸ್ಪತ್ರೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದ್ದು, ನಟ ಪುನೀತ್​ ರಾಜ್​ಕುಮಾರ್ ಸಾವು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. […]

ಮುಂದೆ ಓದಿ