Monday, 12th May 2025

Karnataka High Court: ನಾಯಿ ಮಾಲಿಕರೇ ಗಮನಿಸಿ, ಪಾರ್ಕ್‌ನಲ್ಲಿ ನಾಯಿ ಕಕ್ಕ ಮಾಡಿಸಿದ್ರೆ ಭಾರಿ ದಂಡ ಖಚಿತ!

ಬೆಂಗಳೂರು: ಸಾರ್ವಜನಿಕ ಉದ್ಯಾನವನಗಳಲ್ಲಿ (Public park) ತಮ್ಮ ಸಾಕುಪ್ರಾಣಿಗಳ ಮಲವಿಸರ್ಜನೆ ಮಾಡಿಸಿ ಅದನ್ನು ಶುಚಿಗೊಳಿಸದ ನಾಯಿ ಮಾಲಿಕರಿಗೆ (Dog owners) ಭಾರಿ ದಂಡವನ್ನು ವಿಧಿಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಗೆ ಕರ್ನಾಟಕ ಹೈಕೋರ್ಟ್ (Karnataka High Court) ಆದೇಶಿಸಿದೆ. ಶುಚಿತ್ವದ ನಿಯಮಗಳನ್ನು ಉಲ್ಲಂಘಿಸುವ ಮತ್ತು ಶುಚಿಗೊಳಿಸುವಲ್ಲಿ ಬೇಜವಾಬ್ದಾರಿಯಿಂದ ವರ್ತಿಸುವ ನಾಯಿ ಮಾಲೀಕರಿಗೆ ಹೆಚ್ಚಿನ ದಂಡವನ್ನು ವಿಧಿಸುವಂತೆ ಬೈಲಾವನ್ನು ತಿದ್ದುಪಡಿ ಮಾಡುವಂತೆ ಬಿಬಿಎಂಪಿಗೆ ಹೈಕೋರ್ಟ್‌ ನಿರ್ದೇಶಿಸಿದೆ. “ಸಾಕುಪ್ರಾಣಿ ಮಾಲೀಕರಿಗೆ ತಮ್ಮ ನಾಯಿಗಳನ್ನು ಉದ್ಯಾನವನಗಳಿಗೆ ಕರೆದೊಯ್ಯುವ ಸ್ವಾತಂತ್ರ್ಯವಿದ್ದರೆ, […]

ಮುಂದೆ ಓದಿ