Sunday, 11th May 2025

ಆಹಾರವೆಂದು ಕೈ ಬಾಂಬ್ ತಿಂದ ಹಸು, ಬಾಯಿ ಸಂಪೂರ್ಣ ಛಿದ್ರ

ಕಾರವಾರ: ಮುಂಡಗೋಡದ ಸನವಳ್ಳಿ ಪ್ಲಾಟಿನ ಅಪ್ಪು ನಾರಾಯಣಸ್ವಾಮಿ ನಾಯರ ಎಂಬವರಿಗೆ ಸೇರಿದ ಆಕಳು ಜಲಾಶಯದ ಹತ್ತಿರ ಮೇಯುತ್ತಿದ್ದಾಗ ನೆಲದಲ್ಲಿ ಬಿದ್ದಿದ್ದ ಕೈಬಾಂಬ್‌ ಅನ್ನು ಆಹಾರವೆಂದು ತಿನ್ನಲು ಮುಂದಾಗಿದ್ದು, ಈ ವೇಳೆ ಬಾಂಬ್ ಸ್ಫೋಟಗೊಂಡಿದೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ಕಾಡುಪ್ರಾಣಿ ಬೇಟೆಗೆಂದು ಮುಂಡಗೋಡ ತಾಲೂಕಿನ ಸನವಳ್ಳಿ ಜಲಾಶಯದ ಬಳಿ ಕೈಬಾಂಬ್‌ ಇಡಲಾಗಿತ್ತು. ಪರಿಣಾಮ ಆಕಳಿನ ಬಾಯಿ ಸಂಪೂರ್ಣ ಛಿದ್ರಗೊಂಡಿದ್ದು, ಮೂಖ ಪ್ರಾಣಿಯ ವೇದನೆ ನೋಡಲಾಗದ ಸ್ಥಿತಿಗೆ ತಲುಪಿದೆ. ಬಾಯಿ, ನಾಲಿಗೆ ಕಳೆದುಕೊಂಡು ಆಕಳು ನರಕಯಾತನೆ ಅನುಭವಿಸುವಂತಾಗಿದೆ. ಅದೃಷ್ಟವಶಾತ್ ದುರ್ಘಟನೆಯಿಂದ ಸ್ವಲ್ಪದರಲ್ಲೇ […]

ಮುಂದೆ ಓದಿ