Monday, 12th May 2025

ಅಗ್ನಿ ಅವಘಡ: ಪೇಂಟ್, ರಾಸಾಯನಿಕ ತಯಾರಿಕಾ ಕಾರ್ಖಾನೆ ಸುಟ್ಟು ಭಸ್ಮ

ಪಾಲ್ಘರ್: ಮಹಾರಾಷ್ಟ್ರ ರಾಜ್ಯದ ಪಾಲ್ಘರ್ ಜಿಲ್ಲೆಯ ಬೋಯಿಸಾರ್ ಕೈಗಾರಿಕಾ ಪ್ರದೇಶದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಪೇಂಟ್ ಮತ್ತು ರಾಸಾಯನಿಕ ಗಳನ್ನು ತಯಾರಿಸುವ ಕಾರ್ಖಾನೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಬೋಯಿಸಾರ್‌ನ ತಾರಾಪುರ ಎಂಐಡಿಸಿಯಲ್ಲಿರುವ ಘಟಕದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಘಟಕದ ಮುಖ್ಯಸ್ಥ ವಿವೇಕಾನಂದ ಕದಂ ತಿಳಿಸಿದ್ದಾರೆ. ‘ದೊಡ್ಡದಾಗಿಯೇ ಬೆಂಕಿ ಆವರಿಸಿ ದೂರಕ್ಕೆ ಜ್ವಾಲೆಗಳು ಕಾಣಿಸುತ್ತಿದ್ದವು. ಬಣ್ಣಗಳನ್ನು ತುಂಬಿದ್ದ ಹಲವಾರು ಡ್ರಮ್‌ಗಳು ಸ್ಫೋಟಗೊಂಡವು. ಗಣೇಶ ಚತುರ್ಥಿ ನಿಮಿತ್ತ ಶುಕ್ರವಾರ ರಜಾದಿನವಾಗಿದ್ದರಿಂದ ಸ್ಥಳದಲ್ಲಿ […]

ಮುಂದೆ ಓದಿ