Wednesday, 14th May 2025

ನಾಲ್ಕು ಅಂತಸ್ತಿನ ಕಟ್ಟಡ ಕುಸಿತ: ಇಬ್ಬರ ಸಾವು, 12 ಮಂದಿಗೆ ಗಾಯ

ಮುಂಬೈ: ಮುಂಬೈನ ಕುರ್ಲ ಪ್ರದೇಶದ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಇಬ್ಬರು ಮೃತಪಟ್ಟಿದ್ದು, 12 ಮಂದಿ ಗಾಯಗೊಂಡಿ ದ್ದಾರೆ. ಕುರ್ಲಾದ ನಾಯಕ್ ನಗರ ಸೊಸೈಟಿಯಲ್ಲಿರುವ ವಸತಿ ಕಟ್ಟಡದ ಒಂದು ಭಾಗ ಕಳೆದ ಮಧ್ಯರಾತ್ರಿ ಕುಸಿದು ಬಿದ್ದಿದೆ ಎಂದು ವರದಿಯಾಗಿದೆ. ಗಾಯಾಳುಗಳನ್ನು ಘಾಟ್‌ಕೋಪರ್ ಮತ್ತು ಸಿಯಾನ್‌ನಲ್ಲಿರುವ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಘಾಟ್‌ಕೋಪರ್‌ನ ರಾಜ ವಾಡಿ ಆಸ್ಪತ್ರೆಗೆ ಕರೆತಂದವ ರಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಅವಶೇಷಗಳಡಿ ಸಿಲುಕಿದ್ದ ಮಹಿಳೆಯನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಂಡ ರಕ್ಷಿಸಿದೆ. ಅವಶೇಷಗಳಡಿಯಿಂದ ಮಹಿಳೆಯನ್ನು ಜೀವಂತವಾಗಿ ಹೊರತರುವಾಗ […]

ಮುಂದೆ ಓದಿ