Thursday, 15th May 2025

ಹಾಂಕಾಂಗ್‌ನಲ್ಲಿ ಐವರು ಸಂಪಾದಕರ ಬಂಧನ

ಹಾಂಗ್‌ಕಾಂಗ್‌: ರಾಷ್ಟ್ರೀಯ ಭದ್ರತಾ ಕಾಯ್ದೆಯನ್ವಯ ಗುರುವಾರ ಐವರು ಸಂಪಾದಕರು ಮತ್ತು ಕಾರ್ಯ ನಿರ್ವಾಹಕರನ್ನು, ವಿದೇಶಿ ಶಕ್ತಿಗಳ ಜೊತೆಗೆ ಕೈಜೋಡಿಸಿದ ಆರೋಪದಡಿ ಪೊಲೀಸರು ಬಂಧಿಸಿದ್ದಾರೆ. ಇದೇ ಮೊದಲಿಗೆ ಮಾಧ್ಯಮ ಪ್ರತಿನಿಧಿಗಳ ವಿರುದ್ಧ ಈ ಕಾಯ್ದೆ ಬಳಕೆಯಾಗಿದೆ. ಚೀನಾ ತನ್ನ ಬಲ ಸ್ಥಾಪಿಸುವ ನಿಟ್ಟಿನಲ್ಲಿ ಇದು ಇನ್ನೊಂದು ಹೆಜ್ಜೆಯಾಗಿದೆಯೆನ್ನಲಾಗಿದೆ. 30ಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿರುವ ದಾಖಲೆ ಇದ್ದು, ಚೀನಾ ಮತ್ತು ಹಾಂಗ್‌ಕಾಂಗ್ ವಿರುದ್ಧ ವಿದೇಶಗಳು ನಿರ್ಬಂಧ ಹೇರುವಂತೆ ಪ್ರೇರೇಪಿಸುವಲ್ಲಿನ ಸಂಚು ಇದಾಗಿದೆ ಎಂದು ಪೊಲೀಸರು ತಿಳಿದ್ದಾರೆ.  

ಮುಂದೆ ಓದಿ