ಪಾರಾದೀಪ್: ಕಾಲುಗಳಿಗೆ ಕ್ಯಾಮೆರಾ ಮತ್ತು ಮೈಕ್ರೊಚಿಪ್ ಸಾಧನಗಳನ್ನು ಜೋಡಿಸಲಾಗಿರುವ ಪಾರಿವಾಳ ವೊಂದು ಜಗತ್‌ಸಿಂಗ್‌ಪುರ ಜಿಲ್ಲೆಯ ಪಾರಾದೀಪ ಕರಾವಳಿಯಲ್ಲಿ ಮೀನುಗಾರಿಕೆ ದೋಣಿಗೆ ಸಿಕ್ಕಿಬಿದ್ದಿದೆ. 10 ದಿನಗಳ ಹಿಂದೆ ಕೊನಾರ್ಕ್‌ನಿಂದ ಸುಮಾರು 35 ಕಿ.ಮೀ. ದೂರದ ಕರಾವಳಿಯಲ್ಲಿ ಲಂಗರು ಹಾಕಿದ್ದ ಮೀನುಗಾರಿಕೆ ದೋಣಿಯಲ್ಲಿ ಈ ಪಾರಿವಾಳ ಸಿಕ್ಕಿಬಿದ್ದಿತ್ತು. ಈ ಪಾರಿವಾಳವನ್ನು ಬೇಹುಗಾರಿಕೆಗೆ ಬಳಸುತ್ತಿರಬಹು ದೆಂದು ಪೊಲೀಸರು ಶಂಕಿಸಿದ್ದಾರೆ. ಸಮುದ್ರದಲ್ಲಿ ಮೀನುಗಾರಿಕೆ ನಡೆಸುವಾಗ ದೋಣಿ ಮೇಲೆ ಕುಳಿತಿದ್ದ ಈ ಪಾರಿವಾಳವನ್ನು ಬೆಹೆರಾ ಎಂಬುವವರು ಸೆರೆ ಹಿಡಿದಿದ್ದರು. ಪಾರಿವಾಳಕ್ಕೆ ಅಕ್ಕಿ ನುಚ್ಚನ್ನು ಆಹಾರವಾಗಿ […]