ನಾಲ್ಕು ದಶಕಗಳ ಅನಂತರವೂ ಭೋಪಾಲ್ ಸಂತ್ರಸ್ತರ ಬದುಕು ಸಂಕಷ್ಟದಲ್ಲೇ ಇದೆ. ಜೀವ ಕಳೆದುಕೊಂಡವರು ಒಂದೆಡೆಯಾದರೆ, ಉಳಿದವರು ಜೀವಚ್ಚದಂತೆ ಬದುಕುತ್ತಿರುವ ನಿದರ್ಶನಗಳಿವೆ. ಅಷ್ಟು ಸುಲಭವಾಗಿ ಗುಣವಾಗುವ ಗಾಯವಿದಲ್ಲ ಎನ್ನುವುದನ್ನು ಆ ದುರಂತದ ತೀವ್ರತೆಯೇ ಎತ್ತಿ ಹೇಳುತ್ತದೆ. ಇದು ಕೈಗಾರಿಕಾ ಮಾಲಿನ್ಯದ ವಿಷಯವೆಂದು ತಳ್ಳಿ ಹಾಕುವಂತಿಲ್ಲ. ಜಲ, ವಾಯು, ಭೂಮಿ ಮೊದಲಾದ ಯಾವುದೇ ರೀತಿಯ ಮಾಲಿನ್ಯವೂ ಜಗತ್ತಿಗೆ ಮಾರಕ ಎಂಬ ಸಂದೇಶ ಈ ಅರಿವಿನ ದಿನದ್ದು. ಹೀಗಾಗಿಯೇ ಪ್ರತಿ ವರ್ಷ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನವನ್ನು (National Pollution Prevention Day) ಆಚರಿಸಲಾಗುತ್ತದೆ.