Wednesday, 14th May 2025

ಮಾನವೀಯ ಮೌಲ್ಯ ಕಟ್ಟಿಕೊಡಬೇಕಿದೆ

ಕಳೆದ ಮೂರ‍್ನಾಲ್ಕು ದಿನಗಳಲ್ಲಿ ರಾಜ್ಯದಲ್ಲಿ ಮೂರು ಅಮಾನವೀಯ ಘಟನೆಗಳು ನಡೆದಿವೆ. ಪಾರ್ಶ್ವವಾಯುವಿಗೆ ಒಳಗಾಗಿ ಮೃತಪಟ್ಟಿದ್ದ ಮಹಾರಾಷ್ಟ್ರದ ಪುಣೆ ಮೂಲದ ವೃದ್ಧ ಮೂಲಚಂದ್ರ ಶರ್ಮಾ ಎಂಬುವವರ ಅಂತ್ಯಕ್ರಿಯೆಗೆ ವಿದೇಶಗಳಲ್ಲಿ ನೆಲೆಸಿರುವ ಅವರ ಮಕ್ಕಳು ಬರಲು ನಿರಾಕರಿಸಿದ್ದರಿಂದ ಚಿಕ್ಕೋಡಿ ಪೊಲೀಸರು, ಅಧಿಕಾರಿಗಳೇ ಸೇರಿ ಅಂತ್ಯಕ್ರಿಯೆ ನೆರವೇರಿಸುವಂತಾಗಿದೆ. ಇನ್ನೊಂದೆಡೆ ಹಾಸನ ಸಮೀಪದ ಅಕ್ಕಲವಾಡಿ ಎಂಬ ಗ್ರಾಮದಲ್ಲಿ ತನ್ನ ಮನೆ ಕಟ್ಟಲು ತಾಯಿಯ ಹೆಸರಿನಲ್ಲಿ ಸಾಲ ಪಡೆದಿದ್ದ ಮಗ, ತಾಯಿ ಸತ್ತರೆ ಸಾಲ ತೀರಿಸುವಂತಿಲ್ಲ ಎಂದುಕೊಂಡು, ತಂದೆ ತಾಯಿಗೆ ಆಹಾರದಲ್ಲಿ ವಿಷವಿಟ್ಟು ಕೊಂದಿದ್ದಾನೆ. […]

ಮುಂದೆ ಓದಿ