Saturday, 10th May 2025

ನರ್ಸಿಂಗ್ ಮರುಪರೀಕ್ಷೆಗೆ ವಿರೋಧ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪ್ರತಿಭಟನೆ

ದಾವಣಗೆರೆ: ನರ್ಸಿಂಗ್ ಮರುಪರೀಕ್ಷೆ ನಡೆಸಬಾರದು ಎಂದು ಆಗ್ರಹಿಸಿ ಅಖಿಲ ಭಾರ ತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ನರ್ಸಿಂಗ್ ವಿದ್ಯಾರ್ಥಿಗಳು ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಹಾಗೆಯೇ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಡಿಸೆಂಬರ್ 22 ರಂದು ನರ್ಸಿಂಗ್ ಪರೀಕ್ಷೆಗಳು ಪ್ರಾರಂಭವಾಗಿದ್ದು, ಡಿಸೆಂಬರ್‌ 25ಕ್ಕೆ ಅಂತ್ಯಗೊಂಡಿವೆ. ರಾಜ್ಯದಲ್ಲಿ ಒಟ್ಟು 88,000 ವಿದ್ಯಾರ್ಥಿಗಳು ಶ್ರಮಪಟ್ಟು ಓದಿ ಪರೀಕ್ಷೆ ಗಳನ್ನು ಬರೆದಿದ್ದಾರೆ. ಆದರೆ ಬೆಂಗಳೂರಿನ ಬಾಣಸವಾಡಿಯ ಕೆಲವು ಪರೀಕ್ಷಾ ಕೇಂದ್ರ ಗಳಲ್ಲಿ ನಕಲು ನಡೆದಿದೆ ಎಂದು ಮರುಪರೀಕ್ಷೆ ನಡೆಸಲಾಗುತ್ತಿದೆ. […]

ಮುಂದೆ ಓದಿ