ಸವಿತಾ ಜೈನ್ ಮೆಡಿಕಲ್ ಶಾಪ್‌ನಲ್ಲಿ ಸಹಾಯಕರಾಗಿದ್ದ ದಾವಣಗೆರೆಯ ಸವಿತಾ ಜೈನ್ ಅವರು ಇಂದು ಜೆನರಿಕ್ ಔಷಧ ಗಳ ಸಗಟು ವ್ಯಾಪಾರದಲ್ಲಿ ತೊಡಗಿಕೊಂಡಿದ್ದಾರೆ. ಕಠಿಣ ಶ್ರಮವಹಿಸಿ, ನಿಷ್ಠೆಯಿಂದ ಕೆಲಸ ಮಾಡಿ ಒಂದು ಹಂತ ತಲುಪಿದ್ದಾರೆ. ಇತ್ತೀಚಿಗೆ ‘ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿ’ಗೆ ಭಾಜನರಾಗಿ, ಮಾಲ್ದೀವ್ಸ್ ದೇಶದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದರು. ನಾನು ಸವಿತಾ ಜೈನ್. ಹುಟ್ಟಿದ್ದು 1974ರಲ್ಲಿ. ಓದಿದ್ದು ಕೇವಲ 10ನೇ ತರಗತಿಯ ತನಕ. ಕನ್ನಡ ಮಾಧ್ಯಮದಲ್ಲಿವಿದ್ಯಾಭ್ಯಾಸ. ದಾವಣಗೆರೆಯಲ್ಲಿ ವಾಸ. ಬಾಲ್ಯದ ವಿಶೇಷ ಅನುಭವ ಅಂತ ಏನು ಇರಲಿಲ್ಲ. ಎಂಟನೇ […]