Sunday, 11th May 2025

ಶಿರ ಇಲ್ಲದ ಭಾರತದ ಭೂಪಟ ಪ್ರಕಟ: ಕ್ಷಮೆಯಾಚಿಸಿದ ಮೋಟೋಜಿಪಿ

ಗ್ರೇಟರ್ ನೋಯ್ಡಾ: ಮೋಟೋ ರೇಸ್​ ಸಂಸ್ಥೆ ದೊಡ್ಡ ಎಡವಟ್ಟು ಮಾಡಿದೆ. ಭಾರತ್ ಜಿಪಿ ಎಂದು ಮರುನಾಮಕರಣ ಮಾಡಲಾದ ಇಂಡಿಯನ್ ಆಯಿಲ್ ಗ್ರ್ಯಾನ್​ ಪ್ರಿ ಆಫ್ ಇಂಡಿಯಾ ವಿವಾದಕ್ಕೆ ಗುರಿಯಾಗಿದೆ. ಲೈವ್‌ಸ್ಟ್ರೀಮ್ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳಿಲ್ಲದ್ದ ಭಾರತದ ನಕ್ಷೆಯನ್ನು ನೋಡಿ ಮೋಟೋಜಿಪಿಯ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಶಿರವೇ ಇಲ್ಲದ ಭಾರತದ ಭೂಪಟವನ್ನು ಪ್ರಕಟಿಸಿ ಮೋಟೋ ಜಿಪಿ ಆಯೋಜಕರು ಎಡವಟ್ಟು ಮಾಡುಕೊಂಡಿದ್ದಾರೆ. ಇದು ವಿವಾದಕ್ಕೆ ಕಾರಣ ವಾಗುತ್ತಿದ್ದಂತೆ ಮೋಟೋಜಿಪಿ ತರಾತುರಿಯಲ್ಲಿ ತನ್ನ ತಪ್ಪನ್ನು ಸರಿಪಡಿಸಿದೆ. […]

ಮುಂದೆ ಓದಿ