ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಕೌನ್ಸೆಲಿಂಗ್ ತಜ್ಞೆ ಪರಿಮಳಾ ಜಗ್ಗೇಶ್ ಸಂವಾದ – ೧೪೩ ಬೆಂಗಳೂರು: ಈ ಪ್ರಪಂಚದಲ್ಲಿ ಮಾತು ಎಂಬುದು ಅತ್ಯಂತ ಪ್ರಭಾವಶಾಲಿ. ಮಕ್ಕಳು ಆಲದಮರ ಆಗುವ (ಉತ್ತಮವಾಗಿ ಬೆಳೆಯುವ) ಶಕ್ತಿ ತಂದೆ, ತಾಯಿಯ ಮಾತಿನಲ್ಲಿದೆ. ಅದೇ ರೀತಿ ಆತ್ಮವಿಶ್ವಾಸ ಕುಗ್ಗಿಸುವ ಶಕ್ತಿಯೂ ಇದೆ. ಹೀಗಾಗಿ ಪೋಷಕರು ಮಕ್ಕಳೊಂದಿಗೆ ಮಾತಿನ ವಿಚಾರದಲ್ಲಿ ಎಚ್ಚರಿಕೆಯಿಂದ ವ್ಯವಹರಿಸಬೇಕು ಎಂದು ಕೌನ್ಸೆಲಿಂಗ್ ತಜ್ಞೆ ಪರಿಮಳಾ ಜಗ್ಗೇಶ್ ಹೇಳಿ ದ್ದಾರೆ. ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಶುಕ್ರವಾರ ವಿಶೇಷ ಅತಿಥಿಯಾಗಿ ಮಾತನಾಡಿದ ಅವರು, ಮಕ್ಕಳೊಂದಿಗೆ ಪೋಷಕರ ಸಂವಹನ ಅವರ ಬೆಳವಣಿಗೆಗೆ […]