Tuesday, 13th May 2025

ಕುಣಿಗಲ್ ನಾಗಭೂಷಣ್ ಪತ್ನಿ ಸರ್ವಮಂಗಳ ವಿಧಿವಶ

ಬೆಂಗಳೂರು : ಕನ್ನಡ ಚಿತ್ರ ರಂಗದ ಹಿರಿಯ ನಟ ಕುಣಿಗಲ್ ನಾಗಭೂಷಣ್ ಪತ್ನಿ ಸರ್ವಮಂಗಳ ವಿಧಿವಶರಾಗಿದ್ದಾರೆ. ನಟನೆ, ಸಂಭಾಷಣೆ ಹಾಗೂ ನಿರ್ದೇಶನದಿಂದ ಜನಪ್ರಿಯತೆ ಗಳಿಸಿದ್ದ ಕುಣಿಗಲ್ ನಾಗಭೂಷಣ್ 2013ರಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು. 7 ವರ್ಷದ ಬಳಿಕ ಪತ್ನಿ ಸರ್ವಮಂಗಳ ವಿಧಿವಶರಾಗಿದ್ದಾರೆ‌. 68 ವರ್ಷ ವಯಸ್ಸಾಗಿದ್ದ, ಸರ್ವಮಂಗಳ ಶುಕ್ರವಾರ ರಾತ್ರಿ 8.30ರ ಸುಮಾರಿಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇನ್ನು ಸರ್ವ ಮಂಗಳ ಕೂಡ ಸಿನಿಮಾದಲ್ಲಿ ನಟಿಸಿದ್ದು, ‘ಭಂಡ ನನ್ನ ಗಂಡ’ ‘ಹೆಂಡ್ತಿಯರೇ ಹುಶಾರ್’ ಸೇರಿದಂತೆ ಹಲವು ಸಿನಿಮಾ ಗಳಲ್ಲಿ ನಟಿಸಿದ್ದಾರೆ. […]

ಮುಂದೆ ಓದಿ