Wednesday, 14th May 2025

ಬ್ಯಾಡ್ಮಿಂಟನ್ ದಂತಕತೆ ನಂದು ನಾಟೇಕರ್ ನಿಧನ

ಮುಂಬೈ: ಭಾರತದ ಬ್ಯಾಡ್ಮಿಂಟನ್ ದಂತಕತೆ ನಂದು ನಾಟೇಕರ್(88) ಅವರು ಪುಣೆಯಲ್ಲಿ ನಿಧನರಾದರು. 1953 ರಲ್ಲಿ ತಮ್ಮ 20 ನೇ ವಯಸ್ಸಿನಲ್ಲಿ ಭಾರತವನ್ನು ಪ್ರತಿನಿಧಿಸಿದರು. ನಾಟೇಕರ್ ಸಾಂಗ್ಲಿಯಲ್ಲಿ ಜನಿಸಿದರು. ಭಾರತದ ಆರಂಭಿಕ ಬ್ಯಾಡ್ಮಿಂಟನ್ ತಾರೆಗಳಲ್ಲಿ ಒಬ್ಬರಾದ ಅವರು ಕ್ರೀಡಾ ಉತ್ಕೃಷ್ಟತೆಗಾಗಿ ಅರ್ಜುನ ಪ್ರಶಸ್ತಿ ಪಡೆದ ಮೊದಲ ಕ್ರೀಡಾಪಟು. ಅಂತರ್ ರಾಷ್ಟ್ರೀಯ ಪದಕ ಗಳಿಸಿದ ಹಾಗೂ ಆಲ್ ಇಂಗ್ಲೆಂಡ್‌ನ ಕ್ವಾರ್ಟರ್ ಫೈನಲ್‌ಗೆ ಕಾಲಿಟ್ಟ ಮೊದಲ ಭಾರತೀಯ ಬ್ಯಾಡ್ಮಿಂಟನ್ ಆಟಗಾರನಾಗಿ ಆರು ರಾಷ್ಟ್ರೀಯ ಪ್ರಶಸ್ತಿಗಳನ್ನು ಕೂಡ ಗೆದ್ದುಕೊಂಡಿದ್ದರು.

ಮುಂದೆ ಓದಿ