Lohri 2025: ಮಕರ ಸಂಕ್ರಾಂತಿ ಮಂಗಳವಾರ (ಜ. 14) ನಡೆಯಲಿದ್ದು, ಅದರ ಮುನ್ನ ದಿನವಾದ ಸೋಮವಾರ ಉತ್ತರ ಭಾರತದಲ್ಲಿ ಲೋಹ್ರಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದಿಲ್ಲಿ ಸಮೀಪದ ನರೈನಾ ಹಳ್ಳಿಗೆ ತೆರಳಿದ್ದು, ಅಲ್ಲಿನ ಜನರೊಂದಿಗೆ ಬೆರೆತು ಹಬ್ಬವನ್ನು ಇನ್ನಷ್ಟು ವಿಶೇಷವಾಗಿಸಿದ್ದಾರೆ.