ಹಸುಗೂಸುಗಳಿಗೆ ಎದೆ ಹಾಲು ನೀಡುವುದು ಪುರಾತನ ಸಂಸ್ಕೃತಿ. ಆದರೆ, ಈಚೆಗೆ, ನಾಗರಿಕತೆಯ ಸೋಗಿನಲ್ಲಿ, ಈ ಒಂದು ಚಟುವಟಿಕೆಯಿಂದ ದೇಹದ ಸೌಂದರ್ಯ ಕೆಡುವುದೆಂಬ ತಪ್ಪು ತಿಳಿವಳಿಕೆ ಅಲ್ಲಲ್ಲಿ ಹುಟ್ಟಿದೆ. ಅದು ತಪ್ಪು. ಮಗುವಿಗೆ ಎದೆಹಾಲು ಕೊಡುವುದರಿಂದ, ಮಗುವಿನ ದೇಹದಲ್ಲಿ ಶಕ್ತಿಯನ್ನು ಹುಟ್ಟುಹಾಕಬಹುದು. ಡಾ.ಕರವೀರ ಪ್ರಭು ಕ್ಯಾಲಕೊಂಡ ಮಗುವಿಗೆ ಎದೆ ಹಾಲು ಅಮೃತ ಸಮಾನ. ಇದರಲ್ಲಿ ಎರಡು ಮಾತಿಲ್ಲ. ಎದೆಹಾಲಿನ ಬದಲಾಗಿ ಪರ್ಯಾಯ ಆಹಾರ ಆರಂಭಿಸಿ ದಾಗ ಮಗು ಹಲವಾರು ತೊಂದರೆಗಳಿಂದ ಬಳಲುತ್ತದೆ. ಇವುಗಳಲ್ಲಿ ಮುಖ್ಯವಾದವುಗಳು ಅತಿಸಾರ, ಅಪೌಷ್ಟಿಕತೆ ಮತ್ತು […]