Mika Singh: ಸಂದರ್ಶನವೊಂದರಲ್ಲಿ ಅನಂತ್ ಅಂಬಾನಿ (Anant Ambani) ಮದುವೆ ಬಗ್ಗೆ ಮಾತನಾಡಿರುವ ಮಿಕಾ ಸಿಂಗ್, ಅನಂತ್ ಅಂಬಾನಿ ಮದುವೆಯ ಸಂದರ್ಭದಲ್ಲಿ ನನಗೆ ಬೇಸರ ಉಂಟಾಗಿದೆ ಅಂದಿದ್ದಾರೆ. ನನಗೆ ಮದುವೆ ಸಂಭ್ರಮದಲ್ಲಿ ಹಾಡುವ ಅವಕಾಶ ಸಿಕ್ಕಿತ್ತು. ಆದ್ರೆ ಅಲ್ಲಿ ನನಗೆ ನಿರಾಶೆಯಾಗಿದೆ ಎಂದಿದ್ದಾರೆ. ಯಾಕೆ ಎಂದು ಸಂದರ್ಶಕರು ಪ್ರಶ್ನಿಸಿದಾಗ ಎಲ್ಲರಿಗೂ ಅಂಬಾನಿ ಕುಟುಂಬ ವಾಚ್ ನೀಡಿದೆ. ಆದ್ರೆ ನನಗೆ ನೀಡಲಿಲ್ಲ. ಇದು ನನಗೆ ಬೇಸರ ತರಿಸಿದೆ ಎಂದು ಮಿಕಾ ಸಿಂಗ್ ಹೇಳಿದ್ದಾರೆ.