Thursday, 15th May 2025

ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಪಿ.ಬಿ.ಸಾವಂತ್ ಇನ್ನಿಲ್ಲ

ಮುಂಬೈ: ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ, ಭಾರತೀಯ ಪತ್ರಿಕಾ ಮಂಡಳಿಯ ಮಾಜಿ ಅಧ್ಯಕ್ಷ ಪಿ.ಬಿ.ಸಾವಂತ್  (91) ಸೋಮವಾರ ನಿಧನರಾದರು. ಹೃದಯಾಘಾತದಿಂದಾಗಿ ಸೋಮವಾರ ಪುಣೆಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ಮಂಗಳವಾರ ಪುಣೆಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಪುಣೆಯಲ್ಲಿ ನಡೆದ ಮೊದಲ ಎಲ್ಗಾರ್ ಪರಿಷತ್ ಸಭೆಯ ಅಧ್ಯಕ್ಷತೆಯನ್ನು ಪಿ.ಬಿ.ಸಾವಂತ್ ವಹಿಸಿದ್ದರು. ಶಿಸ್ತುಬದ್ಧ ನ್ಯಾಯ ಮೂರ್ತಿಗಳೆಂದು ಹೆಸರಾಗಿದ್ದ ಪಿ ಬಿ ಸಾವಂತ್ ಹಲವು ಮಹತ್ವದ ತೀರ್ಪುಗಳನ್ನು ನೀಡಿದ್ದರು. 1995 ರಲ್ಲಿ ನಿವೃತ್ತಿಯಾದ ನಂತರ ಅನೇಕ ಜನಪರ ಹೋರಾಟಗಳಲ್ಲಿ […]

ಮುಂದೆ ಓದಿ