Tuesday, 13th May 2025

ಆಪರೇಷನ್ ಅಜಯ್: ಇಸ್ರೇಲ್‌ನಿಂದ 212 ಭಾರತೀಯ ಪ್ರಜೆಗಳ ಸ್ಥಳಾಂತರ

ನವದೆಹಲಿ: ಇಸ್ರೇಲ್‌ನಿಂದ 212 ಭಾರತೀಯ ಪ್ರಜೆಗಳನ್ನು ಕರೆತರುವ ಆಪರೇಷನ್ ಅಜಯ್ ಅಡಿಯಲ್ಲಿ ಮೊದಲ ಚಾರ್ಟರ್ ಫ್ಲೈಟ್ ಶುಕ್ರವಾರ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಇಸ್ರೇಲ್‌ನಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಮರಳಿ ಕರೆತರಲು ಆಪರೇಷನ್ ಅಜಯ್‌ನ ಭಾಗವಾಗಿ ಭಾರತವು ಚಾರ್ಟರ್ಡ್ ವಾಣಿಜ್ಯ ವಿಮಾನ ಗಳನ್ನು ನಿರ್ವಹಿಸಲಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿದ್ದು, ಮಿಲಿಟರಿ ವಿಮಾನಗಳು ಸದ್ಯಕ್ಕೆ ಸ್ಟ್ಯಾಂಡ್‌ಬೈನಲ್ಲಿಯೇ ಇರುತ್ತವೆ. “ಟೆಲ್ ಅವಿವ್‌ನಿಂದ ವಿಮಾನ ಟೇಕಾಫ್ ನಮ್ಮ ವಿಮಾನವನ್ನು ಲ್ಯಾಂಡಿಂಗ್ ಮಾಡಲು ಅನುಮತಿಗೆ ಒಳಪಟ್ಟಿರು ತ್ತದೆ” ಎಂದು ಮೂಲಗಳು ತಿಳಿಸಿವೆ. […]

ಮುಂದೆ ಓದಿ