ಶಾರ್ಜಾ: ಹ್ಯಾಟ್ರಿಕ್ ಜಯದ ಕನಸು ಹೊತ್ತಿದ್ದ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಸೋಮವಾರ ರಾತ್ರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಕ್ಕೆ ದಂಗಾಯಿತು. ಅಬ್ಬರದ ಬ್ಯಾಟಿಂಗ್ ನಂತರ ಮೊನಚಾದ ಬೌಲಿಂಗ್ ಪ್ರದರ್ಶನ ನೀಡಿದ ಆರ್‌ಸಿಬಿ ಕೋಲ್ಕತ್ತ ತಂಡವನ್ನು 82 ರನ್‌ಗಳಿಂದ ಮಣಿಸಿ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿತು. 195 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಕೋಲ್ಕತ್ತದ ದಿಗ್ಗಜ ಬ್ಯಾಟ್ಸ್ ಮನ್‌ಗಳು ಕ್ರಿಸ್ ಮಾರಿಸ್ ಅವರ ವೇಗ ಹಾಗೂ ವಾಷಿಂಗ್ಟನ್ ಸುಂದರ್ ಅವರ ಸ್ಪಿನ್ ದಾಳಿಗೆ ಕಂಗಾಲಾದರು. ಒಂಬತ್ತು ವಿಕೆಟ್ ಕಳೆದುಕೊಂಡು […]