Monday, 12th May 2025

#MadhyapradeshCM

ಮಧ್ಯಪ್ರದೇಶ ಮುಖ್ಯಮಂತ್ರಿಗೆ ಕರೋನಾ ಸೋಂಕು ದೃಢ

ಭೋಪಾಲ್‌: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾನ್ ಅವರಿಗೆ ಕರೋನಾ ಸೋಂಕು ದೃಢಪಟ್ಟಿರುವುದಾಗಿ ಘೋಷಿಸಿದ್ದಾರೆ. ಟ್ವೀಟ್‌ ಮೂಲಕ ವಿಷಯ ತಿಳಿಸಿದ ಸಿಎಂ, ಸೌಮ್ಯ ರೋಗ ಲಕ್ಷಣಗಳನ್ನ ಹೊಂದಿರುವುದರಿಂದ ಮನೆಯಲ್ಲಿ ಪ್ರತ್ಯೇಕವಾಗಿರುವುದಾಗಿ ತಿಳಿಸಿದ್ದಾರೆ. ನಾನು ಆರ್‌ಟಿಪಿಸಿಆರ್ ಪರೀಕ್ಷೆ ತೆಗೆದುಕೊಂಡಿದ್ದು, ಕೋವಿಡ್ ಪಾಸಿಟಿವ್ ಆಗಿದೆ. ಸಾಮಾನ್ಯ ರೋಗಲಕ್ಷಣಗಳಿದ್ದು, ಕೋವಿಡ್-19 ರ ಮಾರ್ಗಸೂಚಿ ಗಳನ್ನ ಅನುಸರಿಸಿ ನಾನು ಪ್ರತ್ಯೇಕಿಸಿಕೊಂಡಿ ದ್ದೇನೆ’ ಎಂದಿದ್ದಾರೆ. ಮುಂಬರುವ ಎಲ್ಲಾ ಕೆಲಸಗಳನ್ನ ವರ್ಜುವಲ್ ಮಾಡಲಿದ್ದು, ಸಂತ ಶಿರೋಮಣಿ ರವಿದಾಸ್ ಜಯಂತಿಯ ಕಾರ್ಯಕ್ರಮದಲ್ಲಿ ವರ್ಜುವಲ್ ಆಗಿ ಭಾಗಿಯಾಗುತ್ತೇನೆ’ ಎಂದಿದ್ದಾರೆ.

ಮುಂದೆ ಓದಿ