ಹಾಡು ಹೇಳಿದ ಆ ಮಧುರ ಕಂಠವು ಸದಾ ಕಾಡತೊಡಗಿತು. ಆ ನೆಪದಲ್ಲೇ ಸ್ನೇಹ ಮೂಡಿತು. ಪ್ರೀತಿ ಹುಟ್ಟಿತು. ರಮೇಶ ಇಟಗೋಣಿ ಪ್ರತಿಯೊಬ್ಬರ ಜೀವನದಲ್ಲಿ ಪ್ರೀತಿ ತನ್ನ ಚಾಪು ಮೂಡಿಸಿದರೂ ಅದರ ರೀತಿ ಮಾತ್ರ ಬೇರೆ ಬೇರೆ ಆಗಿರುತ್ತದೆ. ಅದೇನೋ ಯಾಕೋ ಗೊತ್ತಿಲ್ಲಾ ನಾನಾಯಿತು, ನನ್ನ ಕೆಲಸ ಆಯಿತು ಅಂತ ನನ್ನ ಪಾಡಿಗೆ ನಾನಿದ್ದೆ. ಬ್ಯೂಸಿಯಲ್ಲೂ ನನ್ನ ಜೀವನದಲ್ಲಿ ಇದ್ದಕ್ಕಿದ್ದಂತೆ ಕಾಲಿಟ್ಟು ಇರುಳಲ್ಲಿ ದೀಪವಿಡಿದು ನಿಂತು ದಾರಿತೋರಿದವಳು ಆ ಹುಡುಗಿ. ಅಂದು ಕಾಲೇಜಿನಲ್ಲಿ ಕಾರ್ಯಕ್ರಮ ಒಂದು ನಡೆದಿತ್ತು. ನಾನು […]